
ಮಂಗಳೂರು(ಜೂ.18): ನಗರದ ವ್ಯಕ್ತಿಯೊಬ್ಬರು 10 ರು. ಪಾವತಿಸಲು ಹೋಗಿ ವಂಚನೆಗೊಳಗಾಗಿ 1.69 ಲಕ್ಷ ರು. ಕಳೆದುಕೊಂಡ ಘಟನೆ ನಡೆದಿದೆ.
ನಗರದ ನಿವಾಸಿಯೊಬ್ಬರಿಗೆ ಕೊರಿಯರ್ ಸಂಸ್ಥೆಯ ಪ್ರತಿನಿಧಿ ಎಂದು ಹೇಳಿ ಕರೆ ಮಾಡಿದ ಅನಾಮಿಕ ವ್ಯಕ್ತಿಯು ತನ್ನನ್ನು ತಾನು ಡಿಟಿಡಿಸಿ ಕೊರಿಯರ್ ಸಂಸ್ಥೆ ಪ್ರತಿನಿಧಿ ಎಂದು ಪರಿಚಯಿಸಿಗೊಂಡಿದ್ದ. 9339431456 ದೂರವಾಣಿ ಸಂಖ್ಯೆಯಿಂದ ಕರೆ ಮಾಡಿ ತಮ್ಮ ಹೆಸರಿಗೊಂದು ಕೊರಿಯರ್ ಬಂದಿದ್ದು ಅದರಲ್ಲಿ ನಿಮ್ಮ ವಿಳಾಸದ ಪಿನ್ ತಪ್ಪಾಗಿ ನಮೂದಿಸಲಾಗಿದ್ದು ಪಾರ್ಸೆಲ್ ಡೆಲಿವರಿ ಮಾಡಬೇಕಿದ್ದಲ್ಲಿ 10 ರು. ಪಾವತಿಸುವಂತೆ ತಿಳಿಸಿದ್ದಾನೆ.
ಬೆಳಗಾವಿ: BSNL ನೌಕರನಿಂದ 102 ಬಾರಿ ಓಟಿಪಿ ಪಡೆದು 10 ಲಕ್ಷ ವಂಚನೆ..!
ಇದರೊಂದಿಗೆ ಹಣ ಪಾವತಿಸಲು ಲಿಂಕ್ ಕಳುಹಿಸಿದ್ದಾನೆ. ಲಿಂಕ್ ತೆರೆದು ಯುಪಿಐ ಪಿನ್ ನಮೂದಿಸಿ 10 ರು. ಪಾವತಿಸಿದ ಬಳಿಕ ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿರುವ ಕೆನರಾ, ಎಸ್‌ಬಿಐ, ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಖಾತೆಗಳಿಂದ ಹಂತಹಂತವಾಗಿ 1,69,600 ರು. ವರ್ಗಾವಣೆಯಾಗಿದ್ದು ವಂಚನೆಗೊಳಗಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಸೈಬರ್ ಪೊಲೀಸರಿಗೆ ದೂರು ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ