Latest Videos

ಬೆಂಗಳೂರು: ರೇವ್ ಪಾರ್ಟಿಯಲ್ಲಿ 86 ಮಂದಿ ಡ್ರಗ್ಸ್ ಸೇವಿಸಿದ್ದು ನಿಜ..!

By Kannadaprabha NewsFirst Published May 24, 2024, 5:57 AM IST
Highlights

ಎಲೆಕ್ಟ್ರಾನಿಕ್ ಸಿಟಿ ಹತ್ತಿರದ ಜಿ.ಆರ್.ಫಾರ್ಮ್ ಹೌಸ್‌ನಲ್ಲಿ ಭಾನುವಾರ ರಾತ್ರಿ ರೇವ್ ಪಾರ್ಟಿ ಆಯೋಜಿಸಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಪಾರ್ಟಿ ಮೇಲೆ ಸಿಸಿಬಿ ದಿಢೀರ್ ದಾಳಿ ನಡೆಸಿತ್ತು. ಈ ವೇಳೆ ಪಾರ್ಟಿಯಲ್ಲಿದ್ದ ಇಬ್ಬರು ನಟಿಯರು ಸೇರಿದಂತೆ 100ಕ್ಕೂ ಹೆಚ್ಚಿನ ಮಂದಿಯನ್ನು ಸಿಸಿಬಿ ವೈದ್ಯಕೀಯ ತಪಾಸಣೆಗೊಳಪಡಿಸಿತ್ತು. ಈಗ ವೈದ್ಯಕೀಯ ವರದಿ ಸಿಸಿಬಿಗೆ ಸಲ್ಲಿಕೆಯಾಗಿದ್ದು, ಇದರಲ್ಲಿ 101 ಮಂದಿ ಪೈಕಿ 86 ಜನರು ಮಾದಕ ವಸ್ತು ಸೇವನೆ ಖಚಿತವಾಗಿದೆ ಎಂದು ಗೊತ್ತಾಗಿದೆ.
 

ಬೆಂಗಳೂರು(ಮೇ.24):  ಇತ್ತೀಚಿಗೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಫಾರ್ಮ್ ಹೌಸ್‌ನಲ್ಲಿ ನಡೆದ ರೇವ್‌ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ತೆಲುಗು ಚಿತ್ರರಂಗದ ನಟಿ ಸೇರಿದಂತೆ 86 ಮಂದಿ ಮಾದಕ ವಸ್ತು ಸೇವಿಸಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.

ಈ ಮಾದಕ ವ್ಯಸನಿಗಳಿಗೆ ಸಿಸಿಬಿ ತನಿಖೆ ಬಿಸಿ ಶುರುವಾಗಲಿದ್ದು, ವಿಚಾರಣೆಗೆ ಹಾಜರಾಗುವಂತೆ ನಟಿಯರಾದ ಹೇಮಾ ಸೇರಿ 86 ಮಂದಿಗೆ ಶೀಘ್ರದಲ್ಲೇ ಸಿಸಿಬಿ ನೋಟಿಸ್ ನೀಡಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಎಲೆಕ್ಟ್ರಾನಿಕ್ ಸಿಟಿ ಹತ್ತಿರದ ಜಿ.ಆರ್.ಫಾರ್ಮ್ ಹೌಸ್‌ನಲ್ಲಿ ಭಾನುವಾರ ರಾತ್ರಿ ರೇವ್ ಪಾರ್ಟಿ ಆಯೋಜಿಸಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಪಾರ್ಟಿ ಮೇಲೆ ಸಿಸಿಬಿ ದಿಢೀರ್ ದಾಳಿ ನಡೆಸಿತ್ತು. ಈ ವೇಳೆ ಪಾರ್ಟಿಯಲ್ಲಿದ್ದ ಇಬ್ಬರು ನಟಿಯರು ಸೇರಿದಂತೆ 100ಕ್ಕೂ ಹೆಚ್ಚಿನ ಮಂದಿಯನ್ನು ಸಿಸಿಬಿ ವೈದ್ಯಕೀಯ ತಪಾಸಣೆಗೊಳಪಡಿಸಿತ್ತು. ಈಗ ವೈದ್ಯಕೀಯ ವರದಿ ಸಿಸಿಬಿಗೆ ಸಲ್ಲಿಕೆಯಾಗಿದ್ದು, ಇದರಲ್ಲಿ 101 ಮಂದಿ ಪೈಕಿ 86 ಜನರು ಮಾದಕ ವಸ್ತು ಸೇವನೆ ಖಚಿತವಾಗಿದೆ ಎಂದು ಗೊತ್ತಾಗಿದೆ.

Bengaluru Rave Party: ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದ ನಟಿ ಆಶಿ ರಾಯ್‌ಗೆ ಸಿಸಿಬಿ ನೊಟೀಸ್

ನಾಟಕ ಮಾಡಿದ ಹೇಮಾಗೆ ಸಂಕಟ:

ತಾನು ಪಾರ್ಟಿಯಲ್ಲಿ ಪಾಲ್ಗೊಂಡಿಲ್ಲವೆಂದು ಅಂದು ಫಾರ್ಮ್‌ ಹೌಸ್‌ನಲ್ಲೇ ವಿಡಿಯೋ ಚಿತ್ರೀಕರಿಸಿಕೊಂಡು ನಟಿ ಹೇಮಾ ಹೇಳಿಕೆ ನೀಡಿದ್ದರು. ಅದೇ ರೀತಿ ತಾನು ಪಾರ್ಟಿಗೆ ಹೋಗಿದ್ದೆ. ಆದರೆ ಅಲ್ಲೇನು ನಡೆದಿದೆ ಎಂಬುದು ಗೊತ್ತಿಲ್ಲವೆಂದು ವಿಡಿಯೋ ಹೇಳಿಕೆ ನೀಡಿ ಮತ್ತೊಬ್ಬ ನಟಿ ಆಶಿ ರಾಯ್ ಹೇಳಿದ್ದರು. ಅದರೀಗ ಈ ನಟಿಯರ ಪೈಕಿ ಹೇಮಾಳ ಅಸಲಿತನ ಬಯಲಾಗಿದೆ. ಪಾರ್ಟಿಯಲ್ಲಿ ಹೇಮಾ ಮಾದಕ ನಶೆ ಏರಿಸಿಕೊಂಡಿರುವುದು ವೈದ್ಯಕೀಯ ವರದಿಯಲ್ಲಿ ಖಚಿತವಾಗಿದೆ.

ವಾಸು ಸ್ನೇಹಿತರಿಂದ ಡ್ರಗ್ಸ್ ಪೂರೈಕೆ

ಎಲೆಕ್ಟ್ರಾನಿಕ್ ಸಿಟಿ ಸಮೀಪ ನಡೆದ ರೇವ್ ಪಾರ್ಟಿಗೆ ಆಂಧ್ರಪ್ರದೇಶ ವಿಜಯವಾಡದ ಇಬ್ಬರು ಮಾದಕ ವಸ್ತು ಪೂರೈಸಿದ್ದ ಸಂಗತಿ ಸಿಸಿಬಿ ತನಿಖೆಯಲ್ಲಿ ಬಯಲಾಗಿದೆ. ಉದ್ಯಮಿ ಗೋಪಾಲ ರೆಡ್ಡಿ ಎಂಬುವರಿಗೆ ಸೇರಿದ ಫಾರ್ಮ್ ಹೌಸ್‌ನಲ್ಲಿ ಅವರ ಸ್ನೇಹಿತ ವಾಸು ಹುಟ್ಟು ಹಬ್ಬದ ನಿಮಿತ್ತ ರೇವ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿ ಆಯೋಜನೆಗೆ ತನ್ನ ಗೆಳೆಯ ಗೋಪಾಲ ರೆಡ್ಡಿ ಅವರಿಂದ ವಾಸು ಅನುಮತಿ ಪಡೆದಿದ್ದ. ಆನಂತರ ಫಾರ್ಮ್ ಹೌಸ್‌ನಲ್ಲಿ ಪಾರ್ಟಿಯನ್ನು ವಾಸು ಸ್ನೇಹಿತ ಕೋರಮಂಗಲದ ಅರುಣ್ ಆಯೋಜಿಸಿದ್ದರೆ, ಈ ಪಾರ್ಟಿಗೆ ಆಂಧ್ರಪ್ರದೇಶ ರಾಜ್ಯದ ವಿಜಯವಾಡ ಮೂಲದ ನಾಗಬಾಬು ಮತ್ತು ರಣಧೀರ ಬಾಬು ಮಾದಕ ವಸ್ತು ಪೂರೈಸಿದ್ದರು.

ಫಾರ್ಮ್‌ ಹೌಸ್‌ ದಾಳಿ ವೇಳೆ ಆರೋಪಿಗಳಾದ ಅರುಣ್‌, ರಣಧೀರ ಹಾಗೂ ಮೊಹಮ್ಮದ್ ಅಬ್ಬೂಕರ್‌ ರವರಿಂದ ಮಾದಕ ವಸ್ತು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫಾರ್ಮ್ ಹೌಸ್‌ ಮಾಲಿಕ ಸೇರಿ 103 ವಿರುದ್ಧ ಎಫ್‌ಐಆರ್‌

ಈ ರೇವ್ ಪಾರ್ಟಿ ಆಯೋಜನೆ ಸಂಬಂಧ ಫಾರ್ಮ್‌ ಹೌಸ್ ಮಾಲಿಕ ಸೇರಿದಂತೆ 103 ವಿರುದ್ಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಬರ್ತ್ ಡೇ ಬಾಯ್‌ ಆಂಧ್ರಪ್ರದೇಶದ ವಿಜಯವಾಡದ ವಾಸು ಎ1 ಆರೋಪಿಯಾಗಿದ್ದರೆ, ಆತನ ಸ್ನೇಹಿತರಾದ ಕೋರಮಂಗಲದ ಅರುಣ್ ಕುಮಾರ್, ವಿಜಯವಾಡದ ನಾಗಬಾಬು, ರಣಧೀರ್ ಬಾಬು, ಮೊಹಮ್ಮದ್ ಅಬೂಬಕರ್ ನಂತರ ಆರೋಪಿತರಾಗಿದ್ದಾರೆ. ಹಾಗೆ ಫಾರ್ಮ್‌ ಹೌಸ್‌ನಲ್ಲಿ ಪಾರ್ಟಿ ಆಯೋಜನೆಗೆ ಅನುಮತಿ ನೀಡಿದ್ದ ಗೋಪಾಲ ರೆಡ್ಡಿ 6ನೇ ಆರೋಪಿಯಾಗಿದ್ದಾರೆ. ಇನ್ನುಳಿದಂತೆ ಪಾರ್ಟಿಯಲ್ಲಿದ್ದ 68 ಮಂದಿ ಪುರುಷರು ಹಾಗೂ 30 ಯುವತಿಯರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಜನರ ಪೈಕಿ ಇಬ್ಬರು ತೆಲುಗು ನಟಿಯರು ಸೇರಿದ್ದಾರೆ ಎಂದು ತಿಳಿದು ಬಂದಿದೆ.

ಬಯಲಾಯ್ತು ನಟಿ ಹೇಮಾ ರಂಗಿನಾಟ; ಬೆಂಗಳೂರು ರೇವ್ ಪಾರ್ಟಿಗೆ ಬಂದಿಲ್ಲ ಎಂದವಳ ರಕ್ತದಲ್ಲಿ ಡ್ರಗ್ಸ್ ಪತ್ತೆ

ಪಾರ್ಟಿಯಲ್ಲಿ ಸಿಕ್ಕಿದ ಡ್ರಗ್ಸ್‌

ರೇವ್‌ ಪಾರ್ಟಿ ದಾಳಿ ವೇಳೆ 14.40 ಗ್ರಾಂ ಎಂಡಿ‌ಎಂಎ ಪೀಲ್ಸ್, 1.16 ಎಂಡಿಎಂಎ ಕ್ರಿಸ್ಟಲ್, 6 ಗ್ರಾಂ ಹೈಡ್ರೋ ಗಾಂಜಾ, 5 ಗ್ರಾಂ ಕೊಕೇನ್‌, ಕೋಕೇನ್ ಲೇಪನವಿರುವ 500 ಮುಖಬೆಲೆ ಒಂದು ನೋಟು, 5 ಮೊಬೈಲ್‌ಗಳು, ಎರಡು ಕಾರುಗಳು, 1.5 ಕೋಟಿ ರು ಮೌಲ್ಯದ ಡಿಜೆ ಉಪಕರಣಗಳು ಜಪ್ತಿಯಾಗಿವೆ.

ಫಾರ್ಮ್‌ ಹೌಸ್‌ನಲ್ಲೇ ವೈದ್ಯಕೀಯ ಪರೀಕ್ಷೆ

ಈ ಪಾರ್ಟಿಯಲ್ಲಿದ್ದ 68 ಮಂದಿ ಪುರುಷರು ಹಾಗೂ 30 ಯುವತಿಯರಿಗೆ ಫಾರ್ಮ್ ಹೌಸ್‌ನಲ್ಲೇ ಮಾದಕ ವಸ್ತು ಸೇವನೆ ಸಂಬಂಧ ಪೊಲೀಸರು ವೈದ್ಯಕೀಯ ತಪಾಸಣೆ ನಡೆಸಿದ್ದಾರೆ. ಪುಲಕೇಶಿನಗರದ ಸಂತೋಷ್ ಆಸ್ಪತ್ರೆಯ ಲ್ಯಾಬ್ ಟೆಕ್ನಿಶಿಯನ್ ತಂಡವು, ಫಾರ್ಮ್‌ ಹೌಸ್‌ಗೆ ಆಗಮಿಸಿ ವೈದ್ಯಕೀಯ ತಪಾಸಣೆ ನಡೆಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!