ಬಾಗಲಕೋಟೆ: ಹೆಣ್ಣು ಮಕ್ಕಳು ಹೆತ್ತಿದ್ದಕ್ಕೆ ಬಾವಿಗೆ 3 ಮಕ್ಕಳ ಎಸೆದು ಕೊಂದು, ಬಾಣಂತಿ ಆತ್ಮಹತ್ಯೆ ಯತ್ನ

By Kannadaprabha News  |  First Published Aug 26, 2023, 9:02 PM IST

ಮೊದಲು ಗಂಡು ಮಗನನ್ನು ಹೆತ್ತಿದ್ದ ಸಂಗೀತಾಗೆ ಎರಡನೇ ಹೆರಿಗೆಯಲ್ಲಿ ಹೆಣ್ಣು ಮಗಳು ಜನಿಸಿದ್ದಳು. ಕಳೆದ 20 ದಿನಗಳ ಹಿಂದಷ್ಟೇ ಆದ ಮೂರನೇ ಹೆರಿಗೆಯಲ್ಲಿ ಹೆಣ್ಣು ಮಗುವೇ ಹುಟ್ಟಿತೆಂದು ಮಾನಸಿಕವಾಗಿ ನೊಂದು ಸಂಗೀತಾ ಮೂವರೂ ಮಕ್ಕಳನ್ನು ಹೊಲದಲ್ಲಿದ್ದ ಬಾವಿಗೆ ಎಸೆದು ತಾನೂ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕುಂಬಾರಹಳ್ಳದಲ್ಲಿ ನಡೆದಿದೆ.


ಜಮಖಂಡಿ(ಆ.26): ಇಬ್ಬರೂ ಹೆಣ್ಣು ಮಕ್ಕಳಾದರೆಂದು ಬೇಸರಗೊಂಡು ತಾಯಿಯೇ ತನ್ನ ಮೂವರೂ ಮಕ್ಕಳನ್ನು ಬಾವಿಗೆ ಎಸೆದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದು, ಮೂರೂ ಮಕ್ಕಳು ಮೃತಪಟ್ಟ ಹೃದಯ ವಿಧ್ರಾವಕ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕುಂಬಾರಹಳ್ಳದಲ್ಲಿ ನಡೆದಿದೆ.

ಮಗ ಶ್ರೀಶೈಲ್ (6), ಮಗಳು ಶ್ರಾವಣಿ (3) ಹಾಗೂ ಕಳೆದ 21 ದಿನಗಳ ಹಿಂದೆಯಷ್ಟೇ ಜನಿಸಿದ್ದ ಹಸುಗೂಸು ಸೌಜನ್ಯ ಮೃತಪಟ್ಟವರು. ಬಾಣಂತಿ ಸಂಗೀತಾ ಹಣಮಂತ ಗೌಡಪ್ಪಹೋಳ (26) ಅದೃಷ್ಟವಶಾತ್‌ ಬದುಕುಳಿದಿದ್ದಾಳೆ. ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, 21 ದಿನಗಳ ಹಸುಗೂಸು ಸೇರಿ ಮೂವರೂ ಮಕ್ಕಳು ಪ್ರಾಣ ತೆತ್ತಿವೆ.

Tap to resize

Latest Videos

ಬಂಧನಕ್ಕೆ ಹೆದರಿ ಕ್ರಿಮಿನಾಶಕ ಸೇವಿಸಿದ ಆರೋಪಿ; ಮಂಗಳೂರು ಜಿಲ್ಲಾಸ್ಪತ್ರೆಗೆ ದಾಖಲು!

ಮೊದಲು ಗಂಡು ಮಗನನ್ನು ಹೆತ್ತಿದ್ದ ಸಂಗೀತಾಗೆ ಎರಡನೇ ಹೆರಿಗೆಯಲ್ಲಿ ಹೆಣ್ಣು ಮಗಳು ಜನಿಸಿದ್ದಳು. ಕಳೆದ 20 ದಿನಗಳ ಹಿಂದಷ್ಟೇ ಆದ ಮೂರನೇ ಹೆರಿಗೆಯಲ್ಲಿ ಹೆಣ್ಣು ಮಗುವೇ ಹುಟ್ಟಿತೆಂದು ಮಾನಸಿಕವಾಗಿ ನೊಂದು ಸಂಗೀತಾ ಮೂವರೂ ಮಕ್ಕಳನ್ನು ಹೊಲದಲ್ಲಿದ್ದ ಬಾವಿಗೆ ಎಸೆದು ತಾನೂ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಆದರೆ, ಅಕ್ಕಪಕ್ಕದಲ್ಲಿದ್ದ ರೈತರು ನೋಡಿ ರಕ್ಷಣೆಗೆ ಧಾವಿಸುವಷ್ಟರಲ್ಲಿ ಮಕ್ಕಳು ಅಸುನೀಗಿದ್ದವು. ನೀರಿನಲ್ಲಿ ಮುಳುಗೇಳುತ್ತಿದ್ದ ಬಾಣಂತಿ (ತಾಯಿ)ಯನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ. ಸಂಗೀತಾಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಡಿವೈಎಸ್ಪಿ ಶಾಂತೀರ, ಸಿಪಿಐ ಮಲ್ಲಪ್ಪ ಮಡ್ಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

click me!