ಬೆಂಗಳೂರು: ಮದುವೆಗೆ ಒಪ್ಪಲಿಲ್ಲ ಅಂತ ವಿವಾಹಿತ ಮಹಿಳೆ ಮೇಲೆ ಆ್ಯಸಿಡ್ ದಾಳಿ..!

By Girish Goudar  |  First Published Jun 10, 2022, 1:34 PM IST

*  ಬೆಂಗ್ಳೂರಲ್ಲಿ ಮತ್ತೊಂದು ಆ್ಯಸಿಡ್ ಅಟ್ಯಾಕ್‌
*  ಇಬ್ಬರ ಮಧ್ಯೆ ಇದ್ದ ಅಕ್ರಮ ಸಂಬಂಧ
*  ಗಾಯಾಳು ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ


ಬೆಂಗಳೂರು(ಜೂ.10):  ಮದುವೆಗೆ ಒಪ್ಪಲಿಲ್ಲ ಅಂತ ಮಹಿಳೆ ಮೇಲೆ ವ್ಯಕ್ತಿಯೊಬ್ಬ ಆ್ಯಸಿಡ್ ಹಾಕಿ ಕೊಲೆ ಮಾಡಲು ಯತ್ನಿಸಿದ ಘಟನೆ ಇಂದು(ಶುಕ್ರವಾರ) ನಗರದಲ್ಲಿ ನಡೆದಿದೆ. 

ಆ್ಯಸಿಡ್ ದಾಳಿಗೊಳಗಾದ ಮಹಿಳೆ ಇಲಿಯಾಸ್ ನಗರ ನಿವಾಸಿಯಾಗಿದ್ದಾಳೆ. ಈ ಮಹಿಳೆ ಮೇಲೆ ಅಹಮದ್ ಎಂಬಾತನೇ ಆ್ಯಸಿಡ್ ಹಾಕಿ ಹತ್ಯೆ ಮಾಡಲು ಯತ್ನಿಸಿದ್ದಾನೆ. ಈಕೆಗೆ ಮದುವೆಯಾಗಿ ಮೂರು ಮಕ್ಕಳಿದ್ದಾರೆ. ಮಹಿಳೆಗೆ ಗಂಡನಿಂದ ಡಿವೋರ್ಸ್ ಕೂಡ ಆಗಿದೆ. ಆರೋಪಿ ಅಹಮದ್‌ಗೂ ಕೂಡ ಮದುವೆಯಾಗಿದೆ ಅಂತ ತಿಳಿದು ಬಂದಿದೆ. 

Tap to resize

Latest Videos

10 ವರ್ಷದಿಂದ ಒನ್ ವೇ ಲವ್, ಆ್ಯಸಿಡ್ ದಾಳಿಗೆ ಪ್ಲ್ಯಾನ್ ಮಾಡಿದ್ದೆ: ತಪ್ಪೊಪ್ಪಿಕೊಂಡ ಆ್ಯಸಿಡ್ ನಾಗ

ಸುಮಾರು 2 ವರ್ಷಗಳಿಂದ ಇಬ್ಬರೂ ಇಲಿಯಾಸ್ ನಗರದ ಕರ್ನಾಟಕ ಅಗರಬತ್ತಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಒಬ್ಬರಿಗೊಬ್ಬರು ಪರಿಚಯ ಆಗಿ ಅಕ್ರಮ ಸಂಬಂಧಕ್ಕೆ ತಿರುಗಿತ್ತು.  ಆರೋಪಿ ಮಹಿಳೆಯನ್ನ ಮದುವೆ ಆಗುವಂತೆ ಹೇಳುತ್ತಿದ್ದನಂತೆ, ಎರಡನೇ ಮದುವೆ ಆಗ್ತೀನಿ, ಎರಡನೇ ಹೆಂಡ್ತಿ ತರ ಇಟ್ಟುಕೊಳ್ಳುತ್ತೇನೆ ಎಂದು ಹೇಳಿದ್ದನಂತೆ. ಆದರೆ ಈಕೆ ಮೊದಲ ಹೆಂಡತಿಗೆ ಡಿವೋರ್ಸ್ ಕೊಡುವಂತೆ ಹೇಳಿದ್ದಳಂತೆ. ಹೀಗಾಗಿ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆಯುತ್ತಿತ್ತು. 

ಇಂದು ಇಬ್ಬರೂ ಅಗರಬತ್ತಿ ಫ್ಯಾಕ್ಟರಿಗೆ ಕೆಲಸಕ್ಕೆ ಬರುತ್ತಿದ್ದರು. ಆರೋಪಿ ಹಾಗೂ ಮಹಿಳೆ ಇಲಿಯಾಸ್ ನಗರದಿಂದ ಮಾತನಾಡಿಕೊಂಡು ಬರುತ್ತಿದ್ದರು. ತುಂಬಾ ಸಾರಿ ಮದುವೆಯಾಗುವಂತೆ ಪೀಡುಸುತ್ತಿದ್ದ, ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಕುಪಿತಗೊಂಡ ಆರೋಪಿ ಆ್ಯಸಿಡ್ ಎರಚಿ ಅಹಮದ್ ಪರಾರಿಯಾಗುತ್ತಿದ್ದ ವೇಳೆ ಸ್ಥಳೀಯ ಆರೋಪಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. 

ನನ್ನ ಹಾಗೆ ಆತನೂ ನರಳಬೇಕು: ಸಂತ್ರಸ್ತೆಯ ಆಕ್ರೋಶ

ಇನ್ನು ಈ ಸಂಬಂಧ ಮಾಧ್ಯಮದವರಿಗೆ ಮಾಹಿತಿ ನೀಡಿದ ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೆ ಅವರು, ಮಹಿಳೆ ಬುರ್ಕಾ ಧರಿಸಿದ್ದರಿಂದ ಕಣ್ಣಿಗೆ ಸ್ವಲ್ಪ ಗಾಯವಾಗಿದೆ. ಮಹಿಳೆ ಆಟೋ ಹತ್ತಿ ಆಸ್ಪತ್ರೆಗೆ ತೆರಳಿದ್ದಾರೆ. ಆ್ಯಸಿಡ್ ಅಟ್ಯಾಕ್‌ನಿಂದ ಯಾವುದೇ ದೊಡ್ಡ ಮಟ್ಟದ ತೊಂದರೆ ಆಗಿಲ್ಲ, ಯಾವುದೇ ಪ್ರಾಣಪಾಯವಿಲ್ಲ ಅಂತ ಮಹಿಳೆಗೆ ಕಣ್ಣೀನ ಭಾಗಕ್ಕೆ ಸ್ವಲ್ಪ ಗಾಯವಾಗಿದೆ.

ಮಹಿಳೆಗೆ ಯಾವುದೇ ಅಪಾಯ ಇಲ್ಲ ಆ್ಯಸಿಡ್ ಹಾಕಿದಾಗ ಫೇಸ್ ರೆಡ್ ನೆಸ್ ಬಂದಿದೆ. ಕಣ್ಣಿಗೆ ಬಿದ್ದಿದ್ದರಿಂದ ವಾಸನ್ ಹೈ ಕೇರ್‌ಗೆ ಕಳಿಸಿದ್ದೇವೆ. ಹೆಚ್ಚಿನ ಚಿಕಿತ್ಸೆಗಾಗಿ ಜಯನಗರ ಸಂಜಯ್ ಗಾಂಧಿ ಆಸ್ಪತ್ರೆಗೆ ರವಾನೆ ಮಾಡಿದ್ದೇವೆ. ಮದುವೆಗೆ ಒಪ್ಪಿಲ್ಲ ಅಂತ ಮಹಿಳೆ ಆರೋಪಿ ಆ್ಯಸಿಡ್ ಹಾಕಿದ್ದಾನೆ. ಆರೋಪಿ ಮೊದಲೇ ಪೂರ್ವ ತಯಾರಿಯಾಗಿ ಬಂದಿದ್ದ, ಶೌಚಾಲಯಕ್ಕೆ ಬಳಸುವ ಆ್ಯಸಿಡ್ ಎರಚಿ ಕೃತ್ಯ ಮೆರೆದಿದ್ದಾನೆ ಅಂತ ಡಿಸಿಪಿ ಹರೀಶ್ ಪಾಂಡೆ ಅವರು ಮಾಹಿತಿ ನೀಡಿದ್ದಾರೆ. 

click me!