Fire Accident: ಪೆಟ್ರೋಲ್ ಬಂಕ್‌ನಲ್ಲಿ ಕಾಣಿಸಿಕೊಂಡ ಬೆಂಕಿ, ಭೀಕರ ದುರಂತಕ್ಕೆ ಯುವತಿ ಬಲಿ!

By Gowthami K  |  First Published May 19, 2023, 9:31 PM IST

ಪೆಟ್ರೋಲ್  ಪಂಪ್‌ನಲ್ಲಿ ನಡೆದ ಭೀಕರ ದುರಂತಕ್ಕೆ ಯುವತಿಯೊಬ್ಬಳು ಸಜೀವ ದಹನವಾಗಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಬಡವನಹಳ್ಳಿ ಗ್ರಾಮದಲ್ಲಿ ನಡೆದಿದೆ


ತುಮಕೂರು (ಮೇ.19): ಪೆಟ್ರೋಲ್  ಪಂಪ್‌ನಲ್ಲಿ ನಡೆದ ಭೀಕರ ದುರಂತಕ್ಕೆ ಯುವತಿಯೊಬ್ಬಳು ಸಜೀವ ದಹನವಾಗಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಬಡವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮತ್ತೊರ್ವ ಮಹಿಳೆಗೆ ಗಂಭೀರ ಗಾಯವಾಗಿದೆ. ಬಡವನಹಳ್ಳಿ ಗ್ರಾಮ ಪೆಟ್ರೋಲ್‌ ಬಂಕ್ ನಲ್ಲಿ  ಕ್ಯಾನ್ ಗೆ ಪೆಟ್ರೋಲ್ ತುಂಬಿಸುವಾಗ  ಬೆಂಕಿ ಹತ್ತಿಕೊಂಡಿದೆ. ದ್ವಿಚಕ್ರ ವಾಹನದ  ಮೇಲೆ ಕ್ಯಾನ್ ಇಟ್ಟು ಪೆಟ್ರೋಲ್ ತುಂಬಿಸುವಾಗ ಈ ಅನಾಹುತ ನಡೆದಿದೆ. ಮೃತ ದುರ್ದೈವಿಯನ್ನು 18 ವರ್ಷದ ಭವ್ಯ ಎಂದು ಗುರುತಿಸಲಾಗಿದೆ.  ಬೈಕ್‌ಗೆ ಬೆಂಕಿ ಹತ್ತಿಕೊಳ್ಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕ್ಷಣ ಮಾತ್ರದಲ್ಲಿ ಯುವತಿಯನ್ನು ಬೆಂಕಿ ಆವರಿಸಿದೆ. ರತ್ನಮ್ಮ (46) ಗಂಭೀರವಾಗಿ ಗಾಯಗೊಂಡ ಮಹಿಳೆಯಾಗಿದ್ದು ಮಗಳು ಭವ್ಯಳೊಂದಿಗೆ ಪೆಟ್ರೋಲ್ ಬಂಕಿಗೆ ಬಂದಿದ್ದರು. 

ಮೃತ ದುರ್ದೈವಿ ಭವ್ಯ ಶಿರಾ ತಾಲ್ಲೂಕಿನ ಜವನಹಳ್ಳಿ ನಿವಾಸಿಯಾಗಿದ್ದಾರೆ. ಗಾಯಾಳುಗಳನ್ನು ಶಿರಾ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ‌ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ  ಫಲಕಾರಿಯಾಗದೆ ಯುವತಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾಳೆ. ಕಳೆದ ಬುಧವಾರ ನಡೆದ ಘಟನೆ ತಡವಾಗಿ ಬೆಳಕಿಗೆ.  ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Tap to resize

Latest Videos

Tumakuru: ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ಯುವತಿ ಅರೆಸ್ಟ್‌

ದೀಪ ಬಿದ್ದು ಹೊತ್ತಿಗೆ ಬೆಂಕಿಯಲ್ಲಿ ವೃದ್ಧ ದಹನ
ದೊಡ್ಡಬಳ್ಳಾಪುರ: ಬೆಳಕಿಗಾಗಿ ಹಚ್ಚಿಟ್ಟಿದ್ದ ದೀಪ ಕೆಳಗೆ ಬಿದ್ದು ಹೊತ್ತಿಕೊಂಡು ವೃದ್ದರೊಬ್ಬರು ಸಾವಿಗೀಡಾದ ಘಟನೆ ನಗರದ ಕಚೇರಿ ಪಾಳ್ಯದಲ್ಲಿ ಬುಧವಾರ ತಡರಾತ್ರಿ ಸಂಭವಿಸಿದೆ.

MYSURU: ಜೈಲಿನಿಂದ ಬಂದಿದ್ದ ರೌಡಿಶೀಟರ್ ದುಷ್ಕರ್ಮಿಗಳ ಮಚ್ಚಿನೇಟಿಗೆ ಬಲಿ

ರಾಮಾಂಜಿನಪ್ಪ (70) ಮೃತಪಟ್ಟವರು. ಮನೆಗೆ ವಿದ್ಯುತ್‌ ಸಂಪರ್ಕವಿಲ್ಲದ ಕಾರಣ ಬೆಳಕಿಗೆಂದು ದೀಪ ಹಚ್ಚಲಾಗಿತ್ತು. ಈ ವೇಳೆ ದೀಪ ಕೆಳಗೆ ಬಿದ್ದು ಮನೆಯಲ್ಲಿದ್ದ ಬಟ್ಟೆಗಳ ಗಂಟಿಗೆ ಅಂಟಿಕೊಂಡಿದೆ. ಕುಳಿತರೆ ಎದ್ದೇಳಲಾಗದ ಪರಿಸ್ಥಿತಿಯಲ್ಲಿದ್ದ ವೃದ್ದ ರಾಮಾಂಜಿನಪ್ಪ ಬೆಂಕಿಯ ಉರಿ ತಾಳಲಾಗದೆ ಮಲಗಿದ್ದಲ್ಲೇ ನರಳಾಡಿ ಸಾವಿಗೀಡಾಗಿದ್ದಾರೆ. ಬೆಂಕಿಯ ಕೆನ್ನಾಲಗೆಗೆ ಮನೆಯ ವಸ್ತುಗಳೂ ಭಸ್ಮವಾಗಿವೆ. ದೊಡ್ಡಬಳ್ಳಾಪುರ ನಗರ ಠಾಣಾ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

click me!