ಪಕ್ಕದ ಮನೆ ಯುವಕನ ಜತೆ ಜಗಳ: ವ್ಯಕ್ತಿಯ ಜನನಾಂಗವನ್ನೇ ಕತ್ತರಿಸಿದ ಮಹಿಳೆ!

Published : Nov 16, 2023, 12:57 PM ISTUpdated : Nov 16, 2023, 12:58 PM IST
ಪಕ್ಕದ ಮನೆ ಯುವಕನ ಜತೆ ಜಗಳ: ವ್ಯಕ್ತಿಯ ಜನನಾಂಗವನ್ನೇ ಕತ್ತರಿಸಿದ ಮಹಿಳೆ!

ಸಾರಾಂಶ

ಆರೋಪಿಯು ತನ್ನ ಮಗನನ್ನು ಯಾವುದೋ ಕೆಲಸದ ನಿಮಿತ್ತ ತನ್ನ ಮನೆಗೆ ಕರೆಸಿಕೊಂಡಿದ್ದರು, ಅಲ್ಲಿ ಯಾವುದೋ ವಿಚಾರಕ್ಕೆ ಜಗಳವಾಗಿತ್ತು ಎಂದು ಆತನ ತಂದೆ ಆರೋಪಿಸಿದ್ದಾರೆ.

ಪ್ರಯಾಗ್‌ರಾಜ್ (ನವೆಂಬರ್ 16, 2023): ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಶರೀಫ್‌ಪುರ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ 32 ವರ್ಷದ ಮಹಿಳೆಯೊಬ್ಬರು ನೆರೆಹೊರೆಯ ಯುವಕನೊಂದಿಗೆ ಜಗಳವಾಡಿದ ನಂತರ ಆತನ ಜನನಾಂಗವನ್ನೇ ಕತ್ತರಿಸಿ ಹಾಕಿದ್ದಾರೆ. ಈ ಸಂಬಂಧ ಪೊಲೀಸರು ಮಹಿಳೆಯನ್ನು ಬಂಧಿಸಿದ್ದು, ಅಪರಾಧಕ್ಕೆ ಬಳಸಿದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ದಾಳಿಯ ಹಿಂದಿನ ನಿಖರವಾದ ಕಾರಣವನ್ನು ಪತ್ತೆಹಚ್ಚಲು ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ ಎಂದು ಕೌಶಂಬಿ ಪೊಲೀಸರು ತಿಳಿಸಿದ್ದಾರೆ. 

ಗಾಯಗೊಂಡಿರುವ 26 ವರ್ಷದ ವ್ಯಕ್ತಿ ಪ್ರಯಾಗರಾಜ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದೂ ತಿಳಿದುಬಂದಿದೆ. ಇನ್ನು, ಸಂತ್ತ್ರಸ್ತನ ತಂದೆ ಮಹಿಳೆಯ ವಿರುದ್ಧ ಐಪಿಸಿಯ ಸೆಕ್ಷನ್ 326 (ಸ್ವಯಂಪ್ರೇರಿತವಾಗಿ ಅಪಾಯಕಾರಿ ಆಯುಧದಿಂದ ತೀವ್ರವಾಗಿ ಗಾಯಗೊಳಿಸುವುದು) ಮತ್ತು 308 (ಅಪರಾಧ ನರಹತ್ಯೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದೂ ಯುಪಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ದುಬಾರಿ ಐಫೋನ್‌ 15 ಪ್ರೋ ಮ್ಯಾಕ್ಸ್‌ ಆರ್ಡರ್‌ ಮಾಡಿದ ವ್ಯಕ್ತಿಗೆ ನಕಲಿ ಆಂಡ್ರಾಯ್ಡ್‌ ಫೋನ್‌ ನೀಡಿದ ಆ್ಯಪಲ್ ಸಂಸ್ಥೆ!

ಆರೋಪಿಯು ತನ್ನ ಮಗನನ್ನು ಯಾವುದೋ ಕೆಲಸದ ನಿಮಿತ್ತ ತನ್ನ ಮನೆಗೆ ಕರೆಸಿಕೊಂಡಿದ್ದರು, ಅಲ್ಲಿ ಯಾವುದೋ ವಿಚಾರಕ್ಕೆ ಜಗಳವಾಗಿತ್ತು ಎಂದು ಆತನ ತಂದೆ ಆರೋಪಿಸಿದ್ದಾರೆ. ಹಾಗೂ, ಪಕ್ಕದ ಮನೆಯೊಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗನನ್ನು ಕಂಡು ಕೌಶಂಬಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿರುವುದಾಗಿಯೂ ಅವರು ತಿಳಿಸಿದ್ದಾರೆ. 

ಇದನ್ನು ಓದಿ: ಅಪರಿಚಿತ ಬಂದೂಕುಧಾರಿಗಳ ಮುಂದುವರಿದ ಸಂಹಾರ: ಜೈಷ್‌ ಉಗ್ರ ಮಸೂದ್‌ ಅಜರ್‌ ಆಪ್ತ ಸ್ನೇಹಿತನ ಹತ್ಯೆ

ಆದರೆ, ವೈದ್ಯರು ಅವರನ್ನು ಚಿಕಿತ್ಸೆಗಾಗಿ ಪ್ರಯಾಗ್‌ರಾಜ್‌ಗೆ ಕಳುಹಿಸಿದ್ದಾರೆ. ಮಹಿಳೆಯ ಪತಿ ಯುಎಇಯಲ್ಲಿ ವಾಸಿಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದು, ಸಂತ್ರಸ್ತ ಮಂಗಳವಾರ ಆರೋಪಿಯೊಂದಿಗೆ ಜಗಳವಾಡಿದ್ದಾರೆ ಎಂದೂ ಹೇಳಿದರು.

ಹೋಂಸ್ಟೇನಲ್ಲಿ ಕೆಲಸ ಮಾಡ್ತಿದ್ದ ಮಹಿಳೆಯನ್ನು ಕೋಣೆಯೊಳಗೆ ಎಳೆದೊಯ್ದು ಗ್ಯಾಂಗ್‌ ರೇಪ್‌: ವಿಡಿಯೋ ವೈರಲ್‌
ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಆಗ್ರಾದ ತಾಜ್‌ಗಂಜ್ ಪ್ರದೇಶದ ಹೋಂಸ್ಟೇಯಲ್ಲಿ ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಮಹಿಳೆ ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಯ ಆಕ್ಷೇಪಾರ್ಹ ವಿಡಿಯೋವನ್ನು ಈ ಹಿಂದೆ ರೆಕಾರ್ಡ್‌ ಮಾಡಲಾಗಿತ್ತು. ಅದರ ಆಧಾರದ ಮೇಲೆ ಮಹಿಳೆಯನ್ನು ಬ್ಲ್ಯಾಕ್‌ಮೇಲ್‌ ಮಾಡಲಾಗಿದೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾಳೆ.
 

ಇದನ್ನು ಓದಿ: ಅಲುವಾದಲ್ಲಿ 5 ವರ್ಷದ ಮಗುವಿನ ಮೇಲೆ ಅತ್ಯಾಚಾರ, ಕೊಲೆ ಕೇಸ್‌: ಅಪರಾಧಿಗೆ ಗಲ್ಲು ಶಿಕ್ಷೆ ನೀಡಿದ ಕೋರ್ಟ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!
ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!