Latest Videos

Mysuru: ಜೈಲಿನಿಂದ ಬಂದಿದ್ದ ರೌಡಿಶೀಟರ್ ದುಷ್ಕರ್ಮಿಗಳ ಮಚ್ಚಿನೇಟಿಗೆ ಬಲಿ

By Suvarna NewsFirst Published May 19, 2023, 7:58 PM IST
Highlights

ಮೈಸೂರಿನಲ್ಲಿ ಹಳೆ ವೈಷಮ್ಯಕ್ಕೆ ಹೆಣ ಬಿದ್ದಿದೆ. ಹಾಡಹಗಲೇ ಜಳಪಿಸಿದ ಮಚ್ಚು ಲಾಂಗಿನೇಟಿಗೆ ಪಾಲಿಕೆ ಮಾಜಿ ಸದಸ್ಯ ಅವ್ವ ಮಾದೇಶ್ ಶಿಷ್ಯ ಬೀದಿ ಹೆಣವಾಗ್ಬಿಟ್ಟಿದ್ದಾನೆ.

ವರದಿ : ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣನ್ಯೂಸ್

ಮೈಸೂರು (ಮೇ.19): ಈ ಪೋಟೊದಲ್ಲಿರೋ ಈತ ಚಂದ್ರಶೇಖರ್ ಆಲಿಯಾಸ್ ಪಾರಿವಾಳ ಚಂದು, ಹುಣಸೂರು ಜೋಡಿ ಕೊಲೆ ,ಪಡುವಾರಹಳ್ಳಿ ದೇವು ಹತ್ಯೆ ಪ್ರಕರಣದಲ್ಲಿ ದೋಷಮುಕ್ತನಾಗಿ ಜೈಲಿನಿಂದ ಹೊರಬಂದಿದ್ದ. ಇತ್ತೀಚೆಗೆ  ಪಾಪ ಕೃತ್ಯಗಳಲ್ಲಿ ತಲೆ ಹಾಕದೆ ತಾನಾಯ್ತು ತನ್ನ ಮನೆಯಾಯ್ತು ಅಂತಾ ಅರಾಮಾಗಿ ಇದ್ದ ಚಂದ್ರು ಒಂಟಿಕೊಪ್ಪಲಿನ ತನ್ನ ಮನೆ ಬಳಿ ಟೈಲರ್ ಅಂಗಡಿ ಮುಂಭಾಗ ಸಂಜೆ 5 ಗಂಟೆ ವೇಳೆಗೆ ಮಾತನಾಡುತ್ತಾ ಕುಳಿತಿದ್ದ ವೇಳೆ ದ್ವಿಚಕ್ರ ವಾಹನಗಳಲ್ಲಿ ಬಂದ ನಾಲ್ಕೈದು ಹಂತಕರ ತಂಡ ಲಾಂಗು ಮಚ್ಚಿನಿಂದ ಮನಬಂದಂತೆ ಹಲ್ಲೆ ಮಾಡಿ ಸ್ಥಳದಿಂದ ಎಸ್ಕೇಪ್ ಆಗಿದೆ. ಕೂಡಲೇ ಸಂಬಂಧಿಕರು ಹಲ್ಲೆಗೊಳಗಾದ ಚಂದ್ರುವನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಚಂದ್ರು ಸಾವನ್ನಪ್ಪಿದ್ದಾನೆ‌. ವಿಚಾರ ತಿಳಿದು ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಡಿಸಿಪಿ ಮುತ್ತುರಾಜ್ ಸಿಬ್ಬಂದಿ ಜೊತೆ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು: ವೈಷ್ಣೋದೇವಿ ದರ್ಶನಕ್ಕೆ ಕಾಪ್ಟರ್‌ ಸೇವೆ ನೆಪದಲ್ಲಿ ವೃದ್ಧನಿಗೆ ವಂಚನೆ

ಇನ್ನು, 2008 ರ ಮೇ 15 ರಂದು ಹುಣಸೂರಿನ  ಎಪಿಎಂಸಿ ಬಳಿಯ ತೋಟದ ಮನೆಯಲ್ಲಿ ಇಬ್ಬರ ಹತ್ಯೆಯಾಗಿತ್ತು. ಹಾಗೆಯೇ 2016 ರಲ್ಲಿ ಮೇ.5 ರಂದು ಪಡುವಾರಹಳ್ಳಿ ದೇವು ಹತ್ಯೆಯಾಗಿತ್ತು. ಈ ಎರಡೂ ಪ್ರಕರಣದ ಆರೋಪಿಯಾಗಿದ್ದ ಚಂದ್ರು ಪಾಲಿಕೆ ಮಾಜಿ ಸದಸ್ಯ ಅವ್ವ ಮಾದೇಶ್ ಜೊತೆಗೆ ಜೈಲು ಸೇರಿ ಇತ್ತೀಚೆಗೆ ದೋಷಮುಕ್ತನಾಗಿ ಹೊರಬಂದಿದ್ದ. ಬಂದ ಬಳಿಕ  ಹೆಂಡತಿ ಫಾಸ್ಟ್ ಫುಡ್ ನಡೆಸುತ್ತಿದ್ದಕ್ಕೆ ಸಹಾಯ ಮಾಡುತ್ತಾ ಸಣ್ಣ ಪುಟ್ಟ ಫೈನಾನ್ಸ್ ಮಾಡ್ಕೊಂಡು ಅರಾಮಾಗಿಯೇ ಇದ್ದ, ಇತ್ತೀಚೆಗೆ ಯಾವುದೇ ರೌಡಿ ಚಟುವಟಿಕೆಯಲ್ಲಿ ಭಾಗಿಯಾಗದೇ ತಾನಾಯ್ತು ತನ್ನ ಕುಟುಂಬವಾಯ್ತು ಅಂತಾ ಜೀವನ ಸಾಗಿಸುತ್ತಿದ್ದ,  ಆದ್ರೆ ಐನಾತಿಗಳು ಹಾಕಿದ ಸ್ಕೇಚ್ ಗೆ ಜೀವ ಬಿಟ್ಟಿದ್ದಾನೆ.

ಶೃಂಗೇರಿ ಬಳಿಯ ತುಂಗಾ ನದಿಯಲ್ಲಿ ಮುಳುಗಿ ಇಬ್ಬರು ಕಾಲೇಜು ವಿದ್ಯಾರ್ಥಿಗಳ ಸಾವು

ಒಟ್ಟಿನಲ್ಲಿ, ಹುಣಸೂರು ಡಬ್ಬಲ್ ಮರ್ಡರ್, ಪಡುವಾರಹಳ್ಳಿ ದೇವು ಹತ್ಯೆ, ಚಂದ್ರು ಮರ್ಡರ್ ಮೇ ತಿಂಗಳಿನಲ್ಲಿಯೇ ನಡೆದಿದೆ. ಇದೆಲ್ಲವನ್ನೂ ಗಮನಿಸಿದ್ರೆ  ಪಡುವಾರಹಳ್ಳಿ ದೇವು ಮರ್ಡರ್ ಗೆ ಪ್ರತಿಕಾರವಾಗಿ ಚಂದ್ರ ಹತ್ಯೆ ನಡೆದಿದ್ಯ ಅನ್ನೋದು ಕೂಡ ಚರ್ಚೆಯಾಗ್ತಿದೆ. ಈಗಾಗಲೇ ವಿವಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ದುರ್ಷರ್ಮಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ‌.  ಹಂತಕರ ಬಂಧನದ ಬಳಿಕ ಚಂದ್ರು ಹತ್ಯೆಗೆ ನಿಖರ ಕಾರಣ ಹೊರ ಬೀಳಲಿದೆ. ಒಟ್ಟಿನಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಳೆ ವೈಷಮ್ಯಕ್ಕೆ ಹೆಣ ಬಿದ್ದಿದೆ. ಹಾಡಹಗಲೇ ಜಳಪಿಸಿದ ಮಚ್ಚು ಲಾಂಗಿನೇಟಿಗೆ ಪಾಲಿಕೆ ಮಾಜಿ ಸದಸ್ಯ ಅವ್ವ ಮಾದೇಶ್ ನ ಶಿಷ್ಯ ಬೀದಿ ಹೆಣವಾಗ್ಬಿಟ್ಟಿದ್ದಾನೆ.

click me!