
ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಜು.23): ಅಪಘಾತದಲ್ಲಿ ಗುರುತೇ ಸಿಗದಂತೆ ಜಜ್ಜಿ ಹೋಗಿದ್ದ ವ್ಯಕ್ತಿ ಯಾರೆಂದು ಪತ್ತೆ ಮಾಡಲು ಸಂಚಾರಿ ಪೊಲೀಸರು ಸಿಕ್ಕಾಪಟ್ಟೆ ಕಷ್ಟಪಟ್ಟಿದ್ದಾರೆ. ಅದಕ್ಕಾಗಿ ಪೊಲೀಸ್ರು ಮಾಡಿರೋ ಅದ್ಬುತವಾದ ಕೆಲಸಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲದೆ ಅಪಘಾತಕ್ಕೆ ಕಾರಣವಾಗಿದ್ದ ಲಾರಿ ಚಾಲಕನನ್ನೂ ಸಹ ಲಾರಿ ಚಕ್ರಕ್ಕೆ ಅಂಟಿಕೊಂಡಿದ್ದ ರಕ್ತದ ಕಲೆ ಆಧಾರದ ಮೇಲೆ ಬಂಧಿಸಿದ್ದಾರೆ. ಬೆಂಗಳೂರಿನ ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸರು ಅಪರೂಪದಲ್ಲಿ ಅಪರೂದ ಘಟನೆಗೆ ಸಾಕ್ಷಿಯಾಗಿದ್ದಾರೆ. ಪೊಲೀಸರ ಜನ ಮೆಚ್ಚಿದ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಷ್ಟಕ್ಕೂ ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸ್ರು ಮಾಡಿದ ಕೆಲಸವಾದ್ರೂ ಏನೂ ಅಂತೀರಾ..? ಅಂದು ಜುಲೈ 16 ಮಧ್ಯರಾತ್ರಿ 12 : 30ರ ಸುಮಾರಿಗೆ ವಿಲ್ಸನ್ ಗಾರ್ಡನ್ನ ಮರಿಗೌಡ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಪರಿಚಿತ ವ್ಯಕ್ತಿಗೆ ವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆಯುತ್ತದೆ. ಈ ಅಪಘಾತದಲ್ಲಿ ಅಪರಿಚಿತ ವ್ಯಕ್ತಿಯ ಗುರುತೇ ಸಿಗದ ಹಾಗೆ ಮುಖಚರ್ಯೆ ಬದಲಾಗುತ್ತದೆ. ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ಯಾರೆಂದು ಪತ್ತೆ ಮಾಡಲು ವ್ಯಕ್ತಿಯ ಮುಖ ಗುರುತೇ ಸಿಗದ ಹಾಗೆ ಜಜ್ಜಿಹೋಗಿರುತ್ತೆ. ಅಲ್ಲದೆ ಆ ವ್ಯಕ್ತಿಯ ಬಳಿ ಮೊಬೈಲ್ ಆಗಲಿ, ಗುರುತು ಪತ್ತೆ ಹಚ್ಚುವಂತ ಗುರುತಿನ ಚೀಟಿಯಾಗಲಿ ಇರೋದಿಲ್ಲ. ಇದು ಪೊಲೀಸರ ಸವಾಲಿನ ಕೆಲಸವಾಗಿರುತ್ತೆ.
ನಂತ್ರ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಪಣತೊಟ್ಟ ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸರು ತನಿಖೆ ಆರಂಭಿಸ್ತಾರೆ. ಅದರ ಭಾಗವಾಗಿಯೇ ಜಜ್ಜಿಹೋಗಿದ್ದ ಮುಖದ ಮಾಂಸವನ್ನ ವೈದ್ಯರ ಸಾಹಯದಿಂದ ಮತ್ತೆ ಜೋಡಿಸಿ, ತಕ್ಕಮಟ್ಟಿಗೆ ಮುಖ ಶೇಪ್ಗೆ ಬರೋ ಹಾಗೇ ಮಾಡಿಸ್ತಾರೆ. ನಂತರ ಅದರ ಪೋಟೋ ತೆಗೆದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುತ್ತಾಡಿ ಸುತ್ತಾಡಿ ವ್ಯಕ್ತಿ ಯಾರೆಂದು ಪತ್ತೆ ಹಚ್ಚುತ್ತಾರೆ.
ರೈಲ್ವೆ ಸ್ಟೇಷನ್‌ನಲ್ಲೇ ಅತ್ಯಾಚಾರ: ಕೃತ್ಯವೆಸಗಿದ 4 ಉದ್ಯೋಗಿಗಳ ಬಂಧನ
ಮೃತ ವ್ಯಕ್ತಿ ವಿಲ್ಸನ್ ಗಾರ್ಡನ್ ನಿವಾಸಿ ಕುಮಾರ್ ಅನ್ನೋದು ಗೋತ್ತಾಗುತ್ತೆ. ಕುಮಾರ್ ಮರಗೆಲಸ ಮಾಡಿಕೊಂಡಿದ್ದು ಜೀವನ ಸಾಗಿಸುತ್ತಿದ್ದು, ಅಂದು ಕೆಲಸ ಮುಗಿಸಿ ಮನೆಗೆ ಹೋಗುತ್ತಿರುವಾಗ ಈ ಅಪಘಾತ ಆಗಿದೆ ಅನ್ನೋ ವಿಚಾರ ತಿಳಿಯುತ್ತೆ. ನಂತ್ರ ಕುಮಾರ್ ಮೃತದೇಹವನ್ನ ಮನೆಯವರಿಗೆ ಹಸ್ತಾಂತರ ಮಾಡ್ತಾರೆ.
ದೆಹಲಿಯಲ್ಲಿ ವ್ಯಕ್ತಿಯನ್ನು ಕೊಂದು ಫ್ರಿಡ್ಜ್‌ನಲ್ಲಿಟ್ಟ ಪಾತಕಿ..!
ಮೃತ ವ್ಯಕ್ತಿಯ ಗುರುತು, ವಿಳಾಸ ಪತ್ತೆ ಮಾಡಿದ ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸ್ರು, ಅಪಘಾತಕ್ಕೆ ಕಾರಣವಾದ ಲಾರಿ ಯಾವುದು ಹಾಗೂ ಅದರ ಚಾಲಕ ಯಾರೆಂದು ಪೆತ್ತೆ ಹಚ್ಚಲು ಮುಂದಾಗ್ತಾರೆ. ಅದಕ್ಕಾಗಿ ಹಲವಾರು ಸಿಸಿಟಿವಿಗಳ ದೃಶ್ಯಗಳನ್ನಯ ಹುಡುಕಾಡಿ, ಅದರಲ್ಲಿ ಅಪಘಾತಕ್ಕೆ ಕಾರಣವಾದ ಟಿಪ್ಪರ್ ಲಾರಿ ಯಾವುದೆಂದು ತಿಳಿದುಕೊಂಡು, ಲಾರಿ ಚಕ್ರಕ್ಕೆ ಅಂಟಿಕೊಂಡಿದ್ದ ರಕ್ತದ ಕಲೆ ಆಧಾರದ ಮೇಲೆ ಟಿಪ್ಪರ್ ಲಾರಿ ಪತ್ತೆ ಮಾಡಿದ್ದಾರೆ. ನಂತ್ರ ಲಾರಿ ಚಾಲಕನನ್ನ ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ