ಯುವತಿಗೆ ವಂಚಿಸಿದ ಸೈಬರ್ ಕಳ್ಳರು| ನಿಮ್ಮ ರೆಸ್ಯೂಮ್ ನೋಡಿದೆ. ನಿಮಗೆ ಇಂಡಿಗೋ ಏರ್‌ಲೈನ್ಸ್‌ನಲ್ಲಿ ಉದ್ಯೋಗ ಕೊಡಿಸುತ್ತೇನೆ ಎಂದು ಹೇಳಿ, ಆನ್‌ಲೈನ್‌ನಲ್ಲೇ ಸಂದರ್ಶನ ಮಾಡಿ ವಂಚಿಸಿದ ಟೀನಾ ಶರ್ಮಾ| ಹಣ ಸಂದಾಯವಾದ ಬಳಿಕ ಟೀನಾಳ ಸಂಪರ್ಕ ಸ್ಥಗಿತ|
ಬೆಂಗಳೂರು(ಜು.11): ವಿಮಾನಯಾನ ಸಂಸ್ಥೆಯಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ಯುವತಿಯೊಬ್ಬಳಿಗೆ ಸೈಬರ್ ಕಳ್ಳರು ವಂಚಿಸಿದ ಘಟನೆ ನಡೆದಿದೆ.
ಮೈಸೂರು ರಸ್ತೆಯ ಹಳೇ ಗುಡ್ಡದಹಳ್ಳಿಯ 22 ವರ್ಷದ ಯುವತಿ ಮೋಸ ಹೋಗಿದ್ದು, ನೌಕರಿ ಡಾಟ್‌ಕಾಂನಿಂದ ಫೋನ್ ಮಾಡುತ್ತಿರುವುದಾಗಿ ತಿಳಿಸಿದ ಟೀನಾ ಶರ್ಮಾ ಎಂಬಾಕೆ ನಿಮ್ಮ ರೆಸ್ಯೂಮ್ ನೋಡಿದೆ. ನಿಮಗೆ ಇಂಡಿಗೋ ಏರ್‌ಲೈನ್ಸ್‌ನಲ್ಲಿ ಉದ್ಯೋಗ ಕೊಡಿಸುತ್ತೇನೆ ಎಂದು ಹೇಳಿ, ಆನ್‌ಲೈನ್‌ನಲ್ಲೇ ಸಂದರ್ಶನ ಸಹ ಮಾಡಿದ್ದಾಳೆ.
ಬಣ್ಣದ ಮಾತಿಗೆ ಮರುಳಾದ ಯುವತಿ..! ಪ್ರೀತಿಯ ಹೆಸರಲ್ಲಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ
ಬಳಿಕ ಇದಕ್ಕೆ ಶುಲ್ಕ ಭರಿಸಬೇಕಾಗುತ್ತದೆ ಎಂದು ತಿಳಿಸಿದ ಆರೋಪಿ, ತನ್ನ ಖಾತೆಗೆ 22 ಸಾವಿರ ಸಂತ್ರಸ್ತ ಯುವತಿಯಿಂದ ವರ್ಗಾಯಿಸಿಕೊಂಡಿದ್ದಾಳೆ. ಈ ಹಣ ಸಂದಾಯವಾದ ಬಳಿಕ ಟೀನಾಳ ಸಂಪರ್ಕ ಸ್ಥಗಿತವಾಗಿದ್ದು, ಕೊನೆಗೆ ಯುವತಿಯು ಪಶ್ಚಿಮ ವಿಭಾಗದ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ ಎಂದು ಅಧಿಕಾರಿಗಳು ಹೇಳಿದ್ದಾರೆ.