
ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಂದಲೇ ಬರ್ಬರ ಕೃತ್ಯಗಳು ನಡೆಯುತ್ತಿರುವುದು ವರದಿಯಾಗುತ್ತಿದೆ. ಎಲ್ಲಿ ನೋಡಿದರೂ ಪತಿಯ ಸಾಯಿಸಿದ ಪತ್ನಿ, ವಿಷ ಹಾಕಿದ ಹೆಂಡತಿ, ಪ್ರಿಯಕರನ ಜೊತೆಗೂಡಿ ಪತಿಯನ್ನೇ ಮುಗಿಸಿದ ಪತ್ನಿ, ಹನಿಮೂನ್ನಲ್ಲಿಯೇ ಮುಹೂರ್ತ ಇಟ್ಟ ಪತ್ನಿ... ಇಂಥ ಭಯಾನಕ ಘಟನೆಗಳೇ ವರದಿಯಾಗುತ್ತಿರುವುದು ನಿಜಕ್ಕೂ ಆತಂಕಕಾರಿಯಾಗಿದೆ. ಇದೀಗ ಅಂಥದ್ದೇ ಇನ್ನೊಂದು ಘಟನೆ ನಡೆದಿದೆ. ಗಂಡನ ಹುಟ್ಟುಹಬ್ಬದ ದಿನವೇ ಆತನಿಗೆ ಸಾವಿನ ಮುಹೂರ್ತ ಫಿಕ್ಸ್ ಮಾಡಿದ ಪತ್ನಿ, ಕೊನೆಗೆ ಗಂಡನ ಹೆಣದ ಮುಂದೆ ಕುಳಿತು ಬಿಕ್ಕಿಬಿಕ್ಕಿ ಅತ್ತು ನಾಟಕ ಮಾಡಿದ್ದಾಳೆ. ಗಂಡನನ್ನು ಆಕೆಯೇ ಮುಗಿಸಿರುವ ಬಗ್ಗೆ ಯಾವುದೇ ಸೂಚನೆಯನ್ನೂ ಕೊಡದ ರೀತಿಯಲ್ಲಿ ಹೀಗೆ ಮಾಡಿದ್ದಳು. ಆದರೆ ಕೊನೆಗೆ ಏನಾಯ್ತು ನೋಡಿ.
ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಆಗ್ರಾದಲ್ಲಿ. ಜಿತೇಂದ್ರ ಎನ್ನುವವರೇ ಪತ್ನಿಯಿಂದ ಹ*ತ್ಯೆಗೆ ಒಳಗಾದವರು. ಮೂರು ವರ್ಷಗಳ ಹಿಂದೆ ಜಿತೇಂದ್ರ ಅವರ ಮದುವೆಯಾಗಿತ್ತು. ಆದರೆ ಕೆಲವು ಕಾರಣಗಳಿಂದ ದಂಪತಿಯ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಈ ಬಗ್ಗೆ ಪತ್ನಿ ತನ್ನ ತವರಿನವರಿಗೂ ವಿಷಯ ತಿಳಿಸಿದ್ದಳು. ಆದ್ದರಿಂದ ಆಕೆಯ ತಂದೆ ಕೂಡ ಅಳಿಯನನ್ನು ಮುಗಿಸುವ ಪ್ಲ್ಯಾನ್ ರೂಪಿಸಿ, ಮಗಳ ಜೊತೆ ಎಲ್ಲಾ ಸ್ಕೆಚ್ ತಯಾರಿಸಿದ್ದರು.
ಅಂದು ಜಿತೇಂದ್ರ ಅವರ ಹುಟ್ಟುಹಬ್ಬ. ಈ ತಂದೆ-ಮಗಳು ಅಳಿಯನ ಹುಟ್ಟುಹಬ್ಬವನ್ನು ತಮ್ಮ ಮನೆಯಲ್ಲಿಯೇ ಮಾಡುವುದಾಗಿ ಕರೆದಿದ್ದಾರೆ. ಅದಕ್ಕೆ ಸಕಲ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಭರ್ಜರಿಯಾಗಿ ಅರೇಂಜ್ ಕೂಡ ಮಾಡಲಾಗಿತ್ತು. ಆದರೆ ಈ ಅರೇಂಜ್ಮೆಂಟ್ ಜಿತೇಂದ್ರ ಅವರ ಹುಟ್ಟುಹಬ್ಬದ್ದಲ್ಲ, ಬದಲಿಗೆ ಸಾವಿನ ಬಾಯಿಗೆ ನೂಕುವುದು ಎಂಬ ಸೂಚನೆಯೂ ಅವರಿಗೆ ಸಿಗಲಿಲ್ಲ. ಕೊನೆಗೆ ಪಾನೀಯ ವಿತರಣೆ ಮಾಡಲಾಯಿತು. ಅದರಲ್ಲಿ ಈ ತಂದೆ- ಮಗಳು ಸೇರಿ ವಿಷ ಸೇರಿಸಿದ್ದರು. ಅದನ್ನು ಕುಡಿದ ಬಳಿಕ ಜಿತೇಂದ್ರ ಸಾವನ್ನಪ್ಪಿದ್ದರು.
ಬಳಿಕ ಮನೆಯಲ್ಲಿ ನಾಟಕ ಆರಂಭವಾಯಿತು. ಪತ್ನಿ, ಮಾವ ಎಲ್ಲರೂ ಬಿಕ್ಕಿಬಿಕ್ಕಿ ಅತ್ತರು. ಈ ಸಾವಿಗೆ ತಾವೇ ಕಾರಣ ಎನ್ನುವುದು ಪೊಲೀಸರಿಗೆ ತಿಳಿಯಲು ಸಾಧ್ಯವೇ ಇಲ್ಲ ಎನ್ನುವ ರೀತಿಯಲ್ಲಿ ಎಲ್ಲಾ ಪ್ಲ್ಯಾನ್ ಫಿಕ್ಸ್ ಆಗಿತ್ತು. ಅದರಂತೆ ಡ್ರಾಮಾ ಕೂಡ ಮಾಡಿದ್ದರು. ಆರಂಭದಲ್ಲಿ ಪೊಲೀಸರಿಗೂ ಇದು ಕೊ*ಲೆ ಎಂದು ತಿಳಿಯದಿದ್ದರೂ ಇಂಥ ಅದೆಷ್ಟೋ ಕೇಸ್ ನೋಡಿರುವ ಅವರಿಗೆ ವಾಸನೆಯಂತೂ ಬಂದೇ ಇತ್ತು. ಅದಕ್ಕೆ ತಕ್ಕಂತೆ ಪೋಸ್ಟ್ ಮಾರ್ಟಮ್ ರಿಪೋರ್ಟ್ನಲ್ಲಿ ಎರಡು ತಿಂಗಳ ಬಳಿಕ ವಿಷ ಸೇವನೆ ಸಾವಿಗೆ ಕಾರಣ ಎಂದು ದೃಢಪಟ್ಟಿತು. ಕೊನೆಗೆ ಪೊಲೀಸರು ತಮ್ಮದೇ ಆದ ರೀತಿಯಲ್ಲಿ ವಿಚಾರಣೆ ನಡೆಸಿದಾಗ ಪತ್ನಿ ಮತ್ತು ಆಕೆಯ ಅಪ್ಪ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇಬ್ಬರನ್ನೂ ಅರೆಸ್ಟ್ ಮಾಡಲಾಗಿದ್ದು ಜೈಲು ಸೇರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ