ಮಾಜಿ ಸಚಿವ ರೋಷನ್ ಬೇಗ್ ಅರೆಸ್ಟ್: ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್

By Suvarna NewsFirst Published Nov 22, 2020, 8:30 PM IST
Highlights

ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಮಾಜಿ ಶಾಸಕ, ಕಾಂಗ್ರೆಸ್ ಉಚ್ಚಾಟಿತ ನಾಯಕ ರೋಷನ್ ಬೇಗ್ ಅವರನ್ನ ಕೊರ್ಟ್  ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಬೆಂಗಳೂರು, (ನ.22):  ಐಎಂಎ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ರೋಷನ್ ಬೇಗ್ ಅವರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

ಬೆಂಗಳೂರಿನ ಶಿವಾಜಿನಗರದ ಮಾಜಿ ಶಾಸಕರಾಗಿರುವ ರೋಷನ್ ಬೇಗ್ ಅವರನ್ನ ಇಂದು (ಭಾನುವಾರ) ವಿಚಾರಣೆಗೆ ಕರೆಯಿಸಿಕೊಂಡು ಬಳಿಕ ಬಂಧನ ಮಾಡಿದ್ದಾರೆ.  ನಂತರ ನೇರವಾಗಿ ಸಿಬಿಐ ವಿಶೇಷ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯ್ತು. 

ಐಎಂಎ ಕೇಸ್‌ ಆರೋಪಿ ಐಎಎಸ್‌ ಅಧಿಕಾರಿ ಆತ್ಮಹತ್ಯೆ!

ವಿಚಾರಣೆ ನಡೆಸಿದ ಕೋರ್ಟ್​, 14 ದಿನ ನ್ಯಾಯಾಂಗ ಬಂಧನಕ್ಕೆ ಬೇಗ್ ಅವರನ್ನ ಒಪ್ಪಿಸಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು  ರೋಷನ್ ಬೇಗ್ ಅವರನ್ನ ಪರಪ್ಪನ ಅಗ್ರಹಾರಕ್ಕೆ ಕರೆದುಕೊಂಡು ಹೋಗಿದ್ದಾರೆ

ಬೇಗ್ ವಿರುದ್ಧ ಮನ್ಸೂರ್ ಖಾನ್​ನಿಂದ 200 ಕೋಟಿ ಹಣ ಪಡೆದ ಆರೋಪವಿದೆ. ಈ ಸಂಬಂಧ ಬೆಳಗ್ಗೆ 11.30ಕ್ಕೆ ವಿಚಾರಣೆಗೆ ಎಂದು ರೋಷನ್ ಬೇಗ್​ ಅವರನ್ನ ಸಿಬಿಐ ಅಧಿಕಾರಿಗಳು ಕರೆದುಕೊಂಡು ಹೋಗಿದ್ದರು. 

click me!