ಸ್ವಾತಂತ್ರೋತ್ಸವ ಮುಂಭಾಗದಲ್ಲಿ ದೇಶಭಕ್ತಿ ಕಾರ್ಯಕ್ರಮಗಳು ನಡೆಯುವಾಗ ವೇದಿಕೆ ಹಿಂಭಾಗ ಅನ್ಯ ಕೋಮಿನ ಯುವಕರು ಪ್ಯಾಲೆಸ್ತೀನ್ ಪರ ಬಾವುಟ ಹಾರಿಸಲು ಯತ್ನಿಸಿದ್ದರು. ಇದನ್ನು ಗಮನಿಸಿದ ಮತ್ತೊಂದು ಕೋಮಿನ ಯುವಕರು ತಡೆದಿದ್ದಾರೆ. ಈ ಸಂಬಂಧ 6 ಜನರನ್ನು ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕುಣಿಗಲ್(ತುಮಕೂರು)(ಆ.16): ಸ್ವಾತಂತ್ರ್ಯ ದಿನಾಚರಣೆ ವೇದಿಕೆ ಹತ್ತಿರವೇ ಅನ್ಯ ಕೋಮಿನ ಯುವಕರ ಗುಪೊಂದು ಪ್ಯಾಲೆಸ್ತೀನ್ ಬಾವುಟ ಹಾರಿಸಲು ಯತ್ನಿಸಿದ್ದು, 6 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಟ್ಟಣದ ಜಿಕೆಬಿಎಂಎಸ್ ಮೈದಾನದಲ್ಲಿ ತಾಲೂಕು ಆಡಳಿತದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸ್ವಾತಂತ್ರೋತ್ಸವ ಮುಂಭಾಗದಲ್ಲಿ ದೇಶಭಕ್ತಿ ಕಾರ್ಯಕ್ರಮಗಳು ನಡೆಯುವಾಗ ವೇದಿಕೆ ಹಿಂಭಾಗ ಅನ್ಯ ಕೋಮಿನ ಯುವಕರು ಪ್ಯಾಲೆಸ್ತೀನ್ ಪರ ಬಾವುಟ ಹಾರಿಸಲು ಯತ್ನಿಸಿದ್ದರು. ಇದನ್ನು ಗಮನಿಸಿದ ಮತ್ತೊಂದು ಕೋಮಿನ ಯುವಕರು ತಡೆದಿದ್ದಾರೆ.
3 ವರ್ಷದಲ್ಲಿ 4 ಮದುವೆ: ಇಬ್ಬರು ಮಕ್ಕಳಿರುವ ಈಕೆಗೆ ಅವಿವಾಹಿತ ಯುವಕರೇ ಟಾರ್ಗೆಟ್..!
ಈ ಸಂಬಂಧ 6 ಜನರನ್ನು ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಗೃಹ ಸಚಿವ ಜಿ. ಪರಮೇಶ್ವರ ತವರು ಜಿಲ್ಲೆಯಲ್ಲಿಯೇ ಸ್ವಾತಂತ್ರ್ಯ ದಿನದಂದು ದೇಶದ್ರೋಹಿ ಕೃತ್ಯ ನಡೆದಿರುವುದು ಚರ್ಚೆಗೆ ಗ್ರಾಸವಾಗಿದೆ.