ಜೈಲಲ್ಲಿದ್ದ ಮೊದಲ ಪತಿ: 2ನೇ ಪತಿ ಜತೆ ಜಾಲಿಯಾಗಿದ್ದ ‘ಮೃತ’ ಮಹಿಳೆ..!

Published : Dec 13, 2022, 03:09 PM IST
ಜೈಲಲ್ಲಿದ್ದ ಮೊದಲ ಪತಿ: 2ನೇ ಪತಿ ಜತೆ ಜಾಲಿಯಾಗಿದ್ದ ‘ಮೃತ’ ಮಹಿಳೆ..!

ಸಾರಾಂಶ

ಆರೋಪಿಗಳಾದ ಪತಿ ಹಾಗೂ ಆತನ ಗೆಳೆಯ ಸ್ಥಳೀಯ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರನ್ನು 2016ರಲ್ಲಿ ಮಹಿಳೆಯ ತಂದೆಯ ದೂರಿನ ಆಧಾರದ ಮೇಲೆ ವೃಂದಾವನ ಪೊಲೀಸ್‌ ಠಾಣೆಯ ಪೊಲೀಸರು ಬಂಧಿಸಿದ್ದರು.

ಕಲ ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾಳೆಂದು (Death) ಬಿಂಬಿತವಾಗಿರುವ ಮಹಿಳೆಯೊಬ್ಬರು (Lady) ತನ್ನ ಎರಡನೇ ಪತಿ (Second Husband) ಜತೆ ಆರಾಮಾಗಿರುವ ವಿಚಿತ್ರ ಪ್ರಕರಣ ಉತ್ತರ ಪ್ರದೇಶದಲ್ಲಿ (Uttar Pradesh) ಬೆಳಕಿಗೆ ಬಂದಿದೆ. ಇನ್ನೊಂದೆಡೆ, ಅದೇ ಮಹಿಳೆಯನ್ನು ಕೊಲೆ ಮಾಡಿದ ಆರೋಪದ ಮೇಲೆ ಆಕೆಯ ಮೊದಲ ಪತಿ ಜೈಲಿನಲ್ಲಿ (Jail) 18 ತಿಂಗಳ ಕಾಲ ಶಿಕ್ಷೆ (Punishment) ಅನುಭವಿಸಿದ್ದಾರೆ. ಸದ್ಯ, ಈಕೆಯನ್ನು ವಶಕ್ಕೆ ಪಡೆಯಲಾಗಿದ್ದು, ಪೊಲೀಸರು (Police) ಈ ಸಂಬಂಧ ವಿವರವಾದ ತನಿಖೆಯನ್ನು ಆರಂಭಿಸಿದ್ದಾರೆ. 32 ವರ್ಷದ ಸೋನು ಸೈನಿ ಜೈಲಿನಲ್ಲಿ 18 ತಿಂಗಳ ಶಿಕ್ಷೆ ಅನುಭವಿಸಿದ್ದರೆ, ಇದರ ಜತೆಗೆ ಆ ವ್ಯಕ್ತಿಯ ಗೆಳೆಯ 30 ವರ್ಷದ ಗೋಪಾಲ್‌ ಸೈನಿ 9 ತಿಂಗಳ ಶಿಕ್ಷೆ ಅನುಭವಿಸಿದ್ದಾರೆ. ಅದೂ, ಆರ್ತಿ ದೇವಿಯನ್ನು ಕೊಂದಿರುವ ಆರೋಪದ ಮೇಲೆ. ಸದ್ಯ ಸತ್ತಿದ್ದಾಳೆಂದೇ ಎಲ್ಲರೂ ತಿಳಿದಿದ್ದ ಆರ್ತಿ ದೇವಿಯನ್ನು ವಶಕ್ಕೆ ಪಡೆಯಲಾಗಿದ್ದು, ಅವರನ್ನು ಕೊಂದ ಆರೋಪದ ಮೇಲೆ ಜೈಲಿನಲ್ಲಿದ್ದ ಇಬ್ಬರು ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. 

ಉತ್ತರ ಪ್ರದೇಶದ ವೃಂದಾವನದಲ್ಲಿ 2015ರಿಂದ ಆರ್ತಿ ದೇವಿ ತನ್ನ ಬಾಡಿಗೆ ಮನೆಯಿಂದ ನಾಪತ್ತೆಯಾಗಿದ್ದಾರೆಂದು ಪೊಲೀಸ್‌ ದಾಖಲೆಗಳಲ್ಲಿದೆ. ನಂತರ, ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಅದು ನಾಪತ್ತೆಯಾಗಿರುವ ನನ್ನ ಮಗಳದ್ದು ಎಂದು ತಂದೆ ಹೇಳಿಕೊಂಡಿದ್ದರು. ಆದರೆ, ಅನುಮಾನದ ಆಧಾರದ ಮೇಲೆ ಅವರನ್ನು ನಂತರ ಬಂಧಿಸಲಾಯ್ತು. ಆರೋಪಿಗಳಾದ ಪತಿ ಹಾಗೂ ಆತನ ಗೆಳೆಯ ಸ್ಥಳೀಯ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರನ್ನು 2016ರಲ್ಲಿ ಮಹಿಳೆಯ ತಂದೆಯ ದೂರಿನ ಆಧಾರದ ಮೇಲೆ ವೃಂದಾವನ ಪೊಲೀಸ್‌ ಠಾಣೆಯ ಪೊಲೀಸರು ಬಂಧಿಸಿದ್ದರು. ಅಲ್ಲದೆ, ಈ ಇಬ್ಬರನ್ನು ಹಿಡಿದ ಪೊಲೀಸರಿಗೆ 15 ಸಾವಿರ ರೂ. ಬಹುಮಾನವನ್ನೂ ನೀಡಲಾಗಿತ್ತು ಎಂದು ತಿಳಿದುಬಂದಿದೆ. 

ಇದನ್ನು ಓದಿ: Bengaluru Crime: ಅಪ್ರಾಪ್ತೆ ಮೇಲೆ ಅತ್ಯಾಚಾರ: ವೃದ್ಧನ ಹೊಡೆದು ಕೊಂದ ಕುಟುಂಬಸ್ಥರು

ಇನ್ನು, ಈ ಸಂಬಂಧ ಮಾಹಿತಿ ನೀಡಿದ ಪೊಲೀಸ್‌ ಅಧಿಕಾರಿ, ಸೋನು ಸೈನಿ ಆರ್ತಿ ದೇವಿಯನ್ನು ರಾಜಸ್ಥಾನದ ಕರೌಲಿ ಹಾಗೂ ದೌಸಾ ಜಿಲ್ಲೆಗಳ ಗಡಿಯಲ್ಲಿ ಭೇಟಿ ಮಾಡಿದ್ದರು. ಮಹಿಳೆಯ ತಂದೆ ಸೂರಜ್‌ ಪ್ರಕಾಶ್‌ ಗುಪ್ತಾ ಸಹ ಆ ವೇಳೆ ಇದ್ದರು. 2015ರಲ್ಲಿ ಅವರು ಮಹಿಳೆಯ ತಂದೆಗೆ ಹೇಳದೆ ಮದುವೆಯಾಗಿದ್ದರು, ಈ ಸಂಬಂಧ ತಂದೆ ದೂರು ನೀಡಿದ್ದರು. ಬಳಿಕ, ಮಾರ್ಚ್‌ 2016ರಲ್ಲಿ ಮೂವರು ಆರೋಪಿಗಳ ವಿರುದ್ಧ ಕೊಲೆ ಕೇಸ್‌ನಡಿ ಎಫ್‌ಐಆರ್‌ ದಾಖಲಿಸಲಾಯ್ತು. ಅಲ್ಲದೆ, ಸೋನು ಹಾಗೂ ಗೋಪಾಲ್‌ ಅವರನ್ನು ಬಂಧಿಸಲಾಯ್ತು. ಬಳಿಕ ಅಲಾಹಾಬಾದ್‌ ಹೈಕೋರ್ಟ್‌ ಅವರಿಗೆ ಜಾಮೀನು ನೀಡಿತ್ತು ಎಂದೂ ಪೊಲೀಸ್‌ ಅಧಿಕಾರಿ ಹೇಳಿದ್ದಾರೆ. 

6 ವರ್ಷಗಳ ನಂತರ ಸೋನು ಹಾಗೂ ಗೋಪಾಲ್‌, ಸತ್ತಿದ್ದಾಳೆ ಎಂದು ಬಿಂಬಿತರಾಗಿರುವ ಮಹಿಳೆಯನ್ನು ಮಥುರಾ ಪೊಲೀಸ್‌ ಮಾಹಿತಿ ನೀಡಿದ್ದಾರೆ. ಭಾನುವಾರ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದ್ದು, ಆಕೆಯ ಬಳಿ ಎರಡು ಬೇರೆ ಬೇರೆ ಹೆಸರುಳ್ಳ ಹಾಗೂ ಬೇರೆ ಬೇರೆ ಜನ್ಮ ದಿನಾಂಕವುಳ್ಳ ಆಧಾರ್‌ ಕಾರ್ಡ್‌ ಪತ್ತೆಯಾಗಿದೆ ಎಂದೂ ಉತ್ತರ ಪ್ರದೇಶದ ವೃಂದಾವನದ ಪೊಲೀಸರು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: Udupi: ಕುರುಪ್ ಸಿನಿಮಾ ಮಾದರಿ ಕೊಲೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್, ವಿಚಾರಣಾಧೀನ ಖೈದಿ ಜೈಲಿನಲ್ಲೇ ಆತ್ಮಹತ್ಯೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!