
ಉಡುಪಿ (ಆ.25): ಮದ್ಯದಲ್ಲಿ ಮಾದಕ ವಸ್ತು ನೀಡಿ 21 ವರ್ಷದ ಹಿಂದೂ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ಕಾರ್ಕಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಯುವತಿಯ ಪೋಷಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಅಲ್ತಾಫ್ ಬಂಧಿತ ಆರೋಪಿಯಾಗಿದ್ದು, ಹಿಂದೂ ಸಂಘಟನೆಗಳು ಇದು ಅತ್ಯಾಚಾರ ಪ್ರಕರಣವಲ್ಲ. ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಆರೋಪಿಸಿವೆ.
ಈ ಬಗ್ಗೆ ಆರೋಪಿ ಅಲ್ತಾಫ್ ತಾಯಿ ಆಯಿಷಾ ಏಷಿಯಾನೆಟ್ ಸುವರ್ಣನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದು, ನನ್ನ ಮಗ ದುಡಿಯುತ್ತಾನೆ ರಾತ್ರಿ 12 ಗಂಟೆಗೆ ಬರುತ್ತಾನೆ. ನನಗೆ ಈ ಘಟನೆ ಬಗ್ಗೆ ಏನೂ ಗೊತ್ತಿಲ್ಲ. ಪೊಲೀಸರು ನಮ್ಮ ಬಳಿ ಏನೂ ಕೇಳಿಲ್ಲ. ನಮ್ಮ ಊರು ತೀರ್ಥಹಳ್ಳಿ. ನನ್ನ ಮಗ ಮರಳಿನ ವ್ಯಾಪಾರ ಮಾಡುತ್ತಿದ್ದಾನೆ. ಮದುವೆಯಾಗಿದೆ. ಎರಡು ಮಕ್ಕಳು ಇದ್ದಾರೆ. ಘಟನೆ ನಡೆದ ಮೇಲೆ ನಾವು ಪೊಲೀಸ್ ಠಾಣೆಗೆ ಹೋದಾಗ ಮತ್ತೆ ಫೋನ್ ಮಾಡುತ್ತೇವೆ ಎಂದಿದ್ದಾರೆ. ಮಗನನ್ನ ಒಮ್ಮೆ ಬಿಡಿಸಿ ತರಬೇಕು. ಮಗ ಅತ್ಯಾಚಾರ ಮಾಡಿದ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದ ಆರೋಪಿ ತಾಯಿ ಆಯಿಷಾ ಹೇಳಿದ್ದಾರೆ.
12 ವರ್ಷದ ಶಾಲಾ ಬಾಲಕಿ ಮೇಲೆ ಅತ್ಯಾಚಾರ ಯತ್ನ, ಸ್ಥಳೀಯರಿಂದ ಕಾಮುಕನಿಗೆ ಧರ್ಮದೇಟು!
ಇನ್ನು ಅತ್ಯಾಚಾರ ಘಟನೆ ಬಗ್ಗೆ ಅಲ್ತಾಫ್ ಸಹೋದರ ಕೂಡ ಪ್ರತಿಕ್ರಿಯೆ ನೀಡಿದ್ದು, ನನ್ನ ತಮ್ಮ ಅಲ್ತಾಫ್ ಸಿಗರೇಟು ಕೂಡ ಸೇದುತ್ತಿರಲಿಲ್ಲ. ಗೆಳೆಯರು ಒತ್ತಾಯ ಮಾಡಿ ಅವನಿಗೆ ದುಶ್ಚಟ ಕಲಿಸಿದ್ದಾರೆ. ಡ್ರಗ್ಸ್ ತೆಗೆದುಕೊಳ್ಳುತ್ತಿದ್ದ ವಿಚಾರ ನನಗೆ ಗೊತ್ತಿಲ್ಲ. ಅವನು ಏನು ತಿನ್ನುವುದಿಲ್ಲ, ಏನೂ ಮಾಡುವುದಿಲ್ಲ. ಜಬರ್ದಸ್ತ್ ಅಲ್ಲಿ ಜೊತೆಗಿದ್ದವರು ಅವನನ್ನು ಹಾಳು ಮಾಡಿದ್ದಾರೆ. ನಾನು ಅವನ ತಮ್ಮನಾಗಿ ಹೇಳುತ್ತೇನೆ ಅವನಿಗೆ ಯಾವುದೇ ಚಟ ಇರಲಿಲ್ಲ ಎಂದ ಸಹೋದರ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ