
ಲಖನೌ(ಏ.17): ಉತ್ತರ ಪ್ರದೇಶವನ್ನು ಮಾಫಿಯಾ ಮೂಲಕ ನಡುಗಿಸಿದ ಅತೀಕ್ ಅಹಮ್ಮದ್ ಈಗಾಗಲೇ ಗುಂಡೇಟಿಗೆ ಬಲಿಯಾಗಿದ್ದಾನೆ. ಇತ್ತ ಅತೀಕ್ ಗ್ಯಾಂಗ್‌ನ ಒಬ್ಬೊಬ್ಬರನ್ನೇ ಯುಪಿ ಪೊಲೀಸರು ಎನ್‌ಕೌಂಟರ್ ಮಾಡುತ್ತಿದ್ದಾರೆ. ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿನ ಪ್ರಮುಖ ಆರೋಪಿಗಳು ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದಾರೆ. ಇನ್ನುಳಿದಿರುವ ಇಬ್ಬರಿಗಾಗಿ ಉತ್ತರ ಪ್ರದೇಶ ಪೊಲೀಸರು ಹುಡುಕಾಟ ತೀವ್ರಗೊಳಿಸಿದ್ದಾರೆ. ಇದರಲ್ಲಿ ಪ್ರಮುಖ ಆರೋಪಿ ಗುಡ್ಡು ಮುಸ್ಲಿಮ್ ಕೊನೆಯ ಮೊಬೈಲ್ ಟವರ್ ಲೋಕೇಶನ್ ಕರ್ನಾಟಕ. ಈ ಮಾಹಿತಿ ಪಡೆದಿರುವ ಉತ್ತರ ಪ್ರದೇಶ ಪೊಲೀಸರು ಇದೀಗ ತನಿಖೆ ಚುರುಕುಗೊಳಿಸಿದ್ದಾರೆ. ಈ ಗುಡ್ಡು ಮುಸ್ಲಿಮ್ ತಲೆಗೂ 5 ಲಕ್ಷ ರೂಪಾಯಿ ಘೋಷಿಸಲಾಗಿದೆ. ಸಣ್ಣ ಸುಳಿವು ಪಡೆದಿರುವ ಯುಪಿ ಪೊಲೀಸರು ಇದೀಗ ಅತ್ಯಾಧುನಿಕ ಶಸ್ತ್ರಾಸ್ತ್ರದ ಮೂಲಕ ಕರ್ನಾಟಕ ಪ್ರವೇಶಿಸಲು ಸಜ್ಜಾಗಿದ್ದಾರೆ.
ರಾಜು ಪಾಲ್ ಹತ್ಯೆಯ ಸಾಕ್ಷಿಯಾಗಿದ್ದ ಉಮೇಶ್ ಪಾಲ್‌ನನ್ನು ಇತ್ತೀಚೆಗೆ ಹಾಡಹಗಲೇ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಈ ವೇಳೆ ಉಮೇಶ್ ಪಾಲ್ ಮೇಲೆ ಬಾಂಬ್ ಎಸೆದ ಗುಡ್ಡು ಮುಸ್ಲಿಮ್ ಬಳಿಕ ತಲೆಮರೆಸಿಕೊಂಡಿದ್ದ. ಈ ಪ್ರಕರಣದಲ್ಲಿ ಗುಂಡಿನ ದಾಳಿ ನಡೆಸಿದ ಪ್ರಮುಖ ಆರೋಪಿಯಾಗಿದ್ದ ಅತೀಕ್ ಅಹಮ್ಮದ್ ಪುತ್ರ ಅಸಾದ್ ಅಹಮ್ಮದ್ ಹಾಗೂ ಸಹಚರ ಗುಲಾಮ್‌ನನ್ನು ಯುಪಿ ಪೊಲೀಸರು ಇತ್ತೀಚೆಗೆ ಎನ್‌ಕೌಂಟರ್ ಮಾಡಿದ್ದಾರೆ. ಆದರೆ ಗುಡ್ಡು ಮುಸ್ಲಿಮ್ ಪತ್ತೆ ಇರಲಿಲ್ಲ. ಈತನ ಪತ್ತೆಗೆ ಹೊಸ ಕಾರ್ಯತಂತ್ರ ಅನುಸರಿಸಿರುವ ಯುಪಿ ಪೊಲೀಸರು ಇದೀಗ ಟವರ್ ಲೋಕೇಶನ್ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಉತ್ತರ ಪ್ರದೇಶದಲ್ಲಿ ಮಾಫಿಯಾ ಗಡಗಡ, ಪೊಲೀಸ್ ಕಸ್ಟಡಿಯಲ್ಲಿದ್ದ ಅತೀಕ್ ಅಹಮ್ಮದ್ ಹತ್ಯೆ!
ಉತ್ತರ ಪ್ರದೇಶದಲ್ಲಿ ಉಮೇಶ್ ಪಾಲ್ ಹತ್ಯೆ ಮಾಡಿದ ಬಳಿಕ ತಲೆಮರೆಸಿಕೊಂಡಿದ್ದ ಗುಡ್ಡು ಮುಸ್ಲಿಮ್, ಚುನಾವಣಾ ರಾಜ್ಯ ಕರ್ನಾಟಕದಲ್ಲಿ ಗುಡ್ಡು ಮುಸ್ಲಿಮ್ ಕಳೆದ ಕೆಲ ದಿನಗಳಿಂದ ಆಶ್ರಯ ಪಡೆದಿರುವ ಮಾಹಿತಿಯನ್ನು ಯುಪಿ ಪೊಲೀಸರಿಗೆ ಸಿಕ್ಕಿದೆ.
ಗ್ಯಾಂಗ್‌ಸ್ಟರ್ ಮಾಫಿಯಾ ಡಾನ್ ಅತೀಕ್ ಅಹಮ್ಮದ್ ಹಾಗೂ ಸಹೋದರ ಅಶ್ರಫ್ ಅಹಮ್ಮದ್ ಮೇಲೆ ಗುಂಡಿನ ದಾಳಿಯಾಗು ಮೊದಲು ಅತೀಕ್ ಗುಡ್ಡು ಮುಸ್ಲಿಮ್ ಕುರಿತು ಕೆಲ ಮಾಹಿತಿ ಬಹಿರಂಗ ಪಡಿಸಲು ಮುಂದಾಗಿದ್ದ. ಅಷ್ಟರಲ್ಲೇ ಗುಂಡಿನ ದಾಳಿ ನಡೆದು ಮೃತಪಟ್ಟಿದ್ದ. ಮಾಧ್ಯಮದ ಮುಂದೆ ಮುಖ್ಯ ವಿಚಾರ ಅಂದರೆ ಗುಡ್ಡು ಮುಸ್ಲಿಮ್..ಅನ್ನುವಷ್ಟರಲ್ಲೇ ಅತೀಕ್ ತಲೆಗೆ ಗುಂಡೇಟು ಬಿದ್ದಿತ್ತು. ಹೀಗಾಗಿ ಗುಡ್ಡು ಕುರಿತು ಯಾವುದೇ ಮಾಹಿತಿ ಅತೀಕ್ ಹಾಗೂ ಅಶ್ರಫ್‌ನಿಂದ ಸಿಗಲಿಲ್ಲ.
ಗುಡ್ಡು ಮುಸ್ಲಿಮ್ ಬಾಂಬ್ ತಯಾರಿಸುವಲ್ಲಿ ಹಾಗೂ ಬಾಂಬ್ ಎಸೆಯುವಲ್ಲಿ ನಿಷ್ಣಾತ. ಹೀಗಾಗಿ ಈತನನ್ನು ಗುಡ್ಡು ಬಂಬಾಜ್ ಎಂದು ಕರೆಯುತ್ತಾರೆ. ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಬೈಕ್‌ನಲ್ಲಿ ಬಂದ ಗುಡ್ಡು ಮುಸ್ಲಿಮ್ ಕಚ್ಚಾ ಬಾಂಬ್ ಎಸೆದಿದ್ದ. 1997ರಲ್ಲಿ ಗುಡ್ಡು ಮುಸ್ಲಿಮ್ ಅರೆಸ್ಟ್ ಆಗಿದ್ದ. ಲಾ ಮಾರ್ಟಿನೇರ್ ಶಾಲೆಯ ಶಿಕ್ಷಕಿಯನ್ನು ಹತ್ಯೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಗುಡ್ಡು ಮುಸ್ಲಿಮ್, ಸಾಕ್ಷಿ ಕೊರತೆಯಿಂದ ಬಿಡುಗಡೆಯಾಗಿದ್ದ. ಬಳಿಕ ಹಲವು ಕೊಲೆ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ.
ಗ್ಯಾಂಗ್‌ಸ್ಟರ್ ಪುತ್ರನ ಎನ್‌ಕೌಂಟರ್ ಬಳಿಕ ಮತ್ತೆ ವೈರಲ್ ಆಗ್ತಿದೆ ಯೋಗಿ ಅಂದು ಸದನದಲ್ಲಿ ನೀಡಿದ ಹೇಳಿಕೆ
ಉಮೇಶ್ ಪಾಲ್ ಕೊಲೆ ಪ್ರಕರಣ 8 ಆರೋಪಿಗಳ ಪೈಕಿ 6 ಮಂದಿಯನ್ನು ಪೊಲೀಸರು ಹತ್ಯೆ ಮಾಡಲಾಗಿದೆ. ಇದಲ್ಲಿ ಬಾಕಿ ಉಳಿದಿರುವುದು ಗುಡ್ಡು ಮುಸ್ಲಿಮ್ ಹಾಗೂ ಅತೀಕ್ ಅಹಮ್ಮದ್ ಪತ್ನಿ ಮಾತ್ರ. ಉಮೇಶ್ ಕೊಲೆ ಬಳಿಕ ಈ ಕೊಲೆಯ ಆರೋಪಿಯಲ್ಲಿ ಒಬ್ಬನಾಗಿದ್ದ ಚಾಲಕ ಅರ್ಬಾಜ್‌ನನ್ನು ಯುಪಿ ಪೊಲೀಸರು ಫೆಬ್ರವರಿ 27 ರಂದು ಎನ್‌ಕೌಂಟರ್ ಮಾಡಿದ್ದರು. ಮಾರ್ಚ್ 6 ರಂದು ಪ್ರಯಾಗ್‌ರಾಜ್‌ನಲ್ಲಿ ಉಸ್ಮಾನ್ ಅಲಿಯಾಸ್ ವಿಜಯ್ ಚೌಧರಿಯನ್ನು ಎನ್‌ಕೌಂಟರ್ ಮಾಡಲಾಗಿತ್ತು.
ಎಪ್ರಿಲ್ 13 ರಂದು ಉಮೇಶ್ ಪಾಲ್ ಮೇಲೆ ಗುಂಡಿನ ದಾಳಿ ನಡೆಸಿದ ಅತೀಕ್ ಅಹಮ್ಮದ್ ಪುತ್ರ ಅಸಾದ್ ಹಾಗೂ ಸಹಚರ ಗುಲಾಮ್‌ನನ್ನು ಎನ್‌ಕೌಂಟರ್ ಮಾಡಲಾಗಿತ್ತು. ಇನ್ನು ಎಪ್ರಿಲ್ 15 ರ ರಾತ್ರಿ ಉಮೇಶ್ ಪಾಲ್ ಕೊಲೆ ಪ್ರಕರಣದ ಮಾಸ್ಟರ್‌ಮೈಂಡ್ ಅತೀಕ್ ಅಹಮ್ಮದ್ ಹಾಗೂ ಆತನ ಸಹೋದರ ಅಶ್ರಫ್ ಮೇಲೆ ಮೂವರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ