ಯಾದಗಿರಿ ನಿಷೇಧಿತ ಕೋಳಿ ಪಂದ್ಯ; ಕಣ್ಮುಚ್ಚಿ ಕುಳಿತ ಪೋಲಿಸ್ ಇಲಾಖೆ!

By Ravi Janekal  |  First Published Sep 24, 2023, 8:07 PM IST

ಕೋಳಿ ಪಂದ್ಯದ ವೇಳೆ ಎರಡು ಗುಂಪುಗಳು ನಡುವೆ ಗಲಾಟೆಯಾಗಿ ಪರಸ್ಪರ ಹೊಡೆದಾಡಿಕೊಂಡ ಘಟನೆ ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಸಿದ್ದಾಪುರ ಗ್ರಾಮದ ಹೊರವಲಯದಲ್ಲಿ ನಡೆದಿದೆ.


ಯಾದಗಿರಿ (ಸೆ.24) : ಕೋಳಿ ಪಂದ್ಯದ ವೇಳೆ ಎರಡು ಗುಂಪುಗಳು ನಡುವೆ ಗಲಾಟೆಯಾಗಿ ಪರಸ್ಪರ ಹೊಡೆದಾಡಿಕೊಂಡ ಘಟನೆ ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಸಿದ್ದಾಪುರ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಗ್ರಾಮದ ಹೊರವಲಯದಲ್ಲಿ ಕೋಳಿ ಪಂದ್ಯ ಏರ್ಪಡಿಸಲಾಗಿತ್ತು. ಈ ಪಂದ್ಯದಲ್ಲಿ ಬೆಟ್ಟಿಂಗ್ ಆಡಲೆಂದೇ ನೂರಾರು ಜನರು ಸೇರಿದ್ದರು. ಎರಡು ಗುಂಪುಗಳ ನಡುವೆ ನಡೆದಿದ್ದ ಬೆಟ್ಟಿಂಗ್. ಆದರೆ ಗೆದ್ದ ತಂಡದವರಿಗೆ ಬೆಟ್ಟಿಂಗ್ ಹಣ ಹಾಗೂ ಮೃತ ಕೋಳಿ ನೀಡದ್ದಕ್ಕೆ  ಶುರುವಾದ ಜಗಳ. ಮಾತಿಗೆ ಮಾತು ಬೆಳೆದು ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. 

Tap to resize

Latest Videos

undefined

ಕೋಳಿ ಪಂದ್ಯವನ್ನು ನಿಷೇಧಿಸಲಾಗಿದ್ದರೂ ಸಹ ಯಾದಗಿರಿ ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ಇದೆಲ್ಲ ಪೊಲೀಸ್ ಇಲಾಖೆಗೆ ಗೊತ್ತಿದ್ದರೂ ಕಣ್ಮುಚ್ಚಿಕೊಂಡು ಕುಳಿತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹುಣಸಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ 

ಕೊಪ್ಪಳ: ನಿಷೇಧದ ಮಧ್ಯೆಯೂ ನಡೆದ ಕೋಳಿ ಜೂಜಾಟ

click me!