ಏಡ್ಸ್‌ ರೋಗಿ ಎಂದು ಹೇಳಿ ಮನೆಗೆ ನುಗ್ಗಿದ ಕಾಮುಕನಿಂದ ಲೈಂಗಿಕ ಕಿರುಕುಳದಿಂದ ತಪ್ಪಿಸಿಕೊಂಡ ಮಹಿಳೆ

By BK Ashwin  |  First Published Aug 20, 2023, 8:56 PM IST

ನಾನು ಕಿರುಕುಳದಿಂದ ನನ್ನನ್ನು ರಕ್ಷಿಸಿಕೊಳ್ಳಲು ಏಡ್ಸ್‌ ರೋಗಿ ಎಂದು ಸುಳ್ಳು ಹೇಳಬೇಕಾಗಿತ್ತು. ನಾನು ರಕ್ತವನ್ನು ಎಸೆದೆ, ಅದು ಅವನನ್ನು ಭಯಭೀತಗೊಳಿಸಿತು ಎಂದು ಮಹಿಳೆ ಹೇಳಿಕೊಂಡಿದ್ದಾಳೆ. 


ಮುಂಬೈ (ಆಗಸ್ಟ್‌ 20, 2023): ಲೈಂಗಿಕ ಕಿರುಕುಳದಿಂದ ತಪ್ಪಿಸಿಕೊಳ್ಳಲು ಮಹಿಳೆಯೊಬ್ಬರು ತಾನು ಏಡ್ಸ್‌ ರೋಗಿ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. 53 ವರ್ಷದ ವಿಧವೆಯೊಬ್ಬರು ಮುಸುಕುಧಾರಿಯೊಬ್ಬ ತನ್ನ ಬೊರಿವಲಿ ಮನೆಗೆ ಮುಂಜಾನೆ ನುಗ್ಗಿದ್ದು, ಆತನ ಕಿರುಕುಳದಿಂದ ರಕ್ಷಿಸಿಕೊಳ್ಳಲು ಏಡ್ಸ್ ರೋಗಿಯಂತೆ ನಟಿಸಿರುವುದಾಗಿ ಹೇಳಿದ್ದಾರೆ.

ರಕ್ತವನ್ನು ಎಸೆದಿದ್ದು, ಇದರಿಂದ ಹೆದರಿದ ಆತ ಮನೆಯಿಂದ ಓಡಿಹೋಗಿದ್ದಾನೆ ಎಂದೂ ಮಹಿಳೆ ಹೇಳಿದ್ದಾರೆ. ಬೊರಿವಲಿ ಪೊಲೀಸರು ಈ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡು ಘಟನೆಗಳ ಸೀಕ್ವೆನ್ಸ್‌ ಅನ್ನು ಪರಿಶೀಲಿಸುತ್ತಿದ್ದಾರೆ. ದೂರುದಾರರು ಒಬ್ಬಂಟಿಯಾಗಿ ವಾಸಿಸುತ್ತಿದ್ದಾರೆ ಮತ್ತು ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ. ಅವರ ಮಗ ಮತ್ತು ಸೊಸೆ ವಿದೇಶದಲ್ಲಿ ನೆಲೆಸಿದ್ದಾರೆ ಎಂದೂ ತಿಳಿದುಬಂದಿದೆ.

Tap to resize

Latest Videos

ಇದನ್ನು ಓದಿ: ಶರದ್‌ ಪವಾರ್‌ ಆಪ್ತನ ಮನೇಲಿ 1 ಕೋಟಿಗೂ ಅಧಿಕ ಹಣ, 25 ಕೋಟಿ ಮೌಲ್ಯದ ಚಿನ್ನ, ವಜ್ರ ಸೀಜ್‌; ಸಾವಿರಾರು ಕೆಜಿ ಆಭರಣ ನಾಪತ್ತೆ!

ಮಹಿಳೆ ಕಟ್ಟಡದ ನೆಲ ಮಹಡಿಯಲ್ಲಿ ವಾಸಿಸುತ್ತಿದ್ದಾರೆ ಮತ್ತು ಆಕೆಯ ಲಿವಿಂಗ್ ರೂಮ್‌ನಲ್ಲಿರುವ ಸ್ಲೈಡಿಂಗ್ ಕಿಟಕಿ ದೋಷಯುಕ್ತ ಲ್ಯಾಚ್‌ ಹೊಂದಿದೆ. ಆಗಸ್ಟ್ 14 ರಂದು, ಅವಳು ಮಲಗಿದ್ದಾಗ ರಾತ್ರಿ 2 ಗಂಟೆ ಸುಮಾರಿಗೆ ಶಬ್ದದಿಂದ ಎಚ್ಚರವಾಯಿತು. 20 - 30 ರ ಮುಸುಕುಧಾರಿಯೊಬ್ಬ ಲಿವಿಂಗ್ ರೂಮಿನಲ್ಲಿ ನಿಂತಿದ್ದ. ಸ್ಲೈಡಿಂಗ್ ಕಿಟಕಿಗಳು ತೆರೆದಿರುವುದನ್ನು ಗಮನಿಸಿದ ದೂರುದಾರರು ಅವರು ಯಾರು ಮತ್ತು ಅವರು ಮನೆಗೆ ಹೇಗೆ ಪ್ರವೇಶಿಸಿದರು ಎಂದು ಕೇಳಿದರು. ಆ ವ್ಯಕ್ತಿ ತಾನು ಮಾದಕ ವ್ಯಸನಿಯಾಗಿದ್ದು, ಫ್ಲಾಟ್ ಅನ್ನು ದರೋಡೆ ಮಾಡುವ ಉದ್ದೇಶ ಹೊಂದಿರುವುದಾಗಿ ಹೇಳಿದ್ದಾನೆ ಎಂದು ಎಫ್‌ಐಆರ್‌ ಹೇಳುತ್ತದೆ.

ಅಲ್ಲದೆ, ತಾನು ಏಡ್ಸ್ ರೋಗಿ ಎಂದು ಹೇಳಿದಾಗ ಆತ ಆಕೆಯನ್ನು ಅಮಾನುಷವಾಗಿ ನಡೆಸಿಕೊಂಡಿದ್ದಾನೆ ಎಂದೂ ಎಫ್‌ಐಆರ್ ಹೇಳುತ್ತದೆ. "ನಾನು ಕಿರುಕುಳದಿಂದ ನನ್ನನ್ನು ರಕ್ಷಿಸಿಕೊಳ್ಳಲು ಸುಳ್ಳು ಹೇಳಬೇಕಾಗಿತ್ತು. ನಾನು ರಕ್ತವನ್ನು ಎಸೆದೆ, ಅದು ಅವನನ್ನು ಭಯಭೀತಗೊಳಿಸಿತು. ಅವನು ಮುಖ್ಯ ದ್ವಾರದಿಂದ ಓಡಿಹೋಗಿ ಹೊರಗಿನಿಂದ ಚಿಲಕ ಹಾಕಿದ’’ ಎಂದೂ ದೂರುದಾರರು ಹೇಳಿದರು. ನಂತರ ತಾನು ನೆರೆಹೊರೆಯವರನ್ನು ಕರೆದು ಬಾಗಿಲು ತೆಗೆಯಲು ಸಹಾಯ ಕೇಳಿದೆ. ಆ ದಿನವೇ ವಿಧವೆ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಸಾಕು ನಾಯಿಗಳ ವಿಚಾರವಾಗಿ ಜಗಳ: ಬಾಲ್ಕನಿಯಿಂದ್ಲೇ 8 ಜನರಿಗೆ ಶೂಟ್‌ ಮಾಡಿದ ಭದ್ರತಾ ಸಿಬ್ಬಂದಿ!

ಕಟ್ಟಡಕ್ಕೆ ವಾಚ್‌ಮನ್ ಇಲ್ಲ ಮತ್ತು ಸುತ್ತಮುತ್ತಲಿನ ಸಿಸಿಟಿವಿಗಳಲ್ಲಿ ಯಾವುದೇ ಒಳನುಗ್ಗುವವರು ಸೆರೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಈ ಬಗ್ಗೆ ತಿಳಿಸಿದ್ದಾರೆ. ಇನ್ನು, ಆರೋಪಿಯ ಬಗ್ಗೆ ಮಾಹಿತಿಗಾಗಿ ನಾವು ದೂರುದಾರ ಮತ್ತು ಆಕೆಯ ನೆರೆಹೊರೆಯವರೊಂದಿಗೆ ವಿಚಾರಣೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನು ಓದಿ: ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ 20ಕ್ಕೂ ಹೆಚ್ಚು ಮಹಿಳೆಯರ ವಂಚಿಸಿ ಕೋಟಿ ಕೋಟಿ ಲೂಟಿ ಹೊಡೆದ ‘ಹಾರ್ಟ್‌ ಸ್ಪೆಷಲಿಸ್ಟ್‌’!

click me!