ಹೆತ್ತ ತಾಯಿಗೆ ಹೆಗ್ಗಣ ಮುದ್ದು ಅನ್ನೋ ಗಾದೆ ಮಾತಿದೆ. ಎಂಥ ಮಗುವೇ ಆದರೂ ಹೆತ್ತ ತಾಯಿಗೆ ಮುದ್ದು, ಪ್ರಾಣಕ್ಕಿಂತ ಹೆಚ್ಚು. ಮಗುವನ್ನು ಒಂದು ನಿಮಿಷವೂ ಬಿಟ್ಟು ಇರಲಾರಳು. ತಾಯಿ ಮಕ್ಕಳ ಕರುಳು ಸಂಬಂಧವೇ ಅಂತಾದ್ದು ಆದರೆ ಇದಕ್ಕೆ ತದ್ವಿರುದ್ಧ ಘಟನೆ ನಡೆದಿದೆ. ತನಗೆ ಈಗಾಗಲೇ ಗಂಡು ಮಕ್ಕಳಿದ್ದಾರೆಂದು ಹೆತ್ತ ಮಾರನೇ ದಿನವೇ ಗಂಡುಮಗುವನ್ನು ಮಾರಾಟ ಮಾಡಿದ ಘಟನೆ ಹಾಸನದಲ್ಲಿ ನಡೆದಿದೆ.!
ಹಾಸನ (ಜ.4): ಹುಟ್ಟಿದ ಒಂದೇ ದಿನಕ್ಕೆ ಗಂಡು ಮಗುವನ್ನು ಮಾರಾಟ ಮಾಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.
ಘಟನೆ ಸಂಬಂಧ ತಾಯಿ ಗಿರಿಜಾ, ಆಶಾ ಕಾರ್ಯಕರ್ತೆ ಸುಮಿತ್ರಾ, ಮಗುವನ್ನು ಕೊಂಡ ಮಹಿಳೆ ಉಷಾ ಹಾಗು ಮಗು ಕೊಡಲು ಪ್ರೇರಣೆ ನೀಡಿದ ಆರೋಪದಲ್ಲಿ ಶ್ರೀಕಾಂತ್ ಹಾಗು ಸುಬ್ರಹ್ಮಣ್ಯ ಎಂಬುವವರನ್ನು ಬಂಧಿಸಲಾಗಿದೆ.
ಹೆತ್ತ ತಾಯಿಯೇ ಮಗು ಮಾರಾಟ:
2023 ರ ನವೆಂಬರ್ 15 ರಂದು ಸಕಲೇಶಪುರ ತಾಲ್ಲೂಕಿನ ಹೆತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಗಂಡುಮಗುವಿಗೆ ಜನ್ಮನೀಡಿದ್ದ ಮಹಿಳೆ ಗಿರಿಜಾ. ಆದರೆ ಮಾರನೇ ದಿನ ನವೆಂಬರ್ 16 ರಂದು ಚಿಕ್ಕಮಗಳೂರು ಮೂಲದ ಉಷಾ ಎಂಬ ಮಹಿಳೆಗೆ ಮಗು ಹಸ್ತಾಂತರ ಮಾಡಲಾಗಿತ್ತು. ತನಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆಂದು ಹೆತ್ತ ತಾಯಿಯೇ ಹುಟ್ಟಿದ ಮಾರನೇ ದಿನ ಗಂಡು ಮಗುವನ್ನು ಅನಧಿಕೃತವಾಗಿ ಚಿಕ್ಕಮಗಳೂರಿನ ಮಹಿಳೆಗೆ ಮಾರಾಟ ಮಾಡಿರುವ ಬಗ್ಗೆ ಮಕ್ಕಳ ರಕ್ಷಣ ಘಟಕಕ್ಕೆ ದೂರು ನೀಡಲಾಗಿತ್ತು. ದೂರು ಆದರಿಸಿ ಪ್ರಕರಣ ಬಯಲಿಗೆಳೆದ ಮಕ್ಕಳ ರಕ್ಷಣಾ ಅಧಿಕಾರಿ ಕಾಂತರಾಜ್ ನೇತೃತ್ವದ ತಂಡ. ಜನವರಿ 2 ರಂದು ಬಂದ ಅದಿಕೃತ ಮಾಹಿತಿ ಆದರಿಸಿ ಪೊಲೀಸರಿಗೆ ದೂರು ನೀಡಿದ್ದರು.
ಐಫೋನ್ ಖರೀದಿಸಲು 8 ತಿಂಗಳ ಮಗುವನ್ನೇ ಮಾರಿದ ದಂಪತಿ
ದೂರು ದಾಖಲಿಸಿಕೊಂಡ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಬಳಿಕ ತಮಗೆ ಈಗಾಗಲೆ ಇಬ್ಬರು ಮಕ್ಕಳಿದ್ದ ಕಾರಣ ಮಗುವನ್ನು ಬೇರೆಯವರಿಗೆ ನೀಡಿದ್ದ ಬಗ್ಗೆ ತಾಯಿ ಮಾಹಿತಿ ನೀಡಿದ್ದಾರೆ. ಈ ಪ್ರಕರಣದಲ್ಲಿ ಕೆಲವರ ಮಧ್ಯಪ್ರವೇಶದಿಂದ ಮಗುವನ್ನು ಮಾರಾಟ ಮಾಡಿದ ಬಗ್ಗೆ ಗಂಭೀರ ಆರೋಪ ಮಾಡಲಾಗಿದೆ. ತಾಯಿ ಮಗುವಿನ ರಕ್ಷಣೆ ಬಗ್ಗೆ ಗಮನಹರಿಸಬೇಕಿದ್ದ ಆಶಾ ಕಾರ್ಯಕರ್ತೆ ಯಿಂದಲೇ ಅನಧಿಕೃತ ಮಗು ಮಾರಾಟಕ್ಕೆ ಬೆಂಬಲ ನೀಡುವ ಮೂಲಕ ಕಾನೂನು ಉಲ್ಲಂಘನೆ ಮಾಡಿದ್ದಾರೆ.
ಮಗು ತಾಯಿ ಮಡಿಲಿಗೆ: ಮಗು ಮಾರಿದ್ದ ತಂದೆ ಜೈಲಿಗೆ
ಪ್ರಕರಣ ಸಂಬಂಧ ವಿಚಾರಣೆ ಮುಂದುವರಿದಿದ್ದು, ಮಗುವಿಗೆ ಹಾಸನ ಮಕ್ಕಳ ರಕ್ಷಣಾ ಘಟಕದಲ್ಲಿ ಆಶ್ರಯ ನೀಡಿರುವ ಅಧಿಕಾರಿಗಳು. ಸಕಲೇಶಪುರ ಗ್ರಾಮಾಂತರ ಠಾಣೆ ಯಲ್ಲಿ ಪ್ರಕರಣ ದಾಖಲು