ಯಲ್ಲಮ್ಮ ದೇವಸ್ಥಾನದ ಹುಂಡಿ ಒಡೆದು ಖದೀಮರು ಹಣ ದೋಚಿ ಪರಾರಿಯಾಗಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಹಾಲಗೇರಾ ಗ್ರಾಮದಲ್ಲಿ ನಡೆದಿದೆ. ಇಂದು ನಸುಕಿನ ಜಾವ ದೇವಸ್ಥಾನದೊಳಗೆ ನುಗ್ಗಿರುವ ಕಳ್ಳರು.
ಯಾದಗಿರಿ (ಅ.31): ಯಲ್ಲಮ್ಮ ದೇವಸ್ಥಾನದ ಹುಂಡಿ ಒಡೆದು ಖದೀಮರು ಹಣ ದೋಚಿ ಪರಾರಿಯಾಗಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಹಾಲಗೇರಾ ಗ್ರಾಮದಲ್ಲಿ ನಡೆದಿದೆ.
ಇಂದು ನಸುಕಿನ ಜಾವ ದೇವಸ್ಥಾನದೊಳಗೆ ನುಗ್ಗಿರುವ ಕಳ್ಳರು. ಯಲ್ಲಮ್ಮ ದೇವಸ್ಥಾನದ ಗರ್ಭಗುಡಿಯಲ್ಲಿರುವ ಹುಂಡಿ. ಕಳೆದ ತಿಂಗಳಿಂದ ಸಾಲು ಸಾಲು ಹಬ್ಬಗಳು. ದೇವಸ್ಥಾನಕ್ಕೆ ಬರುವ ಸಾವಿರಾರು ಭಕ್ತರಿಂದ ಹುಂಡಿಗೆ ಹಣ. ಹುಂಡಿ ಹಣ ತೆಗೆದಿರಲಿಲ್ಲ. ಹೀಗಾಗಿ ಖದೀಮರು ಹುಂಡಿ ಹಣ ದೋಚಲು ಪ್ಲಾನ್ ಮಾಡಿ ಇಂದು ಬೆಳಗಿನ ಜಾವ ದೇವಸ್ಥಾನಕ್ಕೆ ನುಗ್ಗಿ ಕಳ್ಳತನ ಮಾಡಿರುವ ಖದೀಮರು.
undefined
5-6 ಜನ ಕಳ್ಳರು ಸೇರಿಕೊಂಡು ಹುಂಡಿ ಬೀಗ ಮುರಿದು ಹಣ ದೋಚಿರುವ ಶಂಕೆ. ಹುಂಡಿ ಹಣ ದೋಚಿದ ಬಳಿಕ ಅಲ್ಲಿಂದ ಕಾಲ್ಕಿತ್ತಿರೋ ಕಳ್ಳರು. ಇದೇ ತಿಂಗಳು ಯಾದಗಿರಿ ನಗರದಲ್ಲಿ ಸುಮಾರು 5ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಸರಣಿ ಕಳ್ಳತನ ನಡೆದಿದ್ದವು. ಇದೀಗ ಯಲ್ಲಮ್ಮ ದೇವಸ್ಥಾನ ಹುಂಡಿಯ ಹಣವೂ ಕಳ್ಳತನವಾಗಿದೆ. ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.
ಕೊಡೆಕಲ್ ಬಸವೇಶ್ವರ ದೇವಸ್ಥಾನದಲ್ಲಿ ಹುಂಡಿ ಹಣ ಕದ್ದ ಖದೀಮರು!
ಕಳೆದ ತಿಂಗಳಿಂದ ದೇವಸ್ಥಾನಗಳಲ್ಲೇ ಹೆಚ್ಚು ಕಳುವು ಪ್ರಕರಣಗಳು. ಬಹುತೇಕ ದೇವಸ್ಥಾನಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಅಳವಡಿಸಲಾಗಿಲ್ಲ. ಇದೇ ಬಂಡವಾಳ ಮಾಡಿಕೊಂಡು ಖದೀಮರು ಕಳ್ಳತನ? ಸಿಸಿಟಿವಿ ಅಳವಡಿಸಿದ್ದರಿಂದ ಕಳ್ಳರನ್ನು ಹಿಡಿಯುವುದುಕ್ಕೆ ಪೊಲೀಸರಿಗೆ ಅಡ್ಡಿ. ದೇವಸ್ಥಾನಗಳಲ್ಲಿ ಸಿಸಿಟಿವಿ ಅಳವಡಿಸಿದರೆ ಖದೀಮರ ಮುಖ ಚಲನವಲನ ಗಮನಿಸಿ ಪತ್ತೆ ಹಚ್ಚುವುದು ಸುಲಭ.