ಹುಡುಗರೇ ಎಚ್ಚರ.. ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ!

By Suvarna News  |  First Published Jan 12, 2021, 10:24 PM IST

ಬೈಕ್ ನಲ್ಲಿ  ತೆರಳುತ್ತಿದ್ದ ಪ್ರಿಯಕರನ ಬೆನ್ನಿಗೆ ಚಾಕು ಹಾಕಿದ ಪ್ರೇಯಸಿ/ ಇನ್ನೊಬ್ಬಳಿಗೆ ಹತ್ತಿರವಾಗುತ್ತಿದ್ದಾನೆ ಎಂದು ಸಿಟ್ಟು/  ದಾರಿಯಲ್ಲೇ ಕುಸಿದು ಬಿದ್ದ ಯುವಕ/ 


ಹೈದರಾಬಾದ್ ( ಜ.  12) ಬೆನ್ನಿಗೆ ಚಾಕು  ಹಾಕುತ್ತಾರೆ ಎನ್ನುವ ಮಾತನ್ನು ಪದೇ ಪದೇ ಕೇಳುತ್ತಿರುತ್ತೇವೆ. ಇಲ್ಲಿ ಅಂಥದ್ದೇ ಒಂದು ಘಟನೆ ನಡೆದಿದೆ. 

ಬೈಕ್ ನಲ್ಲಿ ತೆರಳುತ್ತಿರುವಾಗ ಪ್ರಿಯಕರನ ಬೆನ್ನಿಗೆ ಪ್ರೇಯಸಿಯೇ ಇರಿದಿದ್ದಾಳೆ.  ಪ್ರಿಯಕರನ ಕೊಂದ ಆರೋಪದ ಮೇಲೆ  20  ವರ್ಷದ ಯುವತಿಯನ್ನು ಬಂಧಿಸಲಾಗಿದೆ.

Tap to resize

Latest Videos

ಕ್ಲೀನರ್ ನಿಂದ ಚಲಿಸುವ ಬಸ್ ನಲ್ಲಿ ಎರಡೆರಡು ಸಾರಿ ರೇಪ್

25  ವರ್ಷದ ಯುವಕ ಅಂಬಟಿ ಕರುಣಾ ತಾತಾಜಿಯನ್ನು ಗಸಿಕುಟ್ಟಿ ಪಾವನಿ ಹತ್ಯೆ ಮಾಡಿದ್ದಾಳೆ. ಪ್ರಿಯಕರ ಮತ್ತೊಬ್ಬ ಹುಡುಗಿಗೆ ಹತ್ತಿರವಾಗಿದ್ದು ಆಕೆಯಿಂದಲೇ ತನ್ನ ಖರ್ಚಿಗೆ ಹಣ ಪಡೆಯುತ್ತಿದ್ದ ಎಂಬ ಸಿಟ್ಟಿಗೆ ಯುವತಿ ಇಂಥ ಕೆಲಸ ಮಾಡಿದ್ದಾಳೆ.  ಮದುವೆಗೆ ನಿರಾಕರಣೆ ಮಾಡಿದ್ದಕ್ಕೆ ಯುವತಿ ಈ ಕೆಲಸ ಮಾಡಿದ್ದಾಳೆ ಎಂದು  ಹೇಳಲಾಗಿದೆ 

ಸೋಮವಾರ ರಾತ್ರಿ ಯುವಕ ಮತ್ತು ಯುವತಿ ಮಲಕಪಲ್ಲಿ ಜಿಲ್ಲೆಯ ಕಪಾವರಂ ನಿಂದ  75  ಕಿಮೀ ದೂರದ ಭಿಮಾವರಂ ಕಡೆ ಹೊರಟಿದ್ದಾರೆ. ಇದೇ ಕಾರಣಕ್ಕೆ  ಬೈಕ್ ನಲ್ಲಿಯೇ ಇಬ್ಬರ ನಡುವೆ ಗಲಾಟೆ ಆರಂಭವಾಗಿದೆ.  ಇದ್ದಕ್ಕಿದ್ದಂತೆ ಪ್ರೇಯಸಿ ಚಾಕುವಿನಿಂದ ಇರಿದಿದ್ದಾಳೆ. ಯುವಕ ಸ್ಥಳದಲ್ಲಿಯೇ ಹತ್ಯೆಯಾಗಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿದರು ಯುವತಿ ಮಾತ್ರ ಏನೂ ಆಗದಂತೆ ನಿಂತಿದ್ದಳು .

 

click me!