ಶೃಂಗೇರಿ ಆಸಿಡ್ ದಾಳಿ ಕೇಸ್ : ನಾಲ್ವರಿಗೆ ಜೀವಾವಧಿ ಶಿಕ್ಷೆ

By Kannadaprabha News  |  First Published Jul 15, 2021, 2:29 PM IST
  • ಶೃಂಗೇರಿ ಆಸಿಡ್ ದಾಳಿ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳಿಗೆ ಶಿಕ್ಷೆ ಪ್ರಮಾಣ ಪ್ರಕಟ
  • 2015ರ ಏಪ್ರಿಲ್ 18ರಂದು ಶೃಂಗೇರಿಯಲ್ಲಿ  ನಡೆದ ಪ್ರಕರಣ
  •  ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಇಂದು ತೀರ್ಪು

ಚಿಕ್ಕಮಗಳೂರು (ಜು.15): ಶೃಂಗೇರಿ ಆಸಿಡ್ ದಾಳಿ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳಿಗೆ ಶಿಕ್ಷೆ ಪ್ರಮಾಣ ಘೋಷಿಸಿ ತೀರ್ಪು ಪ್ರಕಟಿಸಲಾಗಿದೆ. 

2015ರ ಏಪ್ರಿಲ್ 18ರಂದು ಶೃಂಗೇರಿಯಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಮಹಿಳೆಯ ಮೇಲೆ ಆಸಿಡ್ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳು ತಪ್ಪಿತಸ್ಥರು ಎಂದು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಇಂದು ತೀರ್ಪು ನೀಡಿದೆ.

Tap to resize

Latest Videos

 ವೇಶ್ಯಾವಾಟಿಕೆ ಜಾಲ ಬಟಾಬಯಲು, ದಂಧೆಯ ಕಿಂಗ್‌ಪಿನ್ ತೃತೀಯ ಲಿಂಗಿ!

ಈ ಪ್ರಕರಣ ಸಂಬಂಧ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್  ನಾಲ್ವರಿಗೆ  ಜೀವಾವಧಿ ಶಿಕ್ಷೆ ಹಾಗೂ ತಲಾ 2.50 ಲಕ್ಷ ರು. ದಂಡ ವಿಧಿಸಿದೆ.  ಮೇಲ್ಮನವಿ ಸಲ್ಲಿಸಬೇಕಾದಲ್ಲಿ ತಲಾ 2.50 ಲಕ್ಷ ದಂಡ ಪಾವತಿಸಿದ ನಂತರವಷ್ಟೇ ಅವಕಾಶ ನೀಡಲಾಗಿದೆ.

ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಗಣೇಶ್ ಅಲಿಯಾಸ್ ಗಣಿ (36), ಮಹಮ್ಮದ್ ಕಬೀರ್ (31), ವಿನೋದ್ ಕುಮಾರ್(38), ಹಾಗೂ ಅಬ್ದುಲ್ ವಾಜೀದ್(37)ಗೆ ಜೀವಾಧಿ ಶಿಕ್ಷೆ ನೀಡಲಾಗಿದೆ. 

click me!