ನೀನು ಕಪ್ಪು ಮಸಿ, ಪತಿ-ಅತ್ತೆ ಚುಚ್ಚು ಮಾತಿಗೆ ಬದುಕು ಅಂತ್ಯಗೊಳಿಸಿದ ಮಹಿಳೆ!

Published : Jul 23, 2024, 08:16 PM ISTUpdated : Jul 23, 2024, 08:17 PM IST
ನೀನು ಕಪ್ಪು ಮಸಿ, ಪತಿ-ಅತ್ತೆ ಚುಚ್ಚು ಮಾತಿಗೆ ಬದುಕು ಅಂತ್ಯಗೊಳಿಸಿದ ಮಹಿಳೆ!

ಸಾರಾಂಶ

ಮದುವೆಯಾಗಿ ಮೂರೇ ತಿಂಗಳಿಗೆ 25ರ ಮಹಿಳೆ ಬುದುಕು ಅಂತ್ಯಗೊಳಿಸಿದ್ದಾಳೆ. ಪತಿ ಹಾಗೂ ಆತನ ಕುಟುಂಬಸ್ಥರು ಪದೇ ಪದೇ ನೀನು ಕಪ್ಪು, ಮೇಕ್ ಅಪ್ ಮಾಡಿ ಮೋಸ ಮಾಡಿದ್ದೀಯಾ ಎಂದು ಹೀಯಾಳಿಸಿದ್ದಾರೆ.   

ಚಂಡೀಘಡ(ಜು.23) ಪತ್ನಿಯನ್ನು ಕಪ್ಪು ಎಂದು ಪತಿ ಜೊತೆಗೆ ಆತನ ಕುಟಂಬಸ್ಥರು ಪದೇ ಪದೇ ಚುಚ್ಚು ಮಾತಿನಿಂದ ನೋಯಿಸಿದ್ದಾರೆ. ಸತತ 3ತಿಂಗಳಿನಿಂದ ಮಾನಸಿವಾಗಿ ಹಿಂಸೆ ಅನುಭವಿಸಿದ ಮಹಿಳೆ ಇದೀಗ ಬದುಕು ಅಂತ್ಯಗೊಳಿಸಿದ್ದಾಳೆ. ನೀನು ಕಪ್ಪು ಮಸಿ, ಮೇಕ್ ಅಪ್‌ನಿಂದ ನಾನು ಮೋಸ ಹೋದೆ ಎಂದು ಪತಿ ಕೂಡ ಚಿತ್ರ ಹಿಂಸೆ ನೀಡಲು ಆರಂಭಿಸಿದ್ದಾನೆ. ಹೀಗಾಗಿ ಮದುವೆಯಾದ ಮೂರೇ ತಿಂಗಳಿಗೆ ಮಹಿಳೆ ಬದುಕು ಅಂತ್ಯಗೊಳಿಸಿದ ಘಟನೆ ಪಂಜಾಬ್‌ನ ಫಾಜಿಲ್ಕಾ ಜಿಲ್ಲೆಯಲ್ಲಿ ನಡೆದಿದೆ.

25 ವರ್ಷದ ನಿರ್ಮಲ್ ಕೌರ್ ಮೃತ ದುರ್ದೈವಿ. 3 ತಿಂಗಳ ಹಿಂದೆ ಮೊಗ ಗ್ರಾಮದ ದಿಲೀಪ್ ಜೊತೆ ನಿರ್ಮಲ್ ಕೌರ್ ವಿವಾಹವಾಗಿತ್ತು. ಆದರೆ ಮೂರೇ ತಿಂಗಳಲ್ಲಿ ಬುದುಕು ಅಂತ್ಯಗೊಂಡಿದೆ. ಹುಡುಗಿ ನೋಡುವ ದಿನ, ಮದುವೆ ದಿನ ಮೇಕ್ ಅಪ್ ಮಾಡಿ ನಮಗೆ ಮೋಸ ಮಾಡಿದ್ದೀಯಾ. ಅಸಲಿಗೆ ನೀನು ಕಪ್ಪು ಮಸಿ ಎಂದು ಪದೇ ಪದೇ ನೋಯಿಸಿದ್ದಾರೆ.

ಬಾಯ್‌ಫ್ರೆಂಡ್‌ ಜೊತೆ ಕುಚ್‌ಕುಚ್‌, ಲವರ್‌ಗೆ ಸುಪಾರಿ ಕೊಟ್ಟು ಗಂಡನನ್ನೇ ಸಾಯಿಸಿದ ಪತ್ನಿ!

ಪತಿ ಹಾಗೂ ಆತನ ಕುಟುಂಬಸ್ಥರು ಚುಚ್ಚು ಮಾತಿನಿಂದ ಹೀಯಾಳಿಸಿದ್ದಾರೆ. ಇಷ್ಟೇ ಅಲ್ಲ ದಿಲೀಪ್‌ಗೆ ಬೇರೊಬ್ಬಳ ಜೊತೆ ಸಂಬಂಧವಿದೆ ಅನ್ನೋದನ್ನು ನಿರ್ಮಲ್ ಕೌರ್ ತನ್ನ ಪೋಷಕರಿಗೆ ಹೇಳಿದ್ದಾಳೆ. ಮದುವೆಯಾದರೂ ಈಕೆಯ ಜೊತೆಗೆ ಫೋನ್‌ನಲ್ಲಿ ಮಾತಾನಾಡುತ್ತಿದ್ದರು. ಆಕೆ ಜೊತೆ ತೆರಳುತ್ತಿದ್ದರು ಎಂದು ನಿರ್ಮಲೌ ಕೌರ್ ಪೋಷಕರು ಹೇಳಿದ್ದಾರೆ.

ಪತಿಯ ಅಕ್ರಮ ಸಂಬಂಧ ಕುರಿತು ನಿರ್ಮಲ್ ಕೌರ್ ಆತಂಕಗೊಂಡಿದ್ದಳು. ಇದರ ಜೊತೆಗೆ ವಿನಾ ಕಾರಣ ಚುಚ್ಚು ಮಾತಿನಿಂದ ಹೀಯಾಳಿಸುತ್ತಿದ್ದರು. ಇತ್ತ ಮರಳಿ ಮನೆ ಸೇರಿದರೆ ಪೋಷಕರಿಗೂ ಕಷ್ಟ, ಸಮಾಜದ ಮುಂದೆ ತಲೆ ಎತ್ತಿ ನಡೆಯುುವುದು ಕಷ್ಟ ಎಂದು ನಾಲೆಗೆ ಹಾರಿ ಬದುಕು ಅಂತ್ಯಗೊಳಿಸಿದ್ದಾಳೆ. 

ಮಾಹಿತಿ ತಿಳಿದ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹ ಹೊರಕ್ಕೆತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇತ್ತ ಮಗಳ ಸಾವಿಗೆ ಕಾರಣರಾದ ಕುಟುಂಬದ ಸದಸ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸಿದ್ದಾರೆ. ಇತ್ತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪೋಷಕರಿಗೆ ಕ್ರಮದ ಭರವಸೆ ನೀಡಿದ್ದರೆ.

19ಕ್ಕೆ ಮದುವೆ 23ಕ್ಕೆ ಮಸಣ: ಗಂಡನ ಮನೆಯವರಿಂದಲೇ ಎಳೆ ಪ್ರಾಯದ ಗರ್ಭಿಣಿ ಸೊಸೆಯ ಭೀಕರ ಕೊಲೆ
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

The Devil Movie: ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ-ಜೈಲಿನಿಂದಲೇ Darshan ಮೆಸೇಜ್
ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು