ಹಾಡಹಗಲೇ ಮಾರಕಾಸ್ತ್ರಗಳಿಂದ ಯುವಕನ ಬರ್ಬರ ಕೊಲೆ

By Kannadaprabha News  |  First Published Jan 14, 2021, 12:33 PM IST

ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನ ಕೊಲೆಗೈದ ದುಷ್ಕರ್ಮಿಗಳು| ಯಾದಗಿರಿ ಜಿಲ್ಲೆಯ  ಹುಣಸಗಿ ಪಟ್ಟಣದಲ್ಲಿ ನಡೆದ ಘಟನೆ|ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ| ಈ ಕುರಿತು ಹುಣಸಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು| 


ಹುಣಸಗಿ(ಜ.14): ಹಾಡಹಗಲೇ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬುಧವಾರ ಪಟ್ಟಣದಲ್ಲಿ ನಡೆದಿದೆ. ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ಜುವೆಲರಿ ವ್ಯಾಪಾರಿಯಾಗಿದ್ದ ಜಗದೀಶ ಶಿರಯವರ ಪುತ್ರ ನರೇಂದ್ರ ಶಿರ (22) ಕೊಲೆಯಾದ ಯುವಕ. 

ಮಧ್ಯಾಹ್ನ 1ರ ಸುಮಾರಿಗೆ ಮನೆಯಲ್ಲಿ ಒಬ್ಬನೇ ಇರುವುದನ್ನು ಗಮನಿಸಿದ ದುಷ್ಕರ್ಮಿಗಳು ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾರೆ. ಅಲ್ಲದೇ ಕಿಶೋರ ಕಲ್ಯಾಣರಾವ್‌ (18) ಎಂಬಾತನನ್ನು ಅಪಹರಣ ಮಾಡಿ ಮನೆಯಲ್ಲಿದ್ದ ಹಣ ಹಾಗೂ ಬಂಗಾರ ದೋಚಿದ್ದಾರೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ. 

Tap to resize

Latest Videos

undefined

ಸಲಿಂಗ ಕಾಮಕ್ಕೆ ಪೀಡಿಸುತ್ತಿದ್ದವನ ಕೊಂದ ‘ಸ್ನೇಹಿತ’

ಘಟನೆ ಸ್ಥಳಕ್ಕೆ ಯಾದಗಿರಿ ಎಸ್ಪಿ ಭಗವಾನ ಸೋನಾವಣೆ, ಪ್ರೊಬೇಸನರಿ ಎಎಸ್‌ಪಿ, ಹುಣಸಗಿ ಸಿಪಿಐ ಎನ್‌.ಕೆ ದೌವಲತ, ಪಿಎಸ್‌ಐ ಬಾಪುಗೌಡ ಪಾಟೀಲ್‌ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಹುಣಸಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!