ಬೆಂಗಳೂರು: ಇನ್‌ಸ್ಟಾಗ್ರಾಂ ಗೆಳೆಯನ ಮಾತು ನಂಬಿ 1.21 ಕೋಟಿ ಕಳೆದುಕೊಂಡ ಯುವಕ..!

By Kannadaprabha NewsFirst Published Aug 16, 2024, 6:00 AM IST
Highlights

ಶಿವಾಜಿನಗರ ಸಮೀಪದ ಲಾಂಗ್ ಪೋರ್ಟ್ ಟೌನ್ ನಿವಾಸಿ ಶಬೀರ್ ಮೋಸ ಹೋಗಿದ್ದು, ಸಂತ್ರಸ್ತನ ದೂರಿನ ಮೇರೆಗೆ ಆತನ ಇನ್‌ಸ್ಟಾಗ್ರಾಂ ಗೆಳೆಯನ ವಿರುದ್ಧ ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು(ಆ.16):  ಇನ್‌ಸ್ಟಾಗ್ರಾಂ ಗೆಳೆಯನ ಮಾತು ನಂಬಿ ಷೇರು ಮಾರುಕಟ್ಟೆಯಲ್ಲಿ ₹1.21 ಕೋಟಿ ಹೂಡಿಕೆ ಮಾಡಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬ ಕೈಸುಟ್ಟುಕೊಂಡಿರುವ ಘಟನೆ ನಡೆದಿದೆ.

ಶಿವಾಜಿನಗರ ಸಮೀಪದ ಲಾಂಗ್ ಪೋರ್ಟ್ ಟೌನ್ ನಿವಾಸಿ ಶಬೀರ್ ಮೋಸ ಹೋಗಿದ್ದು, ಸಂತ್ರಸ್ತನ ದೂರಿನ ಮೇರೆಗೆ ಆತನ ಇನ್‌ಸ್ಟಾಗ್ರಾಂ ಗೆಳೆಯನ ವಿರುದ್ಧ ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos

ಮೂವರು ಸುಪಾರಿ ಕಿಲ್ಲರ್ಸ್‌ನಿಂದ ಶಿಕ್ಷಕಿಯ ಕುತ್ತಿಗೆ ಕುಯ್ದು ಕೊಲೆ: ಬೆಚ್ಚಿಬಿದ್ದ ಮುಳಬಾಗಿಲು!

ಕಳೆದ ಡಿಸೆಂಬರ್‌ನಲ್ಲಿ ಇನ್‌ಸ್ಟಾಗ್ರಾಂನಲ್ಲಿ ಆತನಿಗೆ ಅಪರಿಚಿತನ ಪರಿಚಯವಾಗಿದೆ. ಆಗ ಟ್ರೇಡಿಂಗ್ ವ್ಯವಹಾರದ ಬಗ್ಗೆ ಸಲಹೆ ನೀಡಿದ ಆತ, ನಾನು ಹೇಳಿದಂತೆ ಹೂಡಿಕೆ ಮಾಡಿದರೆ ಕೋಟಿ ಕೋಟಿ ಹಣ ಸಂಪಾದಿಸಬಹುದು ಎಂದಿದ್ದಾನೆ. ಈತನ ನಾಜೂಕಿನ ಮಾತು ನಂಬಿದ ಬಳಿಕ ಶಬೀರ್‌ನನ್ನು ತನ್ನ ವಂಚನೆ ಜಾಲದ ವಾಟ್ಸ್ ಗ್ರೂಪ್‌ಗೆ ಆರೋಪಿ ಸೇರಿಸಿದ್ದಾನೆ. ಆ ಗ್ರೂಪ್‌ನಲ್ಲಿ ಷೇರು ವ್ಯವಹಾರದ ಚರ್ಚೆ ನಡೆದು ಸಲಹೆ ಕೊಟ್ಟಿದ್ದಾನೆ. ಆಗ ಆರೋಪಿ ಮಾತಿನಂತೆ ಮೊದಲು ಅಲ್ಪ ಪ್ರಮಾಣದ ಹಣ ಹೂಡಿಕೆ ಮಾಡಿದಾಗ ಕ1.07 ಲಕ್ಷ ಲಾಭ ಬಂದಿದೆ. ಇದರಿಂದ ಉತ್ತೇಜಿತನಾದ ಸಂತ್ರಸ್ತ, ಕೊನೆಗೆ ಹಂತ ಹಂತವಾಗಿ ₹1.21 ಕೋಟಿ ಹೂಡಿಕೆ ಮಾಡಿ ಶಬೀರ್‌ಹಣ ಕಳೆದುಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

click me!