ಗದಗ: ಮಲಗಿದ್ದ ವೃದ್ಧನ ಮೇಲೆ ಕುಸಿದುಬಿದ್ದ ಛಾವಣಿ!

By Ravi Janekal  |  First Published Jun 10, 2024, 10:45 PM IST

ಮನೆಯಲ್ಲಿ ಮಲಗಿದ್ದ ವೇಳೆ ವೃದ್ಧನ ಮೇಲೆ ಛಾವಣಿ ಕುಸಿದುಬಿದ್ದ ಘಟನೆ ಗದಗ ನಗರದ ಖಾನತೋಟ ಬಡಾವಣೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಮಣ್ಣಿನಡಿ ಸಿಲುಕಿದ್ದ ವೃದ್ಧನನ್ನು ಯುವಕರ ತಂಡ ರಕ್ಷಣೆ ಮಾಡಿದೆ.


ಗದಗ (ಜೂ.10): ಮನೆಯಲ್ಲಿ ಮಲಗಿದ್ದ ವೇಳೆ ವೃದ್ಧನ ಮೇಲೆ ಛಾವಣಿ ಕುಸಿದುಬಿದ್ದ ಘಟನೆ ಗದಗ ನಗರದ ಖಾನತೋಟ ಬಡಾವಣೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಮಣ್ಣಿನಡಿ ಸಿಲುಕಿದ್ದ ವೃದ್ಧನನ್ನು ಯುವಕರ ತಂಡ ರಕ್ಷಣೆ ಮಾಡಿದೆ.

ರಾಮಣ್ಣ ಶಿಂಧೆ(85),ಛಾವಣಿ ಕುಸಿದು ಅವಶೇಷಗಳಡಿ ಸಿಲುಕಿದ್ದ ವೃದ್ಧ. ಹಲವು ದಿನಗಳಿಂದ ಮಳೆಯಾಗುತ್ತಿದೆ. ಇದರಿಂದ ಹಳೆ ಕಾಲದ ಮಣ್ಣಿನ ತೇವಗೊಂಡಿತ್ತು. ಇಂದು ಕುಸಿದು ಬಿದ್ದಿದೆ.

Tap to resize

Latest Videos

undefined

ಮನೆಯ ಛಾವಣಿ ಕುಸಿದು ಮಕ್ಕಳಿಬ್ಬರು ದಾರುಣ ಸಾವು!

ಪತ್ನಿ ರೇಣುಕಾ ಬಾಯಿ ಚಹಾ ತರಲು ಆಚೆ ಹೋಗಿದ್ದಾಗ ನಡೆದಿರುವ ದುರಂತ. ಮರಳಿ ಮನೆಗೆ ಬಂದು ನೋಡಿದಾಗ ಮಣ್ಣಿನಡಿಯಲ್ಲಿ ಸಿಲುಕಿದ್ದ ಪತಿಯನ್ನ ಕಂಡು ಸಹಾಯಕ್ಕೆ ಕೂಗಿದ್ದಾಳೆ. ಇದೇ ವೇಳೆ ವೃದ್ಧ ಮಹಿಳೆಯ ಕೂಗಾಟ ಕೇಳಿ ಸ್ಥಳಕ್ಕೆ ಬಂದ ಯುವಕರ ತಂಡ. ಮಣ್ಣಿನಡಿ ಸಿಲುಕಿದ್ದ ವೃದ್ಧನ ರಕ್ಷಣೆ ಮಾಡಿ ಬಳಿಕ ಆಟೋದಲ್ಲಿ ಜಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಯಾವುದೇ ಪ್ರಾಣಾಪಾಯ ಆಗಿಲ್ಲ. ಚಿಕಿತ್ಸೆ ಪಡೆಯುತ್ತಿರುವ ವೃದ್ಧ. ಯುವಕರ ಸಮಯಪ್ರಜ್ಞೆಯಿಂದ ಬದುಕುಳಿದ ಹಿರಿಜೀವ.

click me!