ಬೆಟ್ಟಿಂಗ್ ಭೂತಕ್ಕೆ ಕಾಂಗ್ರೆಸ್ ಕಾರ್ಯಕರ್ತ ಬಲಿ, 1 ಕೋಟಿ ಕಳಕೊಂಡ ಶ್ರೀಮಂತ!

By Gowthami K  |  First Published Jun 10, 2024, 4:07 PM IST

ಬೆಟ್ಟಿಂಗ್ ಭೂತಕ್ಕೆ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಬಲಿಯಾಗಿರುವ ಘಟನೆ ನಡೆದಿದೆ. ಸುಮಾರು 1 ಕೋಟಿ ರೂ ಬೆಟ್ಟಿಂಗ್ ಕಟ್ಟಿ ಕಳೆದುಕೊಂಡಿದ್ದನಂತೆ.


ಮೈಸೂರು (ಜೂ.10): ಬೆಟ್ಟಿಂಗ್ ಭೂತಕ್ಕೆ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಬಲಿಯಾಗಿರುವ ಘಟನೆ ನಡೆದಿದೆ. ಸಾಲದ ಹೊಡೆತಕ್ಕೆ ಬೇಸತ್ತು ಬಿಡದಿಯ ಧನಲಕ್ಷ್ಮೀ ಲಾಡ್ಜ್ ನಲ್ಲಿ ವ್ಯಕ್ತಿಯೊಬ್ಬ ನೇಣುಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೈಸೂರಿನಲ್ಲಿ ಸ್ವಾಮೀಜಿಯ ಭೀಕರ ಹತ್ಯೆ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದ ಸಹಾಯಕ!

Tap to resize

Latest Videos

undefined

ರಾಮನಗರ ತಾಲೂಕಿನ ಕೆಂಚನಕುಪ್ಪೆ ಗ್ರಾಮದ ಶಿವರಾಜು(44) ಮೃತ ದುರ್ದೈವಿ. ಐದಾರು ಲಾರಿಗಳ ಮಾಲೀಕರಾಗಿದ್ದ ಶಿವರಾಜು, ಬೆಟ್ಟಿಂಗ್ ಹುಚ್ಚಿಗೆ ಇಂದು ಬಲಿಯಾಗಿದ್ದಾನೆ. ಲೋಕಸಭಾ ಚುನಾವಣೆಯಲ್ಲಿ ಬೆಟ್ಟಿಂಗ್ ಕಟ್ಟಿ 1ಕೋಟಿಗೂ ಅಧಿಕ ಹಣ ಕಳೆದುಕೊಂಡಿದ್ದ. ಕಾಂಗ್ರೆಸ್ ಪರವಾಗಿ ಬೆಟ್ಟಿಂಗ್ ಆಡಿ ಹಣ ಕಳೆದುಕೊಂಡಿದ್ದ ಎಂದು ತಿಳಿದುಬಂದಿದೆ.

ಜಾತಿ ಪ್ರಮಾಣಪತ್ರ ರದ್ದು ಅಧಿಕಾರ ತಹಶೀಲ್ದಾರ್‌ಗಿಲ್ಲ: ಹೈಕೋರ್ಟ್ ಆದೇಶ

ತಾನು ಬೆಟ್‌ ಕಟ್ಟಿದ್ದ ಅಭ್ಯರ್ಥಿ ಸೋತ ಕಾರಣ ಸಾಲದ ಹೊಡೆತ ಹೆಚ್ಚಾಗಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಚುನಾವಣಾ ಫಲಿತಾಂಶ, ಗೆಲುವಿನ ಅಂತರಗಳ ಮೇಲೆ ಭಾರೀ ಬೆಟ್ಟಿಂಗ್ ದಂಧೆ ನಡೆದಿತ್ತು. ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕಿಂತಲ್ಲೂ ನೆರೆಯ ಮಂಡ್ಯ ಲೋಕಸಭಾ ಕ್ಷೇತ್ರದ ಮೇಲೆ ಬೆಟ್ಟಿಂಗ್ ದಂಧೆ ಹೆಚ್ಚಾಗಿತ್ತು.

click me!