ಬಡ್ಡಿ ದಂಧೆಗೆ ಅಮಾಯಕ ಜೀವ ಬಲಿ, ಹಣದ ದುರಾಸೆಗೆ ಸ್ನೇಹವನ್ನೇ ಕೊಂದ ಪಾಪಿ..!

By Suvarna News  |  First Published Apr 23, 2022, 7:16 PM IST

ಫೋಟೋ ಗ್ರಾಫರ್ ಜೀವನವನ್ನೇ ಹಾಳು ಮಾಡಿದ 'ಮೀಟರ್ ಬಡ್ಡಿ'..
ಬಡ್ಡಿ ದಂಧೆಕೋರನ ಅಟ್ಟಹಾಸಕ್ಕೆ ಅಮಾಯಕ ಜೀವ ಬಲಿ.. 
ಹಣದ ದುರಾಸೆಗೆ ಸ್ನೇಹವನ್ನೇ ಕೊಂದ ಪಾಪಿ..!


ವರದಿ: ಗಿರೀಶ್ ಕುಮಾರ್, ಏಷ್ಯಾನೆಟ್ ನ್ಯೂಸ್ ಗದಗ.
ಗದಗ, (ಏ.23) :
ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ್ದ ಯುವಕ ಚಿಕಿತ್ಸೆ ಫಲಿಸದೆ ಮೃತ ಪಟ್ಟಿದ್ದಾನೆ.. ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದ ಮೃತ್ಯುಂಜಯ್ ಬರಮಗೌಡರ್ (26) ಮೃತ ಯುವಕ. ಮಾರ್ಚ್ 26 ನೇ ತಾರೀಕು ನಿತ್ರಾಣ ಸ್ಥಿತಿಯಲ್ಲಿದ್ದ ಮೃತ್ಯುಂಜಯನನ್ನ ಸಂಬಂಧಿಕರು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ರು.. 28 ದಿನಗಳ ಜೀವನ್ಮರಣದ ಹೋರಾಟದ ಬಳಿಕ ಮೃತ್ಯುಂಜಯ ಮೃತಪಟ್ಟಿದ್ದಾನೆ.. 

ನಗರದ ಕೆಸಿ ರಾಣಿ ರಸ್ತೆಯ ಸಂಜೀವಿನಿ ಆಸ್ಪತ್ರೆ ಬಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಮೃತ್ಯುಂಜಯ, ಫೋಟೋಗ್ರಾಫರ್ ಆಗಿದ್ದ.. ಸಹೋದರ ಸಂತೋಷ ಜೊತೆ ಸೇರ್ಕೊಂಡು ಪುಟ್ಟದೊಂದು ಲ್ಯಾಬ್ ಇಡ್ಕೊಂಡು ಜೀವನ ನಡೆಸ್ತಿದ್ದ.. ಆರಂಭದಲ್ಲಿ ಫೋಟಗ್ರಫಿ ಕೈ ಹಿಡಿದಿತ್ತು.. ದುಡುಮೆ,  ದುಡ್ಡು ಎರಡೂ ಸರಿಯಾಗೇ ನಡೆದಿತ್ತು.. ಆದ್ರೆ ಎರಡ್ಮೂರು ವರ್ಷದಿಂದ ಲಾಕ್ ಡೌನ್ ನಿಂದಾಗಿ ಫೋಟೋಗ್ರಫಿ ಕೆಲಸ ಸಿಕ್ಕಲಿಲ್ಲ.. ಕ್ರಮೇಣ ಲ್ಯಾಬ್ ಬಂದ್ ಮಾಡುವ ಪರಿಸ್ಥಿತಿ ಎದುರಾಯ್ತು.. ಆರ್ಥಿಕ ಸಂಕಷ್ಟದಿಂದ ಮೃತ್ಯುಂಜಯ ಕುಗ್ಗಿ ಹೋಗಿದ್ದ.. ಜೀವನ ನಿರ್ವಹಣೆ ಕಷ್ಟವಾಗಿದ್ರಿಂದ ಸಾಲ ಪಡೆಯೋದಕ್ಕೆ ಮುಂದಾಗಿದ್ದ..

Latest Videos

undefined

ಬೆಂಗಳೂರು: ಶೀಲ‌ ಶಂಕಿಸಿ ಪತ್ನಿ ಕೊಲೆಗೈದ ಪತಿರಾಯ: ಕಳೆದೊಂದು ವಾರದಲ್ಲಿ 3ನೇ ಪ್ರಕರಣ

ಸ್ನೇಹಿತನಿಂದ ಬಡ್ಡಿ ಪಡೆದಿದ್ದೇ ಜೀವಕ್ಕೆ ಮುಳುವಾಯ್ತು..
ಮೃತ್ಯುಂಜಯ ಬರಮಗೌಡರ್ ಸ್ನೇಹಿತ ಉಮೇಶ್ ಸುಂಕದ್ ಬಳಿ 2 ಲಕ್ಷ ಸಾಲ ಇಸ್ಕೊಂಡಿದ್ದ.. ವಾರಕ್ಕೆ ಶೇಕಡ 10 ಬಡ್ಡಿ ದರದ ಲೆಕ್ಕದಲ್ಲಿ ಸಾಲ ಮಾಡಿದ್ದ ಅಂತಾ ಕುಟುಂಬ ತಿಳಿಸಿದೆ.. ಒಂದು ಲಕ್ಷ ರೂಪಾಯಿ ಹಿಂತಿರುಗಿಸಿದ್ದ ಮೃತ್ಯುಂಜಯ ಉಳಿದ 1 ಲಕ್ಷ ರೂಪಾಯಿ ಹಣ ಕೊಡೋದಾಗಿ ಹೇಳಿದ್ದ.. ಆದ್ರೆ, 1 ಲಕ್ಷ ರೂಪಾಯಿ ಬಡ್ಡಿಗೆ ಸರಿ ಹೋಯ್ತು.. ಉಳಿದ 2 ಲಕ್ಷ ಹಣ ಕೊಡುವಂತೆ ದುಂಬಾಲು ಬಿದ್ದಿದ್ದ.. 

ಬಡ್ಡಿ ಹಣಕ್ಕಾಗಿ ಗೃಹ ಬಂಧನ..
ಹಣ ವಾಪಾಸ್ ಕೊಡದ ಹಿನ್ನೆಲೆ ಮಾರ್ಚ್ 24 ನೇ ತಾರೀಕು ಮನೆ ಬಳಿ ಬಂದಿದ್ದ ಉಮೇಶ್, ಮೃತ್ಯುಂಜಯನನ್ನ ಕರೆದುಕೊಂಡು ಹೋಗಿದ್ದ.. ಬೆಟಗೇರಿಯ ಉಮೇಶ್ ಮನೆಯಲ್ಲೇ ಇಟ್ಕೊಂಡು ಬರೋಬ್ಬರು ಎರಡು ದಿನ ಚಿತ್ರ ಹಿಂಸೆ ನೀಡಿದ್ರಂತೆ.. ಅಲ್ದೆ, ನರಸಾಪುರ ರಸ್ತೆ ಜಮೀನಿಗೆ ಹರೆದುಕೊಂಡು ಹೋಗಿ ರಾತ್ರಿ ಮನಬಂದಂತೆ ಹೊಡೆದಿದ್ರಂತೆ.. ಗುತ್ತಿಗೆ, ಎದೆ, ಮರ್ಮಾಂಗ ಗುರಿಯಾಗಿಸಿಕೊಂಡು ಹೊಡೆದು ವಿಕೃತಿ ಮೆರೆದಿದ್ದಾರೆ.. ಕುಡಿದ ಅಮಲಿನಲ್ಲಿ ಉಮೇಶ್ ಆ್ಯಂಡ್ ಟೀಮ್ ಮೃತ್ಯುಂಜಯನ ಮೇಲೆ ಮನಬಂದಂತೆ ಹಲ್ಲೆ ಮಾಡಿತ್ತು..  ಉಮೇಶ್ ಸಹೋದರ ಉದಯ್, ಸ್ನೇಹಿತ ವಿಕ್ರಮ ಮೂವರು ಮೃತ್ಯುಂಜಯನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ರು.. ಮೃತ್ಯುಂಜಯ ಅದೇಗೋ ಅಲ್ಲಿಂದ ಬಿಡಿಸಿಕೊಂಡು ಬಂದಿದ್ದ.. ನಂತ್ರದಲ್ಲಿ ಪ್ರಕರಣ ಬೆಳಕಿಗೆ ಬಂದು ಆರೋಪಿ ಉಮೇಶ್, ಉದಯ್, ವಿಕ್ರಮ್ ನನ್ನ ಬಂಧಿಸಲಾಗಿತ್ತು.. 

ಸಾವು ಗೆದ್ದು ಬರಲಿಲ್ಲ 'ಮೃತ್ಯುಂಜಯ'.. ಬರೋಬ್ವರಿ 28 ದಿನಗಳ ಜೀವನ್ಮರಣದ ಹೋರಾಟದಲ್ಲಿ ಕೊನೆಗೂ ಮೃತ್ಯುಂಜಯ ಮೃತಪಟ್ಟಿದ್ದಾನೆ‌..  ನಗರದಲ್ಲಿದ್ದ ಏಕೈಕ ಮನೆಯನ್ನ ಮೃತ್ಯುಂಜಯ ಕುಟುಂಬ ಮಾರಿಕೊಂಡಿದೆ.. ಮೃತ್ಯುಂಜಯ ಹಾಗೂ ಸಹೋದರ ಸಂತೋಷನನ್ನ ಮದ್ವೆ ಮಾಡ್ಬೇಕು ಅನ್ಕೊಂಡಿದ್ದ ತಾಯಿಗೆ ಬರಸಿಡಿಲ ಆಘಾತ ನೀಡಿದಂತಾಗಿದೆ.. 

ಅನುಮಾನ ಮೂಡೊಸಿದ ಪೊಲೀಸರ ಹೇಳಿಕೆ..
ಬಡ್ಡಿ ವ್ಯವಹಾರಕ್ಕೆ ಹಲ್ಲೆಯಾದ ಬಗ್ಗೆ ಮಾಹಿತಿ ಇಲ್ಲ‌‌.. ಮೃತ್ಯುಂಜಯ ಹಾಗೂ ಉಮೇಶ್ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ರು‌.. ಮೃತ್ಯುಂಜಯ ಸರಿಯಾಗಿ ಕಂತು ತುಂಬಿರಲಿಲ್ಲ.. ಹೀಗಾಗಿ ಹಲ್ಲೆ ನಡೆದಿರಬಹುದು ಅನ್ನೋ ಮಾತನ್ನ ಪೊಲೀಸರು ಹೇಳ್ತಿದಾರೆ.. ಉಮೇಶ್ ಬಡ್ಡಿ ವ್ಯವಹಾರಸ್ಥ ಅನ್ನೋದು ಬೆಟಗೇರಿಯ ಅನೇಕರಿಗೆ ಗೊತ್ತು.. ಆದ್ರೂ ಪೊಲೀಸರು ಹೇಳ್ತಿರೋದೇ ಬೇರೆ.. 

ಅಪರಾಧಿಗಳಿಗೆ ಗಲ್ಲು ಸಿಕ್ಷೆಯಾಗಲಿ.. ಮೃತ್ಯುಂಜಯ ನರಳು ಸತ್ತಿದಾನೆ.. ಅಪರಾಧಿಗಳಿಗೆ ಗಲ್ಲು ಸಿಕ್ಷೆಯಾಗ್ಬೇಕು ಅಂತಾ ಮೃತ್ಯುಂಜಯ ಕುಟುಂಬ ಆಗ್ರಹಿಸ್ತಿದೆ.. ಕುಟುಂಬದ ಆಧಾರವಾಗಿದ್ದ ಮೃತ್ಯುಂಜಯನ ಸಾವು ತಾಯಿ, ಸಹೋದರನಿಗೆ ಅರಗಿಸಿಕೊಳ್ಳಲು ಆಗ್ತಿಲ್ಲ.. ಆರೋಪಿಗಳಿಗೆ ಜಾಮೀನು ಸಿಗಕೂಡ್ದು, ಆದಷ್ಟು ಕಠಣ ಶಿಕ್ಷೆಯನ್ನ ಆರೋಪಿಗಳಿಗೆ ಕೊಡ್ಬೇಕು.. ಆರ್ಥಿಕ ಸಂಕಷ್ಟಕ್ಕೆ ಸಿಕುಕಿರುವ ಕುಟುಂಬಕ್ಕೆ ಪರಿಹಾರ ನೀಡ್ಬೇಕು ಅಂತಾ ಮೃತ್ಯುಂಜಯನ ಸ್ನೇಹಿತರು ಆಗ್ರಹಿಸಿದ್ದಾರೆ..

click me!