1,000 ರೂ ವೈನ್ ಬಾಟಲಿ ಖರೀದಿಸಲು ಹೋಗಿ 1 ಲಕ್ಷ ರೂಪಾಯಿ ಕಳೆದುಕೊಂಡ ಟೆಕ್ಕಿ!

By Suvarna NewsFirst Published Dec 14, 2022, 5:49 PM IST
Highlights

ಹೊಸ ವರ್ಷ ಸಮೀಪಿಸುತ್ತಿದೆ. ರಜಾ ದಿನಗಳು ಹೆಚ್ಚಿವೆ. ಹೀಗಾಗಿ ಮನೆಯಲ್ಲಿ ಆರಾಮಾಗಿ ಕುಳಿತು ವೈನ್ ಸಿಪ್ ಮಾಡಲು ಮಹಿಳಾ ಟೆಕ್ಕಿ ಮುಂದಾಗಿದ್ದಾರೆ. ಇದಕ್ಕಾಗಿ ಆನ್‌ಲೈನ್ ಮೂಲಕ ವೈನ್ ಬಾಟಲ್ ಆರ್ಡರ್ ಮಾಡಿದ್ದಾರೆ. ಆದರೆ 1,000 ರೂಪಾಯಿ ಬಾಟಲ್‌ಗೆ 1 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
 

ಪುಣೆ(ಡಿ.14): ಕ್ರಿಸ್ಮಸ್, ಹೊಸ ವರ್ಷ ಸೇರಿದಂತೆ ಹಲವು ರಜಾ ದಿನಗಳು ಸಾಲಾಗಿದೆ. ಈ ರಜೆಗಳನ್ನು ವೈನ್ ಸಿಪ್ ಮಾಡುತ್ತಾ ಕಳೆಯಬೇಕು ಎಂದು ಮಹಿಳಾ ಟೆಕ್ಕಿ ನಿರ್ಧರಿಸಿದ್ದಾರೆ. ಇದಕ್ಕಾಗಿ ಆನ್‌ಲೈನ್ ಮೂಲಕ ವೈನ್ ಬಾಟಲಿ ಆರ್ಡರ್ ಮಾಡಲು ಮುಂದಾಗಿದ್ದಾರೆ. ಇಷ್ಟೇ ಅಲ್ಲ ಉತ್ತಮ ವೈನ್ ಬಾಟಲ್ ಹುಡುಕಿದ್ದಾರೆ. ಇದರ ಬೆಲೆ 1,000 ರೂಪಾಯಿ. ಆನ್‌ಲೈನ್ ಮೂಲಕವೇ ಪಾವತಿಸಿ ವೈನ್ ಬಾಟಲ್ ಆರ್ಡರ್ ಮಾಡಿದ್ದಾರೆ. ಆದರೆ ಖಾತೆಯಿಂದ 1 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಪುಣೆಯ ಕಲ್ಯಾಣಿನಗರದಲ್ಲಿರುವ ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನೀಯರ್ ಆಗಿರುವ ಈಕೆ, ಇದೀಗ ಯರೇವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಹಿಮಾಚಲ ಪ್ರದೇಶದ  ಮೂಲದ ಮಹಿಳೆ, ಪುಣೆಯಲ್ಲಿರುವ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.  ಆನ್‌ಲೈನ್ ವೆಬ್‌ಸೈಟ್ ಮೂಲಕ ವೈನ್ ಬಾಟಲ್ ಬುಕ್ ಮಾಡಲು ಹೋದ ಮಹಿಳಾ ಟೆಕ್ಕಿ ಇದೀಗ ಹಣ ಕಳೆದುಕೊಂಡು ಸಂಕಷ್ಟ ಎದುರಿಸುತ್ತಿದ್ದಾರೆ. ವೈನ್ ಬಾಟಲ್ ಖರೀದಿಸಲು ವೆಬ್‌ಸೈಟ್ ಒಂದನ್ನು ಚೆಕ್ ಮಾಡಿದ್ದಾರೆ. ಇಲ್ಲಿ ಸೂಚಿಸಿದ ಹಲವು ವೈನ್ ಬಾಟಲ್‌ಗಳಲ್ಲಿ ಒಂದನ್ನು ಆಯ್ಕೆ ಮಾಡಿ ಆರ್ಡರ್ ಮಾಡಲು ಹೋಗಿದ್ದಾರೆ.

Cyber Attack: ಒಟಿಪಿನೂ ಇಲ್ಲ, ಮೆಸೇಜೂ ಇಲ್ಲ..ಬರೀ ಮಿಸ್‌ ಕಾಲ್‌ಗೆ ಮಿಸ್‌ ಆಯ್ತು ಅಕೌಂಟ್‌ನಲ್ಲಿದ್ದ 50 ಲಕ್ಷ!

ಮಹಿಳಾ ಟೆಕ್ಕಿ ಅದೆಷ್ಟೇ ಪ್ರಯತ್ನಿಸಿದರೂ ಆರ್ಡರ್ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ವೆಬ್‌ಸೈಟ್‌ನಲ್ಲಿ ನೀಡಿದ ಸಹಾಯವಾಣಿಗೆ ಕರೆ ಮಾಡಿದ್ದಾರೆ.  ಕರೆ ಸ್ವೀಕರಿಸಿದ ವ್ಯಕ್ತಿ 900 ರೂಪಾಯಿ ವರ್ಗಾವಣೆ ಮಾಡುವಂತೆ ಮಹಿಳಾ ಟೆಕ್ಕಿಗೆ ಸೂಚಿಸಿದ್ದಾರೆ. 900 ರೂಪಾಯಿ ವರ್ಗಾವಣೆ ಮಾಡಲು ಮಹಿಳಾ ಟೆಕ್ಕೆಯಿಂದ ಬ್ಯಾಂಕ್ ಸೇರಿದಂತೆ ಹಲವು ಮಾಹಿತಿ ಪಡೆದುಕೊಳ್ಳಲು ಯತ್ನಿಸಿದ್ದಾರೆ. 

ಮಹಿಳಾ ಟೆಕ್ಕಿ ಹೆಚ್ಚಿನ ಮಾಹಿತಿ ನೀಡಿಲ್ಲ. 900 ರೂಪಾಯಿ ಹಣ ವರ್ಗಾವಣೆ ಮಾಡಿ ಆರ್ಡರ್ ಬುಕ್ ಮಾಡಲು ಮುಂದಾಗಿದ್ದಾರೆ. ಆದರೆ ಚಾಲಾಕಿ ಕಿಲಾಡಿಗಳು ಹಣ ಬಂದಿಲ್ಲ ಎಂದು ಮತ್ತೆ ಕರೆ ಮಾಡಿದ್ದಾರೆ. ಇಷ್ಟೇ ಅಲ್ಲ ಕ್ಯೂಆರ್ ಕೋಡ್ ನೀಡಿ ಇದಕ್ಕೆ ಹಣ ಹಾಕುವಂತೆ ಹೇಳಿದ್ದಾರೆ. ಸ್ಕಾನ್ ಮಾಡಿದ ಮಹಿಳಾ ಟೆಕ್ಕಿ, ಪಾಸ್‌ವರ್ಡ್ ಹಾಕಿದ್ದಾರೆ. ಅಷ್ಟರಲ್ಲೇ ಸೈಬರ್ ಹ್ಯಾಕರ್ಸ್ ಮಹಿಳಾ ಟೆಕ್ಕಿಯ ಖಾತೆ, ಪಿನ್‌ಕೋಡ್ ಸೇರಿದಂತೆ ಎಲ್ಲಾ ಮಾಹಿತಿಯನ್ನು ಕದ್ದಿದ್ದಾರೆ.

Bengaluru: ಪ್ಯಾನ್‌ಕಾರ್ಡ್‌ ಅಪ್‌ಡೇಟ್‌ ಹೆಸರಲ್ಲಿ 4 ಲಕ್ಷ ಎಗರಿಸಿದ ವಂಚಕ

900 ಸ್ಕಾನ್ ಹಣ ಕಟ್ ಆಗಬೇಕಿತ್ತು. ಆದರೆ ಏಕಾಏಕಿ ಖಾತೆಯಿಂದ 96,902 ರೂಪಾಯಿ ಕಡಿತಗೊಂಡಿದೆ. ಇತ್ತ ನೋಡಿದರೆ ತಮ್ಮ ವೈನ್ ಬಾಟಲ್ ಬುಕ್ ಆಗಿಲ್ಲ. ಖಾತೆಯಿಂದ ಹಣ ಹೋಗಿದೆ. ಮತ್ತೆ ಕರೆ ಮಾಡಿದರೆ ಫೋನ್ ನಂಬರ್ ಸ್ವಿಚ್ ಆಫ್ ಆಗಿದೆ. ತಾನು ಮೋಸಹೋಗಿದ್ದೇನೆ ಎಂಬುದು ಅರಿತ ಮಹಿಳಾ ಟೆಕ್ಕಿ, ಯೆರೆವಾಡ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಇದೀಗ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ಸಾಲ ಪಡೆಯಲು ಹೋಗಿ 13.97 ಲಕ್ಷ ಕಳೆದುಕೊಂಡ
ಯೂಟೂಬ್‌ನಲ್ಲಿ ಸಾಲಕ್ಕಾಗಿ ಬ್ರೌಸ್‌ ಮಾಡುತ್ತಿದ್ದ ವ್ಯಕ್ತಿಗೆ ಆನ್‌ಲೈನ್‌ ವಂಚಕರು ಲಕ್ಷಾಂತ ರು, ಹಣವನ್ನು ಆತನ ಬ್ಯಾಂಕ್‌ ಖಾತೆಯಿಂದ ವರ್ಗಾಯಿಸಿಕೊಂಡಿದ್ದಾರೆ. ಅಲ್ಲದೆ ಮಹಿಳೆ ಬೆತ್ತಲೆ ಪೋಟೋವನ್ನು ಆತನ ಭಾವಚಿತ್ರದೊಂದಿಗೆ ಜೋಡಿಸಿ ಇನ್ನಷ್ಟುಹಣಕ್ಕಾಗಿ ಪೀಡಿಸಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಸದ್ಯ ಆನ್‌ಲೈನ್‌ ವಂಚಕರಿಂದ ಲಕ್ಷಾಂತರ ರು, ಹಣ ಕಳೆದುಕೊಂಡಿರುವ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಹೋಬಳಿಯ ಹನುಮಂತಪುರ ಗ್ರಾಮದ ನಿವಾಸಿ ವಿನಯ್‌ ಬಿನ್‌ ಸುಬ್ರಮಣ್ಯ (32), ಜಿಲ್ಲಾ ಸೈಬರ್‌ ಠಾಣೆ ಪೊಲೀಸರಿಗೆ ದೂರು ನೀಡಿ ವಂಚಕರ ವಿರುದ್ದ ಕ್ರಮಕ್ಕೆ ಕೋರಿದ್ದಾರೆ.
 

click me!