Tumakuru: ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ಯುವತಿ ಅರೆಸ್ಟ್‌

By Sathish Kumar KH  |  First Published May 19, 2023, 4:07 PM IST

ಪ್ರೀತಿಗೆ ಮೋಸವಾಗಿದೆ ಎಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್​. ಅಂಬೇಡ್ಕರ್​ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ಯುವತಿಯನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ.


ತುಮಕೂರು (ಮೇ 19): ದೇಶದ ಸಂವಿಧಾನ ಸರಿಯಾಗಿಲ್ಲ. ತನ್ನ ಪ್ರೀತಿಗೆ ಮೋಸವಾಗಿದೆ ಎಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್​. ಅಂಬೇಡ್ಕರ್​ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ಯುವತಿಯನ್ನು ತುಮಕೂರು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಅಂಬೇಡ್ಕರ್‌ ಅವರ ಬಗ್ಗೆ ನಾಲಿಗೆ ಹರಿಬಿಟ್ಟು ಬಂಧನವಾದ ಯುವತಿ ವೇದಾವತಿ (22) ಆಗಿದ್ದಾಳೆ. ಈಕೆ ಕ್ಯಾತಸಂದ್ರ ಸಮೀಪದ ಕಲ್ಲಹಳ್ಳಿ ಗ್ರಾಮದ ನಿವಾಸಿಯಾಗಿದ್ದಾಳೆ. ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಿಂದಲೇ ನನಗೆ ಅನ್ಯಾಯವಾಗಿದೆ ಎಂದು ಅವಾಚ್ಯ ಶಬ್ದಗಳಿಂದ ಅಂಬೇಡ್ಕರ್​ ಅವರನ್ನು ನಿಂದಿಸಿ, ವಿಡಿಯೋ ಹರಿಬಿಟ್ಟಿದ್ದಳು. ವಿಡಿಯೋ ವೈರಲ್​ ಆದ ಬಳಿಕ ವೇದಾವತಿ ವಿರುದ್ಧ ಎನ್.ಇ.ಪಿ.ಎಸ್ ಪೊಲೀಸ್ ಠಾಣೆಗೆ ಶ್ರೀನಿವಾಸ್​ ಎಂಬುವರು ದೂರು ನೀಡಿದ್ದರು. ಇದರ ಆಧಾರದ ಮೇಲೆ ವೇದಾವತಿಯನ್ನು ಬಂಧಿಸಲಾಗಿದೆ. 

Latest Videos

undefined

Bengaluru- ಆಂಟಿಯೊಂದಿಗೆ ಲವ್ವಿ-ಡವ್ವಿ: ಮುಸ್ಲಿಂ ಪ್ರಿಯಕರನ ಸರಸಕ್ಕೆ ಗಂಡನ ಹತ್ಯೆ

ತನ್ನ ಪ್ರೀತಿಗೆ ಮೋಸ ಆಗಿದ್ದಕ್ಕೆ ಸಂವಿಧಾನ ಕಾರಣವಂತೆ: ಯುವತಿ ತಾನು ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡುವಾಗ ದೈಹಿಕ ಶಿಕ್ಷಕನನ್ನು ಪ್ರೀತಿ ಮಾಡಿದ್ದಳಂತೆ. ಹಲವು ವರ್ಷಗಳ ಕಾಲ ಪ್ರೀತಿ ಮಾಡಿ, ಈಗ ನನ್ನೊಂದಿಗೆ ಇರದೇ ಮೋಸ ಮಾಡಿದ್ದಾನೆ ಎಂದು ಅಳಲು ತೋಡಿಕೊಂಡಿದ್ದಾಳೆ. ಈ ನಡುವೆ ಪಿಟಿ ಮೇಷ್ಟ್ರು ಮೇಲಿನ ದ್ವೇಷಕ್ಕೆ ಅವರನ್ನು ನಿಂದನೆ ಮಾಡುವುದರ ಜೊತೆಗೆ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವ​ರನ್ನು ನಿಂದನೆ ಮಾಡಿರುವುದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. 

ನ್ಯಾಯಾಲಯದಲ್ಲಿ ಸಾಕ್ಷಿ ಕೇಳಿದ್ದಕ್ಕೆ ಬೇಸರ:
ಇನ್ನು ಬಂಧಿತ ಯುವತಿ 9ನೇ ತರಗತಿ ಓದುತ್ತಿದ್ದಾಗ ತನ್ನ ಶಾಲೆಯ ದೈಹಿಕ ಶಿಕ್ಷಕನನ್ನು ಪ್ರೀತಿ ಮಾಡುತ್ತಿದ್ದಳು. ಆದರೆ, ದೈಹಿಕ ಶಿಕ್ಷಕ ವಂಚನೆ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ. ಈ ಸಂಬಂಧ ವೇದಾವತಿ ತುಮಕೂರು ಮಹಿಳಾ ಠಾಣೆಗೆ ದೂರು ನೀಡಿದ್ದಳು. ಬಳಿಕ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ, ನ್ಯಾಯಾಲಯದಲ್ಲಿ ದಾಖಲೆ ಹಾಗೂ ಸಾಕ್ಷಿ ಕೇಳಲಾಗಿತ್ತು. ಆದರೆ, ಪ್ರೀತಿ ಮಾಡುತ್ತಿರುವುದಕ್ಕೆ ಯಾವುದಾದರೂ ದಾಖಲೆ ಕೊಡುವಂತೆ ಕೇಳಿದರೂ ತನ್ನ ಬಳಿ ದಾಖಲೆ ಇಲ್ಲವೆಂದು ತಿಳಿದುಬಂದಿದೆ.

ಸಂವಿಧಾನದ ಬಗ್ಗೆ ಅವಹೇಳನ ವೀಡಿಯೋ ಮಾಡಿ ಹರಿಬಿಟ್ಟಳು:  ಇನ್ನು ನ್ಯಾಯಾಲಯದಲ್ಲಿ ಸಾಕ್ಷಿ ಕೇಳಿದ್ದರಿಂದ ಬೇಸತ್ತ ವೇದಾವತಿ ಸಂವಿಧಾನವನ್ನು ರಚಿಸಿದ ಡಾ. ಬಿ.ಆರ್ ಅಂಬೇಡ್ಕರ್ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ವಿಡಿಯೋವನ್ನು ಹರಿಬಿಟ್ಟಿದ್ದಳು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆದ ಬಳಿಕ ಶ್ರೀನಿವಾಸ್​ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ವೇದಾವತಿಯನ್ನು ಬಂಧಿಸಲಾಗಿದೆ. 

ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಕ್ರೂಸರ್‌: ಯಲ್ಲಮ್ಮನ ದರ್ಶನಕ್ಕೆ ಹೋದವರು ಮಸಣ ಸೇರಿದರು

ಮೆಡಿಕಲ್‌ ಕಾಲೇಜು ಡೀನ್‌ನಿಂದ ಅಂಬೇಡ್ಕರ್‌ಗೆ ನಿಂದನೆ: ಮುಖಕ್ಕೆ ಮಸಿ ಬಳಿದು ಆಕ್ರೋಶ
ಚಾಮರಾಜನಗರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ ಅವರನ್ನು ನಿಂದನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ನಗರದ ಮೆಡಿಕಲ್ ಕಾಲೇಜಿನ ಡೀನ್ ವಿರುದ್ಧ ಕಾಲೇಜಿನ ನೌಕರರು ಪ್ರತಿಭಟನೆ ಆರಂಭಿಸಿದ್ದಾರೆ. ಈ ವೇಳೆ ಕಾಲೇಜಿನ ಡೀನ್‌ ಸಂಜೀವ್‌ ರೆಡ್ಡಿ ಅವರ ಕಾರನ್ನು ಜಖಂ ಮಾಡಿದ್ದಾರೆ. ನಿನ್ನೆ (ಮೇ 18ರ ಗುರುವಾರ) ಆಸ್ಪತ್ರೆಯ ಹೊರಗುತ್ತಿಗೆ ನೌಕರರು ಸಂಬಳ ಕೇಳಲು ಹೋಗಿದ್ದ ವೇಳೆ ಡೀನ್‌ ಸಂಜೀವರೆಡ್ಡಿ ಅಂಬೇಡ್ಕರ್ ಅವರನ್ನು ನಿಂದನೆ ಮಾಡಿದ್ದಾರಂತೆ. ಈ ಹಿನ್ನೆಲೆಯಲ್ಲಿ ಇಂದು (ಶುಕ್ರವಾರ) ಪ್ರತಿಭಟನೆ ಆರಂಭಿಸಿದ ನೌಕರರು ಅಂಬೇಡ್ಕರ್ ವಿರೋಧಿ ಡೀನ್ ಸಂಜೀವ್ ರೆಡ್ಡಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. 

ಮುಖಕ್ಕೆ ಮಸಿ ಬಳಿದು ಆಕ್ರೋಶ: ಆಸ್ಪತ್ರೆ ಹೊರಗುತ್ತಿಗೆ ನೌಕರರು, ಬಿಎಸ್ಪಿ ಕಾರ್ಯಕರ್ತರಿಂದ ಡೀನ್ ಕಾರು ತಡೆದು ಪ್ರತಿಭಟನೆ ಮಾಡಲಾಗಿದೆ. ಈ ವೇಳೆ ಆಕ್ರೋಶಗೊಂಡ ಪ್ರತಿಭಟನಾಕಾರರು ಕಾರಿನ ಗ್ಲಾಸ್ ಪುಡಿ ಪುಡಿ ಮಾಡಿದ್ದಾರೆ. ನಂತರ ಪೊಲೀಸರ ರಕ್ಷಣೆಯೊಂದಿಗೆ ಮೆಡಿಕಲ್ ಕಾಲೇಜಿನ ಡೀನ್ ಸಂಜೀವ್ ರೆಡ್ಡಿ ಅಲ್ಲಿಂದ ಪರಾರಿ ಆಗಿದ್ದಾರೆ. ಈ ವೇಳೆ ಡೀನ್‌ ಸಂಜೀವರೆಡ್ಡಿ ಮುಖಕ್ಕೆ ಮಸಿ ಬಳಿದು ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ.

click me!