* ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದಲ್ಲಿ ನಡೆದ ಘಟನೆ
* ಖಾಸಗಿ ಪೋಟೋ ವಾಟ್ಸಪ್ ಸ್ಟೇಟಸ್‌ನಲ್ಲಿ ಹಾಕಿಕೊಂಡ ಶಿಕ್ಷಕ
* ಶಿಕ್ಷಕ ಅಮಾನತು
ಸವದತ್ತಿ(ಜೂ.10): ಪ್ರೌಢಶಾಲೆಯ ದೈಹಿಕ ಶಿಕ್ಷಕನೊಬ್ಬ ಕಾಲೇಜು ವಿದ್ಯಾರ್ಥಿನಿಯೊಂದಿಗೆ ಕಳೆದ ಮಧುರ ಕ್ಷಣಗಳ ಫೋಟೋಗಳನ್ನು ವಾಟ್ಸಪ್ ಸ್ಟೇಟಸ್‌ನಲ್ಲಿ ಹಾಕಿಕೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತನನ್ನು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದಲ್ಲಿ ನಡೆದಿದೆ.
ಮೂಲತಃ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಬೈರವಾಡ ಗ್ರಾಮದವನಾದ ಶಿಕ್ಷಕ ಮಹೇಶ ಬಿರಾದಾರ ಯಕ್ಕುಂಡಿ ಗ್ರಾಮದ ಹೈಸ್ಕೂಲ್‌ನಲ್ಲಿ ತನ್ನ ವಿದ್ಯಾರ್ಥಿನಿಯೊಂದಿಗೆ ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಅವಳೊಂದಿಗಿನ ಖಾಸಗಿ ಕ್ಷಣಗಳನ್ನು ಹಲವು ವರ್ಷಗಳಿಂದ ಕಳೆದಿದ್ದಾನೆ. ಇದೀಗ ಆ ಯುವತಿಗೆ ಮದುವೆ ನಿಶ್ಚಯವಾಗಿದೆ. ಇದರಿಂದ ಈ ಮದುವೆ ನಿಲ್ಲಿಸಲು ಶಿಕ್ಷಕ ಆ ಯುವತಿಯೊಂದಿಗೆ ಕಳೆದ ಖಾಸಗಿ ಕ್ಷಣಗಳ ಫೋಟೋಗಳನ್ನು ವಾಟ್ಸಪ್‌ನ ಸ್ಟೇಟಸ್‌ನಲ್ಲಿ ಹಾಕಿದ್ದಾನೆ.
ಬೆಂಗಳೂರು: ಮದುವೆಗೆ ಒಪ್ಪಲಿಲ್ಲ ಅಂತ ವಿವಾಹಿತ ಮಹಿಳೆ ಮೇಲೆ ಆ್ಯಸಿಡ್ ದಾಳಿ..!
ಈ ಫೋಟೋಗಳು ವೈರಲ್ ಆಗಿ ಕುಪಿತಗೊಂಡ ಗ್ರಾಮಸ್ಥರು ಶಿಕ್ಷಕನಿಗೆ ಧರ್ಮದೇಟು ನೀಡಿದ್ದಾರೆ. ಶಿಕ್ಷಕ ಮಾಡಿದ ಕೃತ್ಯ ಕುರಿತು ವಿದ್ಯಾರ್ಥಿನಿ ನೀಡಿದ ದೂರಿನ ಮೇಲೆ ಶಿಕ್ಷಕನ ಮೇಲೆ ಸವದತ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಯ ಕುರಿತು ಶಿಕ್ಷಕ ನೀಡಿದ ದೂರಿನ ಮೇಲೆ ಗ್ರಾಮದ ಕೆಲವರ ಮೇಲೆಯೂ ಸವದತ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಶಿಕ್ಷಕನನ್ನು ಅಮಾನತು ಮಾಡಿದ್ದಾರೆ.