
ಮೀರತ್(ಮಾ. 04) ಇದೊಂದು ವಿಚಿತ್ರ ಪ್ರಕರಣ. ಮದುವೆಗೆ ಮುನ್ನ ಜಾತಿಯನ್ನು, ಗುರುತನ್ನು ಮರೆಮಾಚಿದರೆ ಅದನ್ನು ನಿಯಂತ್ರಣ ಮಾಡಲು ಲವ್ ಜಿಹಾದ್ ಕಾನೂನು ಬಂದಿದೆ. ಆದರೆ ಹೀಗೆ ಮಾಡಿದ್ರೆ ಹೇಗೆ?
ಮದುವೆಯಾಗಬೇಕಿದ್ದರೆ ಹುಡುಗನ ತಲೆ ತುಂಬಾ ಕೂದಲು ಇತ್ತು. ಆದರೆ ಮದುವೆಯಾದ ಒಂದೇ ವರ್ಷಕ್ಕೆ ಬೋಳುತಲೆಯಾಗಿದೆ. ವಿಗ್ ಧರಸಿ ಮೋಸ ಮಾಡಿದ್ದು ತನಗೆ ವಿಚ್ಛೇದನ ಬೇಕು ಎಂದು ಮಹಿಳೆ ಕೇಳಿಕೊಂಡಿರುವ ಪ್ರಕರಣ ಇದು.
ತನ್ನ ಬೋಳು ತಲೆ ಬಗ್ಗೆ ಮದುವೆಗೆ ಮುನ್ನ ಹೇಳಿಲ್ಲ. ಹಾಗಾಗಿ ಇದು ವಂಚನೆಯಾಗುತ್ತದೆ ಎಂದು ಮಹಿಳೆ ಆರೋಪಿಸಿದ್ದಾಳೆ. ಈ ಬಗ್ಗೆ ಪೊಲೀಸರು ಕೌನ್ಸೆಲಿಂಗ್ ಸಹ ನಡೆಸಿದ್ದಾರೆ.
ನಾಲ್ಕು ಮಕ್ಕಳಾದ ಮೇಲೆ ವಿಚ್ಛೇದನಕ್ಕೆ ಹಾಟ್ ನಟಿ ನಿರ್ಧಾರ
2020 ರ ಜನವರಿಯಲ್ಲಿ (ಗಜಿಯಾಬಾದ್) ಮದುವೆಯಾಗಿತ್ತು. ಮದುವೆಯಾದ ನಂತರ ನಿಧಾನಕ್ಕೆ ಗಂಡನ ಬೋಳುತಲೆ ಬಗ್ಗೆ ಗೊತ್ತಾಗಿದೆ. ಸ್ನೇಹಿತರ ಮುಂದೆ ತನಗೆ ಗಂಡನ ಬೋಳು ತಲೆ ಕಾರಣ ಹಲವು ಸಾರಿ ಮುಜುಗರವಾಗುವಂತಹ ಸನ್ನಿವೇಶ ನಿರ್ಮಾಣ ಆಗಿದೆ ಎಂದು ಮಹಿಳೆ ಹೇಳಿದ್ದಾರೆ. ಮಹಿಳೆಗೆ ಇನ್ನೊಂದು ಸುತ್ತಿನ ಕೌನ್ಸೆಲಿಂಗ್ ಗೆ ಬರಲು ಹೇಳಲಾಗಿದೆ.
ಮುಂಬೈನಿಂದನೂ ಇದೇ ರೀತಿಯ ಪ್ರಕರಣ ವರದಿಯಾಗಿತ್ತು. ನಿಧಾನಕ್ಕೆ ಇದು ವರದಕ್ಷಿಣೆ ಕಿರುಕುಳ ದೂರಾಗಿ ಬದಲಾಗಿತ್ತು. ಒಟ್ಟಿನಲ್ಲಿ ಪೊಲೀಸರು ಈಗ ಸಂದಿಗ್ಧಕ್ಕೆ ಸಿಲುಕಿದ್ದು ಮಹಿಳೆ ಇನ್ನೊಂದು ಸುತ್ತಿನ ಕೌನ್ಸೆಲಿಂಗ್ ನಂತರ ಏನು ಹೇಳುತ್ತಾರೆ ಎಂಬುದನ್ನು ನೋಡಬೇಕು .
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ