ಮಹಿಳೆಯಿಂದ 58,94 ಲಕ್ಷ ಮೌಲ್ಯದ 1.277 ಕೇಜಿ ಚಿನ್ನ ವಶ| ಆರೋಪಿತೆಯ ಬಂಧನ| ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ|
ಬೆಂಗಳೂರು(ಮಾ.10): ಬೆನ್ನು ನೋವಿನ ಬೆಲ್ಟ್‌ನಲ್ಲಿ ಅಕ್ರಮವಾಗಿ ಚಿನ್ನವನ್ನು ಸಾಗಿಸುತ್ತಿದ್ದ ಮಾಡುತ್ತಿದ್ದ ತಮಿಳುನಾಡು ಮೂಲದ ಮಹಿಳೆಯನ್ನು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
34 ವರ್ಷದ ಮಹಿಳೆಯಿಂದ 58,94 ಲಕ್ಷ ಮೌಲ್ಯದ 1.277 ಕೇಜಿ ಚಿನ್ನ ವಶಕ್ಕೆ ಪಡೆಯಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
48 ಲಕ್ಷದ ವಾಚ್ ಒಡೆದ ಕಸ್ಟಮ್ಸ್ ಅಧಿಕಾರಿಗಳು: ದೂರು
ಮಾ.8ರಂದು ಬೆಳಗ್ಗೆ ದುಬೈನಿಂದ ಆಗಮಿಸಿದ ಮಹಿಳೆ ಬೆನ್ನು ನೋವಿನ ಬೆಲ್ಟ್ ಹಾಕಿಕೊಂಡು ಹೋಗುತ್ತಿದ್ದಳು. ಈ ವೇಳೆ ಅನುಮಾನಗೊಂಡು ಆಕೆಯನ್ನು ತಪಾಸಣೆ ನಡೆಸಿದಾಗ ಬೆಲ್ಟ್‌ನ ಗಾತ್ರದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಕೂಡಲೇ ಆಕೆ ಧರಿಸಿದ್ದ ಬೆಲ್ಟ್ ಪಡೆದು ಪರಿಶೀಲಿಸಿದಾಗ ಚಿನ್ನವನ್ನು ಪ್ಲಾಸ್ಟಿಕ್ ಕವರ್ನಲ್ಲಿ ಇಟ್ಟು ಹೊಲಿಗೆ ಹಾಕಲಾಗಿತ್ತು. ಈ ಸಂಬಂಧ ಆಕೆಯನ್ನು ಬಂಧಿಸಲಾಗಿದೆ ಬೆಂಗಳೂರಿನ ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದರು.