* ಪ್ರೀತಿಸಿದ ಹುಡುಗಿ ಮದುವೆಗೆ ನಿರಾಕರಣೆ ಹಿನ್ನೆಲೆ ಪ್ರಿಯಕರ ಆತ್ಮಹತ್ಯೆ
* ನನಗೆ ಗಾನವಿ ಮೋಸ ಮಾಡಿದಳು ಎಂದು ವಾಯ್ಸ್ ಮೆಸೇಜ್ ಕಳುಹಿಸಿ ಆತ್ಮಹತ್ಯೆ
* ಡೆತ್ ನೋಟ್‌ನಲ್ಲಿ ಪ್ರೇಯಸಿಗೆ ಖರ್ಚು ಮಾಡಿದ ಲೆಕ್ಕ ಬರೆದಿಟ್ಟು ಪ್ರಿಯಕರ
ಚಿಕ್ಕಮಗಳೂರು, (ಮೇ.30): ಪ್ರೀತಿಸಿದ ಹುಡುಗ ಕೈಕೊಟ್ಟ ಎಂದು ಹುಡುಗಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳನ್ನ ನೋಡಿದ್ದೇವೆ. ಆದ್ರೆ, ಇಲ್ಲಿ ಹುಡುಗಿ ಕೈಕೊಟ್ಟಿದ್ದಕ್ಕೆ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಹೌದು...ವಾಯ್ಸ್ ಮೆಸೇಜ್ ಕಳಿಸಿ ಭಗ್ನ ಪ್ರೇಮಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರದಲ್ಲಿ ನಡೆದಿದೆ. ನನ್ನ ಸಾವಿಗೆ ನನ್ನ ಪ್ರೇಯಸಿಯೇ ಕಾರಣವೆಂದು ಡೆತ್ ನೋಟ್ ನಲ್ಲಿ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಒಂಬತ್ತು ವರ್ಷದಿಂದ ಪ್ರೀತಿಸಿದ ಯುವತಿ ಮದುವೆಗೆ ನಿರಾಕರಿಸಿದಳು ಎಂಬ ಕಾರಣಕ್ಕೆ ಯುವಕ ಆತ್ಮಹತ್ಯೆಗೆ ಶರಣಾಗಿರುವ ಚಿಕ್ಕಮಗಳೂರು ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪ ಸಮೀಪದ ಶಂಕರಪುರ ಗ್ರಾಮದಲ್ಲಿ ನಡೆದಿದೆ. ಮೃತನನ್ನ 31 ವರ್ಷದ ಚೇತನ ಎಂದು ಗುರುತಿಸಲಾಗಿದೆ. ಮೃತ ಚೇತನ್ ಕಳೆದ 9 ವರ್ಷಗಳಿಂದ ಎನ್.ಆರ್. ಪುರ ತಾಲೂಕಿನ ಚಿಟ್ಟಿನಾಡು ಗ್ರಾಮದ ಗಾನವಿ ಎಂಬ ಯುವತಿಯನ್ನ ಪ್ರೀತಿಸುತ್ತಿದ್ದನು. ಇದೀಗ ಮದುವೆಗೆ ಯುವತಿ ಗಾನವಿ ನಿರಾಕರಿಸಿದಳು ಎಂಬ ಕಾರಣಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ನನಗೆ ಗಾನವಿ ಮೋಸ ಮಾಡಿದಳು ಎಂದು ಆರೋಪದ ವಾಯ್ಸ್ ಮೆಸೇಜ್ ಕಳಿಸಿ ನೇಣಿಗೆ ಶರಣಾಗಿದ್ದಾನೆ.
Chitradurga: ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಲೆ ಮಾಡಿದ ಪತ್ನಿ!
ಪ್ರೇಯಸಿಗೆ ಖರ್ಚು ಮಾಡಿದ ಲೆಕ್ಕ ಬರೆದಿಟ್ಟು ಆತ್ಮಹತ್ಯೆ
ಪ್ರೇಯಸಿಗೆ ನಾನು ಖರ್ಚು ಮಾಡಿರುವ ಲೆಕ್ಕವನ್ನು ಬರೆದಿಟ್ಟು ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಳೆದ 9 ವರ್ಷಗಳಿಂದ ಗಾನವಿಗಾಗಿ ಆತ ಖರ್ಚು ಮಾಡಿರುವ ಹಣದ ಲೆಕ್ಕವನ್ನು ಬರೆದಿಟ್ಟಿದ್ದಾನೆ.
ನಾನು ಗಾನವಿ ಒಂಬತ್ತು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದೇವು. ನಾನು ಅವಳಿಗಾಗಿ ಖರ್ಚು ಮಾಡಿರುವ ಹಣ ಹಾಗೂ ಆಕೆ ನನ್ನಿಂದ ಪಡೆದುಕೊಂಡಿರುವ ಹಣ ಸುಮಾರು ನಾಲ್ಕು ಲಕ್ಷ ಎಂದು ಬರೆದಿಟ್ಟಿದ್ದಾನೆ. ಸ್ನೇಹಿತರ ಬಳಿಯೂ ಕೂಡ ಗಾನವಿ ಜೊತೆ ತಿರುಗಾಡುವ ದಿನಗಳನ್ನು ಇತ್ತೀಚೆಗೆ ಮೆಲುಕು ಹಾಕಿದ ಎಂದು ಹೇಳಲಾಗುತ್ತಿದೆ. ಗಾನವಿ ಗಾಗಿ ಖರ್ಚು ಮಾಡಿರುವ ಪ್ರತಿ ಹಣದ ಲೆಕ್ಕವನ್ನು ಇಟ್ಟು, ಅದನ್ನು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.
ನನ್ನ ಸಾವಿಗೆ ನ್ಯಾಯ ಸಿಗಬೇಕಾದರೆ ಆಕೆಗೆ ಶಿಕ್ಷೆಯಾಗಬೇಕು. ನನ್ನ ಚಿತೆಗೆ ಗಾನವಿಯೇ ಬೆಂಕಿ ಇಡಬೇಕು, ಆಕೆ ಬರುವತನಕ ಮೃತದೆಹವನ್ನ ಕೆಳಗಿಳಿಸಬೇಡಿ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನನಗೆ ಗಾನವಿ ಹಾಗೂ ಅವಳ ಸಹೋದರ ಮಾನಸಿಕ ಕಿರುಕುಳ ನೀಡಿದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಸಂಬಂಧಿಕರಿಗೆ ವಾಯ್ಸ್ ಮೆಸೇಜ್ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಗೂಡ್ಸ್ ಆಟೋ ಚಾಲಕನಾಗಿದ್ದ ಚೇತನ್ ಗ್ರಾಮದಲ್ಲಿ ತುಂಬಾನೇ ಕಷ್ಟ ಜೀವನ ನಡೆಸುತ್ತಿದ್ದ. ಒಬ್ಬನೇ ಮಗನಾಗಿದ್ದ ಚೇತನ್ ಇಡೀ ಕುಟುಂಬಕ್ಕೆ ಆಧಾರವಾಗಿದ್ದ ಶಂಕರಪುರದ ವಾಸಿಯಾಗಿದ್ದ ಚೇತನ್ ಪಕ್ಕದ ಗ್ರಾಮದ ಗಾನವಿ ಯನ್ನು ಗಾಢವಾಗಿ ಪ್ರೀತಿಸುತ್ತಿದ್ದರು.. ಒಂಬತ್ತು ವರ್ಷಗಳಿಂದಲೂ ಕೂಡ ಇವರಿಬ್ಬರು ಪ್ರೀತಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.ಕಳೆದ ಒಂಬತ್ತು ವರ್ಷಗಳಿಂದ ಆಕೆ ಅವರಮ್ಮ ನನ್ನ ಬಳಿ ನಾಲ್ಕೂವರೆ ಲಕ್ಷ ಹಣ ಕಿತ್ತಿದ್ದಾರೆ ಎಂದು ಆರೋಪಿಸಿದ್ದಾನೆ. ಎನ್.ಆರ್.ಪುರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮಗನ ಅಕಾಲಿಕ ನಿಧನದಿಂದ ಹೆತ್ತವರು ಸೇರಿದಂತೆ ಸಂಬಂಧಿಕರ ಆಕ್ರಂದನ ಗ್ರಾಮದಲ್ಲಿ ಮುಗಿಲುಮುಟ್ಟಿತ್ತು.