* ಲಿಂಗ ಪರಿವರ್ತನೆಗೆ ಮುಂದಾಗಿದ್ದ ಮಹಿಳೆಗೆ ಮೋಸ
* ಹಿಮಾಚಲ ಪ್ರದೇಶದ ಮಹಿಳೆಗೆ ಎರಡು ಲಕ್ಷ ರೂ. ವಂಚನೆ
* ಸೋಶಿಯಲ್ ಮೀಡಿಯಾ ಮೂಲಕ ಪರಿಚಯ
ಲುಧಿಯಾನ( ಜು. 15) ಲಿಂಗ ಪರಿವರ್ತನೆ ಮಾಡಿಸಿಕೊಳ್ಳಲು ಮುಂದಾಗಿದ್ದ ಮಹಿಳೆ ಮೋಸ ಹೋಗಿದ್ದಾರೆ. ಉತ್ತರ ಪ್ರದೇಶದ 22 ವರ್ಷದ ಯುವತಿಗೆ 2 ಲಕ್ಷ ರೂ. ಮೋಸವಾಗಿದೆ.
ಲಿಂಗ ಬದಲಾವಣೆ ಮಾಡಿಕೊಳ್ಳಲು ಬಯಸಿದ್ದ ಯುವತಿಗೆ ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯೊಬ್ಬರ ಪರಿಚಯವಾಗಿದೆ. ಹಿಮಾಚಲ ಪ್ರದೇಶದ ಮೂಲದ ಮಹಿಳೆ ಪಂಜಾಬ್‌ನ ಲುಧಿಯಾನಕ್ಕೆ ತೆರಳಿ ಮೋಸಹೋಗಿದ್ದಾರೆ. ತಾನು ಲಿಂಗ ಬದಲಾವಣೆ ಮಾಡಿಕೊಂಡಿದ್ದು ನಿಮಗೂ ಅನುಕೂಲವಾಗಲಿದೆ ಎಂದು ನಂಬಿಸಿದ್ದಾಳೆ.
undefined
ಮೈಸೂರು ರಾಜವಂಶದವ ಎಂದು ನಂಬಿಸಿ ವಂಚನೆ
ಕುಉಂಬಕ್ಕೆ ತಿಳಿಸದೆ ಲೂಧಿಯಾನಕ್ಕೆ ತೆರಳಿದ್ದಾರೆ. ತಂದೆಗೆ ಸೇರಿದ ಎರಡು ಲಕ್ಷ ರೂ. ತೆಗೆದುಕೊಂಡು ಬಂದಿದ್ದರು. ಲಾಡ್ಜ್ ಒಂದರಲ್ಲಿ ಉಳಿದುಕೊಳ್ಳಲು ನನ್ನ ಆನ್ ಲೈನ್ ಫ್ರೆಂಡ್ ತಿಳಿಸಿದಳು. ಅದರಂತೆ ಅಲ್ಲಿಯೇ ಇದ್ದೆ. ಈ ವೇಳೆ ಎರಡು ಲಕ್ಷ ರೂ. ಆಕೆಗೆ ಕೊಟ್ಟಿದ್ದು ಕೆಲ ದಿನ ಇಲ್ಲಿಯೇ ಕಾಯಬೇಕು ಎಂದು ಹೇಳಿದ್ದಾರೆ. ಆದರೆ ಎಷ್ಟು ದಿನವಾದರೂ ಉತ್ತರ ಬರದಿದ್ದಾಗ ನನಗೆ ಮೋಸ ಹೋಗಿದ್ದು ಗೊತ್ತಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಅಲ್ಲದೇ ನನ್ನನ್ನು ಇರುವ ಜಾಗದಿಂದಲೂ ಹೊರಹಾಕಲಾಗಿದೆ.
ಇದಾದ ಮೇಲೆ ಮೋಸಹೋದ ಮಹಿಳೆ ವಿಚಾರವನ್ನು ತನ್ನ ಸಹೋದರನಿಗೆ ತಿಳಿಸಿದ್ದಾಳೆ. ನಂತರ ಆನ್ ಲೈನ್ ಮೂಲಕ ಮತ್ತೆ ಮಹಿಳೆ ಸಂಪರ್ಕ ಮಾಡಲಾಗಿದ್ದು ಹಣ ಕೊಡುತ್ತೇನೆ ಒಂದು ಜಾಗಕ್ಕೆ ಬನ್ನಿ ಎಂದು ಕರೆದಿದ್ದಾಳೆ.
ಈ ವೇಳೆ ಅಣ್ಣನೊಂದಿಗೆ ಮೋಸಹೋದ ಯುವತಿ ತೆರಳಿದ್ದಾಳೆ. ಆಕೆಯೊಬ್ಬಳೆ ಮನೆಯೊಳಕ್ಕೆ ಹೋಗಿದ್ದು ಅಣ್ಣ ಹೊರಗಿನಿಂದ ವೀಕ್ಷಣೆ ಮಾಡುತ್ತಿದದ್ದರು. ಆದರೆ ಯುವತಿಯನ್ನು ಒಳಗೆ ಕರೆದುಕೊಂಡ ವಂಚಕಿ ಆಕೆಯ ಮೇಲೆ ಹಲ್ಲೆಗೆ ಮುಂದಾಗಿದ್ದಾಳೆ. ಇದೆಲ್ಲವನ್ನು ನೋಡುತ್ತಿದ್ದ ಸಹೋದರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ವಂಚಕಿಯನ್ನು ಬಂಧಿಸಿದ್ದಾರೆ.