ಅಪಹರಿಸಿ ಗ್ಯಾಂಗ್‌ ರೇಪ್‌ ಮಾಡಿ ಅಂಗಾಂಗ ಸುಟ್ಟರು: ಕ್ರೌರ್ಯ ಬಿಚ್ಚಿಟ್ಟ ಯಾದಗಿರಿ ಸಂತ್ರಸ್ತೆ

By Kannadaprabha News  |  First Published Sep 14, 2021, 8:04 AM IST
  • ರಸ್ತಾಪೂರದ ಕಮಾನ್‌ ಕನ್ಯಾಕೋಳೂರಿನಿಂದ ಮಹಿಳೆ ಅಪಹರಿಸಿದ ದುರುಳರು 
  • ವಿವಸ್ತ್ರಗೊಳಿಸಿದ ಬಳಿಕ  ಬಾಯನ್ನು ಒತ್ತಿ ಹಿಡಿದು ಅಂಗಾಂಗಗಳನ್ನು ಸಿಗರೇಟಿನಿಂದ ಸುಟ್ಟು ಅತ್ಯಾಚಾರ

ಯಾದಗಿರಿ (ಸೆ.14): ರಸ್ತಾಪೂರದ ಕಮಾನ್‌ ಕನ್ಯಾಕೋಳೂರಿನಿಂದ ನನ್ನನ್ನು ಅಪಹರಿಸಿದ ದುರುಳರು ವಿವಸ್ತ್ರಗೊಳಿಸಿದ ಬಳಿಕ ನನ್ನ ಬಾಯನ್ನು ಒತ್ತಿ ಹಿಡಿದು ಅಂಗಾಂಗಗಳನ್ನು ಸಿಗರೇಟಿನಿಂದ ಸುಟ್ಟರು. ಬಳಿಕ ನಾಲ್ವರು ಅತ್ಯಾಚಾರ ನಡೆಸಿದರು...’

-​ಇದು ಶಹಾಪುರ ಸಮೀಪ ಅಪಹರಿಸಲ್ಪಟ್ಟು ಪೈಶಾಚಿಕವಾಗಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವ ಸಂತ್ರಸ್ತ ಮಹಿಳೆ ಪೊಲೀಸರಿಗೆ ತಿಳಿಸಿರುವ ವಿಚಾರ. ಆಕೆ ಹಲ್ಲೆ, ಲೈಂಗಿಕ ದೌರ್ಜನ್ಯಗಳೊಂದಿಗೆ ಸಾಮೂಹಿಕ ಅತ್ಯಾಚಾರಕ್ಕೂ ತುತ್ತಾಗಿದ್ದಳು ಎಂಬ ಅಂಶ ಪೊಲೀಸ್‌ ವಿಚಾರಣೆ ವೇಳೆ ತಿಳಿದುಬಂದಿದೆ.

Tap to resize

Latest Videos

undefined

ಯಾದಗಿರಿ ಮಹಿಳೆಯ ಹಲ್ಲೆ, ಗ್ಯಾಂಗ್‌ರೇಪ್‌: ನಾಲ್ವರು ಕಾಮುಕರು ಅರೆಸ್ಟ್‌!

ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ, ಯಾದಗಿರಿ-ಶಹಾಪುರ ಮಾರ್ಗಮಧ್ಯೆವೊಂದರ ಗ್ರಾಮ ಸಂತ್ರಸ್ತೆಯ ತವರು. ಶಹಾಪುರದ ಚಾಮುಂಡೇಶ್ವರಿ ನಗರದ ನಿವಾಸಿಯಾಗಿರುವ 30 ವರ್ಷದ ಆಕೆಗೆ 8-9 ವರ್ಷಗಳ ಹಿಂದೆ ಮದುವೆಯಾಗಿದೆ. ಇಬ್ಬರು ಗಂಡು ಹಾಗೂ ಒಂದು ಹೆಣ್ಣು ಸೇರಿದಂತೆ ಮೂವರು ಮಕ್ಕಳಿದ್ದಾರೆ. ಪುಣೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ದಂಪತಿ ಮಧ್ಯೆ ಕೌಟುಂಬಿಕ ಕಲಹ ಉಂಟಾದ ಹಿನ್ನೆಲೆಯಲ್ಲಿ ಪತಿಯನ್ನು ತೊರೆದು ಒಂದು ವರ್ಷದ ಹಿಂದೆ ತವರು ಮನೆಗೆ ವಾಪಸ್ಸಾಗಿದ್ದಳು. ನಂತರ ಶಹಾಪುರದ ಚಾಮುಂಡೇಶ್ವರಿ ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು.

ಈ ಘಟನೆ ಸುಮಾರು 8-10 ತಿಂಗಳ ಹಿಂದೆ ನಡೆದಿದ್ದು ದಿನಾಂಕ ಸರಿಯಾಗಿ ನೆನಪಿಲ್ಲ ಎಂದು ದೂರಿನಲ್ಲಿ ತಿಳಿಸಿರುವ ಸಂತ್ರಸ್ತೆ, ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಶಹಾಪುರದಿಂದ ರಾತ್ರಿ ತವರು ಮನೆಗೆ ಹೋಗಬೇಕೆಂದು ಬಸ್‌ ನಿಲ್ದಾಣದಲ್ಲಿ ನಿಂತಿದ್ದಾಗ, ಮಧ್ಯರಾತ್ರಿ ವೇಳೆ ತನಗೆ ಪರಿಚಯಸ್ಥರಾಗಿದ್ದ ಲಿಂಗರಾಜ, ಶರಣಪ್ಪ, ಭೀಮರಾಯ ಹಾಗೂ ಅಯ್ಯಪ್ಪ ಎನ್ನುವವರು ಬಂದು ತಮ್ಮ ಜೊತೆ ಬರುವಂತೆ ಕರೆದರು. ಇದಕ್ಕೊಪ್ಪದ ತನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಲವಂತವಾಗಿ ಕಾರಿನಲ್ಲಿ ಕರೆದೊಯ್ದರು ಎಂದು ತಿಳಿಸಿದ್ದಾಳೆ.

ರಸ್ತಾಪೂರದ ಕಮಾನ್‌ (ಶಹಾಪುರ ಸಮೀಪ) ಕನ್ಯಾಕೋಳೂರು ರಸ್ತೆಗೆ ಬಂದು ಅಲ್ಲಿ ನನ್ನನ್ನು ರಸ್ತೆಯ ಪಕ್ಕೆ ಎಳೆದುಕೊಂಡು ಎಲ್ಲ ವಿವಸ್ತ್ರಳನ್ನಾಗಿಸಿ, ಅಂಗಾಂಗಗಳನ್ನು ಮುಟ್ಟಿದರು. ಇದಕ್ಕೆ ಪ್ರತಿರೋಧಿಸಿದ ತನ್ನ ಬಾಯಿ ಒತ್ತಿ ಹಿಡಿಯಲಾಗಿತ್ತಲ್ಲದೆ, ಸಿಗರೇಟಿನಿಂದ ನನ್ನ ಅಂಗಾಂಗಗಳಿಗೆ ಸುಟ್ಟರು. ಈ ನಾಲ್ವರು ನನ್ನ ಮೇಲೆ ಅತ್ಯಾಚಾರ ನಡೆಸಿದರು. ನನ್ನ ಬಳಿಯಿದ್ದ 5 ಸಾವಿರ ರು. ಮತ್ತು ಮೊಬೈಲನ್ನು ಕಸಿದುಕೊಂಡರು. ಅತ್ಯಾಚಾರ ವಿಷಯವನ್ನು ಎಲ್ಲಿಯಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ವಿಡಿಯೋ ಚಿತ್ರೀಕರಿಸಿಕೊಂಡಿದ್ದರು. ಪತ್ರಿಕೆಯಲ್ಲಿ ಈ ಬಗ್ಗೆ ಸುದ್ದಿ ಬಂದಾಗ, ಪೊಲೀಸರು ಬಂದು ಧೈರ್ಯ ತುಂಬಿದ್ದರಿಂದ ದೂರನ್ನು ನೀಡಿದ್ದೇನೆ ಎಂದು ಸಂತ್ರಸ್ತೆ ತಿಳಿಸಿದ್ದಾಳೆ.

click me!