ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಗಂಡನಿಂದಲೇ 38 ಲಕ್ಷ ರೂಪಾಯಿ ನಗದು ಜೊತೆ 460 ಗ್ರಾಂ ಚಿನ್ನವನ್ನೂ ಲಪಟಾಯಿಸಿ ಈ ಪತ್ನಿ ಮಾಡಿದ್ದೇನು ನೋಡಿ!
ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹಲವಾರು ಜನರಿಗೆ ಇನ್ಯಾರೋ ಪಂಗನಾಮ ಹಾಕಿರುವುದನ್ನು ಓದುತ್ತಲೇ ಇರುತ್ತೇವೆ. ಕೆಲಸದ ಹೆಸರಿನಲ್ಲಿ, ದುಡ್ಡು ಡಬಲ್ ಆಗುವ ಆಮಿಷ ಒಡ್ಡಿ, ಇನ್ನೇನೋ ಹೇಳಿ ಮೂರನೆಯ ವ್ಯಕ್ತಿಗಳಿಂದ ಹಣ ವಸೂಲು ಮಾಡುವುದು ಮಾಮೂಲು. ಆದರೆ ಇಲ್ಲೊಬ್ಬ ಪತ್ನಿ, ತನ್ನ ಬಾಯ್ಫ್ರೆಂಡ್ಗೋಸ್ಕರವಾಗಿ ಪತಿಗೇ ಪಂಗನಾಮ ಹಾಕಿದ್ದಾರೆ. ಬಾಯ್ಫ್ರೆಂಡ್ಗೆ ಕಾರು ಕೊಡಿಸುವ ಸಲುವಾಗಿ ಗಂಡನಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ 38 ಲಕ್ಷ ರೂಪಾಯಿ ಪೀಕಿದ್ದಾಳೆ! ಈ ಹಣದಲ್ಲಿ ತನ್ನ ಬಾಯ್ಫ್ರೆಂಡ್ಗೆ ಕಾರು ಗಿಫ್ಟ್ ಮಾಡಿರೋದೂ ಅಲ್ಲದೇ, ಅವನ ಮನೆ ಖರೀದಿಗೂ ಸಹಾಯ ಮಾಡಿದ್ದಾಳೆ. ಗಂಡನ ದುಡ್ಡು ಮಾತ್ರವಲ್ಲದೇ ಮನೆಯಲ್ಲಿದ್ದ ಚಿನ್ನವನ್ನೆಲ್ಲಾ ಕದ್ದು, ಅದೇ ಮಾದರಿಯ ನಕಲಿ ಚಿನ್ನವನ್ನೂ ಇಟ್ಟು ಹಣವನ್ನೆಲ್ಲಾ ಗೆಳೆಯನಿಗೆ ಕೊಟ್ಟಿದ್ದಾಳೆ!
ತನ್ನ ಗೆಳೆಯನಿಗೆ ಸಹಾಯ ಮಾಡಲು ದೊಡ್ಡ ಸ್ಕೆಚ್ ಹಾಕಿದ್ದಾಳೆ ಈ ಪತ್ನಿ. ಮೊದಲಿಗೆ ತನ್ನ ಗೆಳೆಯನನ್ನು ತನ್ನ ಗಂಡನಿಗೆ ಪರಿಚಯಿಸಿದಳು. ಪತಿಗೆ ಸರ್ಕಾರಿ ಕೆಲಸದ ಹುಚ್ಚು. ಸರ್ಕಾರಿ ಉದ್ಯೋಗಕ್ಕಾಗಿ ಹುಡುಕಾಟ ನಡೆಸಿದ್ದನ್ನೇ ಬಂಡವಾಳ ಮಾಡಿಕೊಂಡಳು. ತನ್ನ ಗೆಳೆಯನಿಗೆ ಸರ್ಕಾರಿ ಸಂಪರ್ಕವಿದೆ. ಆತ ಹೇಳಿದ್ರೆ ಸರ್ಕಾರಿ ಜಾಬ್ ಗ್ಯಾರೆಂಟಿ ಎಂದು ಪತಿಯನ್ನು ನಂಬಿಸಿಬಿಟ್ಟಳು. ಸರ್ಕಾರಿ ಕೆಲಸದ ಕನಸು ಕಂಡ ಗಂಡ, ಪತ್ನಿಯ ಮಾತು ನಂಬಿ 38 ಲಕ್ಷ ರೂಪಾಯಿ ಕೊಟ್ಟುಬಿಟ್ಟ. ಈ ಪುಣ್ಯಾತ್ಗಿತ್ತಿ ಇಷ್ಟಕ್ಕೇ ಸುಮ್ಮನಾಗಲಿಲ್ಲ. ಮನೆಯಲ್ಲಿ ಒಂದಿಷ್ಟು ಚಿನ್ನಾಭರಣ ಇತ್ತು. ಅದೇ ಮಾದರಿಯ ನಕಲಿ ಚಿನ್ನಾಭರಣ ತಯಾರಿಸಿ, ಅದನ್ನು ಅಸಲಿ ಬಳಿ ಇಟ್ಟು, ಅದನ್ನೂ ಲವರ್ಗೆ ಕೊಟ್ಟು ಬಿಟ್ಟಳು. ಎಲ್ಲಾ ಸೆಟಲ್ ಆದ್ಮೇಲೆ ಹೋಗುವ ಪ್ಲ್ಯಾನ್ ಇತ್ತೋ ಗೊತ್ತಿಲ್ಲ.
ಓಡಿಹೋಗಲು ನಿರಾಕರಿಸಿದ ವಿವಾಹಿತೆಯ ಮನೆಗೆ ಹೆಣ್ಣಿನ ವೇಷದಲ್ಲಿ ಬಂದ... ಮುಂದಾದದ್ದು ಘೋರ ದುರಂತ!
ಆ ಹಣವನ್ನು ಬಳಸಿಕೊಂಡು, ಅವಳು ತನ್ನ ಗೆಳೆಯನಿಗಾಗಿ ಒಂದು ಕಾರನ್ನು ಖರೀದಿಸಿದಳು ಮತ್ತು 460 ಗ್ರಾಂ ಚಿನ್ನದ ಆಭರಣಗಳನ್ನು ಮಾರಿ ಗೆಳೆಯ ಮನೆಯನ್ನು ನಿರ್ಮಿಸಲು ಹೆಚ್ಚುವರಿ ಹಣವನ್ನು ಸಹ ನೀಡಿದಳು. ಕೊನೆಗೆ ಪತಿಯನ್ನು ತೊರೆದು ಕದ್ದುಮುಚ್ಚಿ ಹೋಗುವ ಪ್ಲ್ಯಾನ್ ಎಲ್ಲಾ ಯೋಚಿಸಿದ್ದಿರಬಹುದು. ಆದರೆ, ಆಕೆಯ ಗ್ರಹಚಾರ ಸರಿಯಿರಲಿಲ್ಲ.
ಇದ್ದಬಿದ್ದ ಹಣವೆಲ್ಲಾ ಸರ್ಕಾರಿ ಉದ್ಯೋಗಕ್ಕೆಂದು ಕೊಟ್ಟಿದ್ದ ಕಾರಣ, ಹಣದ ಅವಶ್ಯಕತೆ ಬಿತ್ತು. ಆಗ ಆಕೆಯ ಮಾವ, ಚಿನ್ನವನ್ನು ಅಡುವು ಇಟ್ಟು ದುಡ್ಡು ಪಡೆಯುವುದಕ್ಕಾಗಿ ಆ ಚಿನ್ನಾಭರಣ ತೆಗೆದುಕೊಂಡು ಬ್ಯಾಂಕ್ಗೆ ಹೋದಾಗ ಶಾಕ್ ಆಗಿಬಿಟ್ಟರು. ಅಲ್ಲಿ ಇದು ನಕಲಿ ಎಂದು ತಿಳಿಯಿತು. ಮೊದಲಿಗೆ ಇದು ನಕಲಿ ಆಗಲು ಸಾಧ್ಯವೇ ಇಲ್ಲ ಎಂದು ಮಾವ ವಾದಿಸಿದರು. ಆದರೆ ಬ್ಯಾಂಕ್ನಲ್ಲಿ ಅವರ ಮಾನ ಹರಾಜು ಆಗೋಗಿತ್ತು. ಇವರನ್ನೇ ಮೋಸಗಾರರು ಎನ್ನುವಂತೆ ಅಲ್ಲಿ ನೋಡಲಾಯಿತು. ಕೊನೆಗೆ ಬಂದು ಎಲ್ಲಾ ವಿಚಾರಣೆ, ತನಿಖೆ ಮಾಡಿದಾಗ ಮಹಿಳೆಯ ಮೋಸದ ಅರಿವಾಗಿದೆ. ಕೂಡಲೇ ಮಾವ ಮತ್ತು ಪತಿ ಸೇರಿ ಆಕೆಯ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಇಷ್ಟೆಲ್ಲಾ ಆಗುತ್ತಿದ್ದಂತೆಯೇ ತಾನು ಬಲೆಗೆ ಬೀಳುವುದು ಖಾತರಿಯಾಗುತ್ತಿದ್ದಂತೆಯೇ ಮಹಿಳೆಯರ ಪರವಾಗಿರುವ ಕಾನೂನನ್ನು ಉಪಯೋಗಿಸಿಕೊಂಡಿರುವ ಈ ಚಾಲಾಕಿ ಗಂಡ ಮತ್ತು ಮಾವನ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿದ್ದಾಳೆ! ಮುಂದೇನಾಗುತ್ತೋ ನೋಡಬೇಕಿದೆ.