ಬೆಂಗಳೂರು: ಜೆ.ಪಿ.ನಗರದಲ್ಲಿ ಉಡುಪಿ ಉದ್ಯಮಿ ಕುಟುಂಬದ ಆತ್ಮಹತ್ಯೆ ಪ್ರಕರಣಕ್ಕೆ ಸಿಕ್ತು ರೋಚಕ ತಿರುವು!

By Sathish Kumar KH  |  First Published Mar 20, 2024, 4:18 PM IST

ಬೆಂಗಳೂರಿನ ಜೆ.ಪಿ.ನಗರದಲ್ಲಿ ನಡೆದ ಉಡುಪಿ ಉದ್ಯಮಿ ಕುಟುಂಬದ 3 ಜನರ ಸಾವಿನ ಪ್ರಕರಣ ಸಂಬಂಧಿಸಿದಂತೆ ರೋಚಕ ತಿರುವು ಸಿಕ್ಕಿದೆ.


ಬೆಂಗಳೂರು (ಮಾ.20): ರಾಜ್ಯ ರಾಜಧಾನಿ ಬೆಂಗಳೂರಿನ ಜೆ.ಪಿ. ನಗರದಲ್ಲಿ ಉಡುಪಿ ಮೂಲದ ಉದ್ಯಮಿ ಕುಟುಂಬದ ಮೂವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಚಕ ತಿರುವು ಸಿಕ್ಕಿದೆ. ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ ಪೊಲೀಸರಿಗೆ ಕುಟುಂಬದ ಸದಸ್ಯರು ಬೆಂಕಿ ಹಚ್ಚಿಕೊಂಡಿಲ್ಲ ಎಂಬುದು ತಿಳಿದುಬಂದಿದೆ.

ಹೌದು, ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಘಟನೆ ಕಾಡ್ಗಿಚ್ಚಿನಂತೆ ಹರಡಿತ್ತು. ಆದರೆ, ಇವರು ಯಾವ ಕಾರಣದಿಂದ ಸಾವನ್ನಪ್ಪಿದ್ದಾರೆ ಎಂಬುದನ್ನು ಪತ್ತೆ ಮಾಡುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಪೊಲೀಸರು ಸ್ಥಳ ಪರಿಶೀಲನೆ ಮಾಡಿದಾಗ, ಈ ದುರ್ಘಟನೆಗೆ ಮೂರ್ನಾಲ್ಕು ಕಾರಣಗಳಿರಬಹುದು ಎಂದು ಅನುಮಾನ ವ್ಯಕ್ತಪಡಿದ್ದಾರೆ. ಮೊದಲು ಕುಟುಂಬದ ಫ್ಯಾಕ್ಟರಿ ನಷ್ಟವಾಗಿದ್ದರಿಂದ, ಬ್ಯಾಂಕ್‌ನವರು ಸಾಲ ವಸೂಲಿಗೆ ಬಂದು ಕಿರಿಕುಳ ನಿಡಿದ್ದರು. ಆದ್ದರಿಂದ ಮನೆಯವರು ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು.

Latest Videos

undefined

Bengaluru: ಉಡುಪಿ ಉದ್ಯಮಿಯ ಫ್ಯಾಕ್ಟರಿ ಕೋವಿಡ್‌ನಿಂದ ನಷ್ಟ; ಆತ್ಮಹತ್ಯೆಗೆ ಶರಣಾದ ಕುಟುಂಬ!

ಆದರೆ, ಅಲ್ಲಿ ಬೆಂಕಿ ಹಚ್ಚಿಕೊಂಡಿದ್ದಕ್ಕೆ ಪೆಟ್ರೋಲ್ ಆಗಲೀ, ಗ್ಯಾಸ್ ಆಗಲೀ ಇರಲಿಲ್ಲ. ಆದರೆ, ಬೆಡ್‌ ರೂಮ್‌ನಲ್ಲಿ ಸುಟ್ಟುಕೊಂಡು ಸಾವನ್ನಪ್ಪಿದ್ದರು. ಇನ್ನು ಪೊಲೀಸರು ಬಂದು ಪರಿಶೀಲನೆ ಮಾಡಿದಾಗ ವಿದ್ಯುತ್ ವೈರ್ ಕಿತ್ತುಕೊಂಡು ಬಂದಿದ್ದು, ಎಲ್ಲರೂ ವಿದ್ಯುತ್ ವೈರ್‌ ಅನ್ನು ಹಿಡಿದುಕೊಂಡು ವಿದ್ಯುತ್‌ ಶಾಕ್‌ನಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಪೊಲೀಸರು ಪುನಃ ಪರಿಶೀಲನೆ ಮಾಡಿದಾಗ ಆತ್ಮಹತ್ಯೆಗೆ ಮತ್ತೊಂದು ಕಾರಣ ಕಂಡುಬಂದಿದೆ.

ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ನಮಗೆ 8.30 ಕ್ಕೆ ಮೇಸೆಜ್ ಬರುತ್ತದೆ. ಆತ್ಮಹತ್ಯೆಗೆ ಸಾಲ ಬಾದೆಯೇ ಕಾರಣ ಅಂತ ಗೊತ್ತಾಗುತ್ತಿದೆ. ಪೊಲೀಸರು ತನಿಖೆ ನಡೆಸುತ್ತಾರೆ. ಯಾರಾದ್ರು ಕಿರುಕುಳ ಕೊಟ್ಟ ಬಗ್ಗೆ ವಿಚಾರಣೆ ಮಾಡ್ತೀವಿ. ರೂಮ್ ನಲ್ಲಿ ಕರೆಂಟ್ ವೈರ್ ಹಿಡಿದುಕೊಂಡು ಸಾವನ್ನಪ್ಪಿದ್ದಾರೆ ಪ್ರಾಥಮಿಕ ಮಾಹಿತಿ ತಿಳಿದುಬಂದಿದೆ.
- ಶಿವ ಪ್ರಕಾಶ್ ದೇವರಾಜ್, ದಕ್ಷಿಣ ವಿಭಾಗದ ಡಿಸಿಪಿ 

ಹೌದು, ಉಡುಪಿಯಿಂದ ಬಂದಿದ್ದ ಜಯಾನಂದ್ ಅವರು ವುಡ್‌ ಡೈ ಮೇಕಿಂಗ್ ಫ್ಯಾಕ್ಟರಿ ಆರಂಭಿಸಿದ್ದರು. ಆದರೆ, ಫ್ಯಾಕ್ಟರಿ ನಷ್ಟವಾಗಿದ್ದರಿಂದ ಅದನ್ನು ಮುಚ್ಚಿದ್ದರು. ಫ್ಯಾಕ್ಟರಿಯಲ್ಲಿ ಇಟ್ಟಿದ್ದ ಕೆಮಿಕಲ್‌ ಬಾಟಲಿಗಳನ್ನು ಹಾಗೂ ಡೈ ಮೇಕಿಂಗ್ ಆಯಿಲ್‌ಗಳನ್ನು ತಂದು ಮನೆಯಲ್ಲಿ ಇಟ್ಟುಕೊಂಡಿದ್ದರು. ನಿನ್ನೆ ಬ್ಯಾಂಕ್‌ನವರು ಸಾಲ ವಸೂಲಿಗೆ ಬಂದು ಕಿರುಕುಳ ನೀಡಿದ್ದರಿಂದ, ಗೌರವಕ್ಕೆ ಧಕ್ಕೆ ಉಂಟಾಗಿತ್ತು. ಇದರಿಂದ ಮನನೊಂದು ರಾತ್ರಿಯೆಲ್ಲಾ ಚಿಂತೆ ಮಾಡಿ ಬೆಳಗ್ಗಿನ ವೇಳೆ ತಾಯಿ ಸುಕನ್ಯಾ, ಮಕ್ಕಳಾದ ನಿಶ್ಚಿತ್ (ಅಂಗವಿಕಲ) ಹಾಗೂ ನಿಖಿತ್ ಬಾಗಿಲು ಹಾಕಿಕೊಂಡು ಮನೆಯಲ್ಲಿ ತಂದಿಟ್ಟಿದ್ದ ಫ್ಯಾಕ್ಟರಿಯ ಕೆಮಿಕಲ್ ಬಾಟಲಿಯನ್ನು ತೆರೆದು ಅದನ್ನು ಮೈಮೇಲೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವೇಳೆ ಬೆಂಕಿಯ ತಾಪದಿಂದ ವೈಯರ್ ಗಳು ಸುಟ್ಟಿರೋ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಸರ್ಕಾರಿ ನೌಕರ ಗಂಡನ IPL ಬೆಟ್ಟಿಂಗ್‌ ದಂಧೆಗೆ ಬೇಸತ್ತು ಆತ್ಮಹತ್ಯೆಗೆ ಶರಣಾದ ನವವಿವಾಹಿತೆ ರಂಜಿತಾ!

ಆದರೂ, ಉದ್ಯಮಿ ಕುಟುಂಬದ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯ (Forensic Science Laboratory-FSL) ತಂಡದ ಸಿಬ್ಬಂದಿ ಬಂದು ಸ್ಥಳದಲ್ಲಿ ಸಿಕ್ಕ ಕೆಲವು ವಸ್ತುಗಳನ್ನು ಸಂಗ್ರಹಿಸಿಕೊಂಡು ಹೋಗಿದ್ದಾರೆ. ಇನ್ನು ಸಾವಿಗೆ ಕಾರಣವಾದ ವಸ್ತುವಿನ ಬಗ್ಗೆ ಪತ್ತೆ ಮಾಡುತ್ತಿದ್ದಾರೆ. ಈವರೆಗೆ ಸಾವಿನ ಬಗ್ಗೆ ಮೂರ್ನಾಲ್ಕು ಆಯಾಮಗಳ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದ್ದು, ಎಫ್‌ಎಸ್‌ಎಲ್ ತಂಡದ ವರದಿಯ ನಂತರ ನಿಜಾಂಶ ಗೊತ್ತಾಗಲಿದೆ. ಮೂವರ ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಇನ್ನು ಪೊಲೀಸರು ಕೂಡ ಸಾವಿನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

click me!