ಅತ್ಯಾಚಾರ ಮಾಡುವ ಮುನ್ನ ಕೃತ್ಯಕ್ಕೆ ಸಹಾಯವಾಗಲೆಂದು ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮಾತ್ರೆಗಳನ್ನು ತೆಗೆದುಕೊಂಡಿದ್ದಾಗಿ ವ್ಯಕ್ತಿ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ ಎಂದೂ ತಿಳಿದುಬಂದಿದೆ.
ಉತ್ತರಪ್ರದೇಶದ (Uttar Pradesh) ಉನ್ನಾವೋದಲ್ಲಿ (Unnao) ಅತ್ಯಾಚಾರ ಪ್ರಕರಣವೊಂದು (Rape Case) ವರದಿಯಾಗಿದೆ. ಕಾಲೇಜು ವಿದ್ಯಾರ್ಥಿನಿಯನ್ನು (College Student) 25 ವರ್ಷದ ಆರೋಪಿ ರೇಪ್ ಮಾಡಿದ್ದು, ಖಾಸಗಿ ಅಂಗದಲ್ಲಿ (Private Parts) ತೀವ್ರ ರಕ್ತಸ್ರಾವವಾಗಿ (Bleeding) ಆಕೆ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ. ಇನ್ನು, ಅತ್ಯಾಚಾರ ಆರೋಪಿಯನ್ನು ಬಂಧಿಸಲಾಗಿದ್ದು (Arrested), ಆಕೆ ಮನೆಯಲ್ಲಿ ಒಬ್ಬಳೇ ಇದ್ದಾಗ ಕೃತ್ಯವೆಸಗಿದ್ದಾಗಿ ಆರೋಪಿ ರಾಜ್ ಗೌತಮ್ ಒಪ್ಪಿಕೊಂಡಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಅಲ್ಲದೆ, ಆತ ಅತ್ಯಾಚಾರ ಮಾಡುವ ಮುನ್ನ ಕೃತ್ಯಕ್ಕೆ ಸಹಾಯವಾಗಲೆಂದು ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮಾತ್ರೆಗಳನ್ನು ತೆಗೆದುಕೊಂಡಿದ್ದಾಗಿ ವ್ಯಕ್ತಿ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ ಎಂದೂ ತಿಳಿದುಬಂದಿದೆ. ಇನ್ನು, ಸಂತ್ರಸ್ಥೆ ವಿರೋಧಿಸಿದರೂ, ಆತ ಬಹಳ ಸಮಯ ಕಾಲ ಲೈಂಗಿಕ ಕೃತ್ಯವೆಸಗಿದ್ದಾನೆ. ಆಕೆ ಮೂರ್ಛೆ ಹೋಗುವವರೆಗೆ ಹಾಗೂ ಆಕೆಯ ಖಾಸಗಿ ಅಂಗಗಳಿಂದ ರಕ್ತ ಬರುವವರೆಗೆ ಅತ್ಯಾಚಾರ ಮಾಡಿದ್ದಾನೆ. ನಂತರ ಆಕೆಯನ್ನು ಆ ಸ್ಥಿತಿಯಲ್ಲೇ ಬಿಟ್ಟು ಆರೋಪಿ ಓಡಿ ಹೋಗಿದ್ದಾನೆ ಎಂದೂ ಪೊಲೀಸರು ಹೇಳಿದ್ದಾರೆ.
ಇದನ್ನು ಓದಿ: ಪೊಲೀಸರಿಂದ ತಪ್ಪಿಸಿಕೊಳ್ಳಲು ಗಾರ್ಡ್ ಮೇಲೆ ಗಾಡಿ ಹತ್ತಿಸಿದ ಅತ್ಯಾಚಾರ ಆರೋಪಿ
ಕೆಲ ಸಮಯದ ಬಳಿಕ, ಮನೆಗೆ ಸಂತ್ರಸ್ಥೆಯ ತಂಗಿ ಬಂದು ನೋಡಿದಾಗ ಕಾಲೇಜು ವಿದ್ಯಾರ್ಥಿನಿ ತನ್ನ ಬೆಡ್ ಮೇಲೆ ಮೂರ್ಛೆ ಹೋದ ಸ್ಥಿತಿಯಲ್ಲೇ ಇದ್ದಳು. ನಂತರ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ. ಅಲ್ಲದೆ, ಪೋಸ್ಟ್ ಮಾರ್ಟಂನಲ್ಲಿ ಅತ್ಯಾಚಾರವಾಗಿರುವುದು ಸಾಬೀತಾಗಿದೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ. ಹೆಚ್ಚು ರಕ್ತ ಸೋರಿಕೆಯಾಗಿ ಹಾಗೂ ಆಕೆಯ ಖಾಸಗಿ ಅಂಗಕ್ಕೆ ಗಂಭೀರವಾದ ಗಾಯವಾಗಿದ್ದ ಕಾರಣ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಅತ್ಯಾಚಾರದಲ್ಲಿ ನೆರೆಮನೆಯ ವ್ಯಕ್ತಿಯೊಬ್ಬರ ಹಾಗೂ 65 ವರ್ಷದ ಮಹಿಳೆಯ ಕೈವಾಡವಿದೆ ಎಂದು ಸಂತ್ರಸ್ಥೆಯ ತಂದೆ ಮೊದಲು ಆರೋಪಿಸಿದ್ದರು. ಆದರೆ, ಸಂತ್ರಸ್ಥೆಯ ಮೊಬೈಲ್ ಫೋನ್ ಡೇಟಾದ ಆಧಾರದ ಮೇಲೆ ಆರೋಪಿ ಗೌತಮ್‌ನನ್ನು ಪತ್ತೆಹಚ್ಚಿ, ಆತನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: 3 ರೇಪಿಸ್ಟ್‌ಗಳ ಗಲ್ಲು ಶಿಕ್ಷೆ ರದ್ದು: ಸುಪ್ರೀಂ ಆದೇಶ
ಸಂತ್ರಸ್ಥೆ ಮನೆಯಲ್ಲಿ ಒಬ್ಬಳೇ ಇರುವುದನ್ನು ಕಂಡುಕೊಂಡು, ತಾನು ಆಕೆಯ ಮನೆಗೆ ಹೋಗಿ ಅತ್ಯಚಾರ ಮಾಡಿದೆ ಎಂದು ಗೌತಮ್ ಒಪ್ಪಿಕೊಂಡಿದ್ದಾನೆ. ಇದರಿಂದ ಆಕೆಯ ಖಾಸಗಿ ಅಂಗದಲ್ಲಿ ತೀವ್ರ ರಕ್ತಸ್ರಾವವಾಗಿದೆ. ಇದನ್ನು ಕಂಡ, ಗೌತಮ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ ಎಂದು ಉತ್ತರ ಪ್ರದೇಶದ ಉನ್ನಾವೋದ ಸೂಪರಿಟೆಂಡೆಂಟ್ ಆಫ್ ಪೊಲೀಸ್ ಸಿದ್ಧಾರ್ಥ ಶಂಕರ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಇನ್ನೊಂದೆಡೆ, ಅತ್ಯಾಚಾರ ಪ್ರಕರಣವೊಂದರ ಆರೋಪಿ ಪೊಲೀಸರಿಂದ ತಪ್ಪಿಸಿಕೊಂಡು ಓಡಿ ಹೋಗುವ ಭರದಲ್ಲಿ ಸೆಕ್ಯೂರಿಟಿ ಗಾರ್ಡ್ ಮೇಲೆ ಕಾರು ಹತ್ತಿಸಿ ಪರಾರಿಯಾದ ಘಟನೆ ಉತ್ತರಪ್ರದೇಶದ ನೋಯ್ಡಾದಲ್ಲಿ ಇತ್ತೀಚೆಗೆ ನಡೆದಿತ್ತು. ಈ ಘಟನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಗಂಭೀರವಾಗಿ ಗಾಯಗೊಂಡಿದ್ದು, ಈ ಘಟನೆಯ ದೃಶ್ಯಗಳು ಸ್ಥಳೀಯ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿತ್ತು .
ಇದನ್ನೂ ಓದಿ: ಕಲಬುರಗಿ; 70 ವರ್ಷದ ವೃದ್ದೆಯನ್ನು ಅತ್ಯಾಚಾರ ಮಾಡಿದ ಯುವಕ!
ನೋಯ್ಡಾದ ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುವ ನೀರಜ್ ಸಿಂಗ್ ವಿರುದ್ಧ ಆತನ ಸಹೋದ್ಯೋಗಿ ಅತ್ಯಾಚಾರದ ಆರೋಪ ಮಾಡಿ ದೂರು ದಾಖಲಿಸಿದ್ದಳು. ಪ್ರಕರಣ ದಾಖಲಾದಂದಿನಿಂದಲೂ ಆರೋಪಿ ತಲೆಮರೆಸಿಕೊಂಡಿದ್ದ. ಈ ಮಧ್ಯೆ ಆತ ಹೌಸಿಂಗ್ ಸೊಸೈಟಿಯಲ್ಲಿರುವ ವಿಚಾರ ತಿಳಿದು ಪೊಲೀಸರು ನೀರಜ್ ಸಿಂಗ್ ಬಂಧನಕ್ಕೆ ಬಲೆ ಬೀಸಿ ಆತ ವಾಸವಿದ್ದ ಹೌಸಿಂಗ್ ಸೊಸೈಟಿ ಸಮೀಪ ಆಗಮಿಸಿದ್ದರು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳುವ ವೇಳೆ ಆತ ಹೌಸಿಂಗ್ ಸೊಸೈಟಿಯ ಭದ್ರತಾ ಸಿಬ್ಬಂದಿ ಮೇಲೆ ಕಾರು ಹತ್ತಿಸಿ ಪರಾರಿಯಾಗಿದ್ದಾನೆ. ಇದರಿಂದ ಅಶೋಕ್ ಮವಿ ಅವರ ಭುಜ ಹಾಗೂ ಕಾಲುಗಳಿಗೆ ತೀವ್ರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.