ನನ್ನ ಗಂಡ ಕುಡಿದು ಗಲಾಟೆ ಮಾಡಿದ್ದಾನೆ ಎಂದು ಹೇಳಿದ್ದಕ್ಕೆ ಆಕೆಯ ಪ್ರಿಯಕರ ಆಂಟಿಯ ಗಂಡನನ್ನೇ ಕೊಲೆ ಮಾಡಿರುವ ದುರ್ಘಟನೆ ನಡೆದಿದೆ.
ಬೆಂಗಳೂರು (ಮೇ 19): ಬೆಂಗಳೂರಿನಲ್ಲಿ ಮಹದೇಪುರದಲ್ಲಿ ಮದುವೆಯಾಗಿ ಗಂಡ, ಮಕ್ಕಳೊಂದಿಗೆ ಸಂಸಾರ ಮಾಡಿಕೊಂಡಿದ್ದ ಆಂಟಿಗೆ ಗಂಡ ಕುಡಿಯುತ್ತಾನೆ ಎಂಬ ಬೇಸರವಿತ್ತು. ಇದನ್ನೇ ನೋಡಿಕೊಂಡಿದ್ದ ಪಕ್ಕದ ಮನೆಯ ವ್ಯಕ್ತಿ ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಹಿಂದೆ ಬಿದ್ದು ಪೀಡಿಸಿದ್ದಾನೆ. ಪ್ರೀತಿಯ ಬಲೆಗೆ ಬಿದ್ದ ಮಹಿಳೆ ನನ್ನ ಗಂಡ ಕುಡಿದು ಗಲಾಟೆ ಮಾಡುತ್ತಾರೆ ಎಂದು ಹೇಳಿದ್ದಾಳೆ. ಇದರಿಂದ ಆಕ್ರೋಶಗೊಂಡ ಪ್ರಿಯಕರ ಆಂಟಿಯ ಗಂಡನನ್ನು ಕೊಲೆ ಮಾಡಿದ್ದಾನೆ.
ಬೆಂಗಳೂರಿನ ಮಹದೇವಪುರದಲ್ಲಿ ಅನೈತಿಕ ಸಂಬಂಧಕ್ಕೆ ಮತ್ತೊಂದು ಕೊಲೆಯಾಗಿದೆ. ಬೆಂಗಳೂರಿನಲ್ಲಿ ಮಹದೇವಪುರದ ಶಿವ ದೇವಾಲದ ಬಳಿ ನಿನ್ನೆ ರಾತ್ರಿ ಕೊಲೆ ಮಾಡಿರುವ ದುರ್ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಉದಯ್ ಕುಮಾರ್ ಎಂದು ಗುರುತಿಸಲಾಗಿದೆ. ಈತನು ಕಾರು ಹಾಗೂ ಬೈಕ್ ಮೆಕಾನಿಕ್ ಆಗಿ ಕೆಲಸ ಮಾಡುಕೊಂಡಿದ್ದನು. ಇನ್ನು ಈತನು ತನ್ನ ಪತ್ನಿ ಪ್ರಿಯಾ ಹಾಗೂ ಮಕ್ಕಳೊಂದಿಗೆ ಸುಖವಾಗಿ ಸಂಸಾರ ಮಾಡಿಕೊಂಡಿದ್ದನು. ಆದರೆ, ಕುಡಿದು ಗಲಾಟೆ ಮಾಡುವ ಒಂದು ಅಭ್ಯಾಸವೇ ಈತನ ದುರಂತ ಸಾವಿಗೆ ಕಾರಣವಾಗಿದೆ.
ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಕ್ರೂಸರ್: ಯಲ್ಲಮ್ಮನ ದರ್ಶನಕ್ಕೆ ಹೋದವರು ಮಸಣ ಸೇರಿದರು
ಗೃಹಿಣಿಯ ಹಿಂದೆ ಬಿದ್ದ ಮುಸ್ಲಿಂ ಪ್ರಿಯಕರ: ಕಾರು ಹಾಗೂ ಬೈಕ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಉದಯ್ ಕುಮಾರ್ ಪತ್ನಿಯ ಮೇಲೆ ಕಣ್ಣು ಹಾಕಿದ್ದ ಮುಸ್ಲಿಂ ಯುವಕ ಅನ್ವರ್ ಆಂಟಿಯ ಹಿಂದೆ ಬೆನ್ನುಬಿದ್ದು ಲವ್ ಮಾಡುವುದಾಗಿ ಹೇಳಿಕೊಂಡಿದ್ದಾನೆ. ಆಗ ಗೃಹಿಣಿ ಪ್ರಿಯಾ ನನಗೆ ಮದುವೆಯಾಗಿದ್ದು, ಮಕ್ಕಳು ಕೂಡ ಇವೆ ಎಂದು ಹೇಳಿದ್ದಾಳೆ. ಆದರೂ, ಪದೇ ಪದೆ ಪ್ರೀತಿಯ ಬಲೆಗೆ ಬೀಳಿಸಿಕೊಳ್ಳಲು ಅನ್ವರ್ ಪ್ರಯತ್ನ ಮುಂದುವರೆಸಿದ್ದು, ಸ್ನೇಹಿತನಾಗಿರುವುದಾಗಿ ಸಲುಗೆ ಬೆಳೆಸಿಕೊಂಡಿದ್ದಾನೆ. ನಂತರ, ಪ್ರಿಯಾ ತನ್ನ ಗಂಡ ಕುಡಿದು ಗಲಾಟೆ ಮಾಡುತ್ತಾನೆ ಎಂದು ಹೇಳಿಕೊಂಡಿದ್ದಾನೆ. ಇದನ್ನೇ ಬಂಡವಾಳ ಮಾಡಿಕೊಂಡ ಅನ್ವರ್, ಮದುವೆಯಾಗೊದ್ದ ಪ್ರಿಯಾಳೊಂದಿಗೆ ಅನೈತಿಕ ಸಂಬಂಧವನ್ನು ಬೆಳೆಸಿದ್ದಾನೆ.
ಪ್ರಿಯಾಳ ಗಂಡನ ಕೊಲೆಗೆ ಸಂಚು: ಇನ್ನು ಪ್ರಿಯಾಳ ಗಂಡ ಉದಯ್ ಕುಡಿದು ಗಲಾಟೆ ಮಾಡುವ ಬಗ್ಗೆ ಹೇಳಿಕೊಂಡ ಹಿನ್ನೆಲೆಯಲ್ಲಿ ಆತನಿಗೆ ಬುದ್ಧಿ ಕಲಿಸುತ್ತೇನೆ ಎಂದು ಪ್ರೇಯಸಿಯೊಂದಿಗೆ ಅನ್ವರ್ ಹೇಳಿದ್ದಾನೆ. ಪ್ರಿಯಾ ಬಳಿಯಿಂದ ಆಕೆಯ ಪತಿ ಉದಯ್ ಮೊಬೈಲ್ ನಂಬರ್ ಪಡೆದುಕೊಂಡಿದ್ದನು. ಆದರೆ, ದುಡಿಮೆಗಾಗಿ ಬೈಕ್ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ ಉದಯ್‌ನನ್ನು ರಾತ್ರಿ ವೇಳೆ ಬೈಕ್ ರಿಪೇರಿ ಮಾರ್ಗ ಮಧ್ಯದಲ್ಲಿ ಬೈಕ್ ಕೆಟ್ಟುನಿಂತಿದ್ದು, ರಿಪೇರಿಗಾಗಿ ಈಗಲೇ ಸ್ಥಳಕ್ಕೆ ಬರುವಂತೆ ಫೋನ್ ಮಾಡಿ ಮಹದೇವಪುರದ ಶಿವ ದೇವಾಲಯದ ಬಳಿ ಕರೆಸಿಕೊಂಡಿದ್ದಾನೆ.
ತೀರ್ಥಹಳ್ಳಿಯಲ್ಲಿ ಡಬ್ಬಲ್ ಮರ್ಡರ್: ಹಣಕ್ಕಾಗಿ ಕೂಲಿ ಕಾರ್ಮಿಕರ ಬರ್ಬರ ಕೊಲೆ!
ಏಕಾಏಕಿ ಎದೆಗೆ ಚಾಕು ಇರಿತ: ಬೈಕ್ ರಿಪೇರಿಗೆ ಬರುವುದಾಗಿ ಹೇಳಿ ಕೆಲವು ಟೂಲ್ಸ್‌ಗಳನ್ನು ತೆಗೆದುಕೊಂಡು ಉದಯ್‌ಕುಮಾರ್ ಶಿವ ದೇವಾಲಯದ ಬಳಿ ಹೋಗಿದ್ದಾನೆ. ಈ ವೇಳೆ ಬೈಕ್ ರಿಪೇರಿ ಏನಾಗಿದೆ ಎಂದು ಪರಿಶೀಲನೆ ಮಾಡುವಾಗ, ಅನ್ವರ್ ಮಾತನಾಡುತ್ತಾ ನಿನ್ನ ಪತ್ನಿಗೆ ಯಾಕೆ ಕುಡಿದು ಬಂದು ಹಿಂಸೆ ಕೊಡ್ತೀಯಾ ಎಂದು ಪ್ರಶ್ನೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಉದಯ್ ನನ್ನ ಪತ್ನಿಯ ಬಗ್ಗೆ ಇಷ್ಟೊಂದು ಸಲುಗೆ ಇಟ್ಟುಕೊಂಡು ಕೇಳಲು ನೀನ್ಯಾರು ರಂದು ಉದಯ್ ರೇಗಾಡಿದ್ದಾನೆ. ಈ ವೇಳೆ ಏಕಾಏಕಿ ಉದಯ್‌ಕುಮಾರ್ ಎದೆಗೆ ಅನ್ವರ್ ಚಾಕುವನ್ನು ಚುಚ್ಚಿ ಕೊಲೆ ಮಾಡಿದ್ದಾನೆ. ಈ ಘಟನೆ ಕುರಿತಂತೆ ಮಹದೇವಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಪತ್ನಿ ಪ್ರಿಯಾ ಸಹ ಸಂಚಿನಲ್ಲಿ ಭಾಗಿಯಾಗಿರುವ ಶಂಕೆಯಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.