ಆಟವಾಡುತ್ತಿದ್ದ ಇಬ್ಬರು ಮಕ್ಕಳ ಬರ್ಬರ ಹತ್ಯೆ, ಯುಪಿ ಪೊಲೀಸರಿಂದ ಆರೋಪಿ ಸಾಜಿದ್ ಎನ್‌ಕೌಂಟರ್!

By Suvarna News  |  First Published Mar 20, 2024, 1:19 PM IST

ಟೆರೇಸ್ ಮೇಲೆ ಆಟವಾಡುತ್ತಿದ್ದ ವಿನೋದ್ ಎಂಬವರ ಮೂವರು ಮಕ್ಕಳ ಮೇಲೆ ಸಾಜಿದ್ ಕೊಡಲಿಯಿಂದ ದಾಳಿ ನಡೆಸಿದ್ದಾನೆ. ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂರನೆ  ಮಗು ಗಂಭೀರವಾಗಿ ಗಾಯಗೊಂಡಿದೆ. ಇತ್ತ ಸ್ಥಳದಿಂದ ಪರಾರಿಯಾದ ಆರೋಪಿ ಸಾಜಿದ್‌ನನ್ನು ಎನ್‌ಕೌಂಟ್ ಮಾಡಲಾಗಿದೆ.
 


ಬದೌನ್(ಮಾ.20) ಉತ್ತರ ಪ್ರದೇಶದಲ್ಲಿ ಭೀಕರ ಕೊಲೆ ನಡೆದಿದೆ. 13 ವರ್ಷದ ಆಯುಷ್, 7 ವರ್ಷದ ಅಹಾನ್ ಹಾಗೂ 6 ವರ್ಷದ ಪಿಯೂಷ್ ಮೇಲೆ ಆರೋಪಿ ಸಾಜಿದ್ ಕೊಡಲಿಯಿಂದ ದಾಳಿ ಮಾಡಿದ್ದಾನೆ. ಈ  ಪೈಕಿ ಇಬ್ಬರು ಮೃತಪಟ್ಟಿದ್ದರೆ, ಮತ್ತೊಬ್ಬ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಇತ್ತ ಸ್ಥಳದಿಂದ ಪರಾರಿಯಾದ ಆರೋಪಿ ಸಾಜಿದ್ ಬೆನ್ನಟ್ಟಿದ ಪೊಲೀಸರು ಎನ್‌ಕೌಂಟ್ ಮಾಡಿದ್ದಾರೆ. ಈ ಮೂಲಕ ಭೀಕರ ಹತ್ಯೆಗೆ ಸ್ಥಳದಲ್ಲೇ ಸ್ಪಷ್ಟ ಸಂದೇಶ ನೀಡುವ ಪ್ರಯತ್ನವನ್ನೂ ಉತ್ತರ ಪ್ರದೇಶದ ಪೊಲೀಸರು ಮಾಡಿದ್ದಾರೆ. 

ಉತ್ತರ ಪ್ರದೇಶ ಬದೌನ್‌ನ ಬಾಬಾ ಕಾಲೋನಿಯಲ್ಲಿ ಸಾಜಿದ್ ಬಾರ್ಬರ್ ಶಾಪ್ ಇಟ್ಟುಕೊಂಡಿದ್ದ. ಸಲೂನ್ ಪಕದ್ದಲ್ಲೇ ವಿನೋದ್ ಮನೆ ಇದೆ. ಇಂದು(ಮಾ.20) ವಿನೋದ್ ಮನೆಗೆ ಸಾಜಿದ್ ಆಗಮಿಸಿದ್ದಾನೆ. ಈ ವೇಳೆ ವಿನೋದ್ ಅವರ ಮೂವರು ಮಕ್ಕಳು ಮನೆಯ ಟೆರೆಸ್ ಮೇಲೆ ಆಟವಾಡುತ್ತಿದ್ದರು. ನೇರವಾಗಿ ಟೆರೆಸ್‌ಗೆ ತೆರಳಿದ ಸಾಜಿದ್, ಕೊಡಲಿಯಿಂದ ಮಕ್ಕಳ ಮೇಲೆ ದಾಳಿ ನಡೆಸಿದ್ದಾರೆ. ಕೊಚ್ಚಿ ಕೊಚ್ಚಿ ಹತ್ಯೆ ಮಾಡಿದ್ದಾನೆ. 6 ವರ್ಷದ ಬಾಲಕ ಹಾಗೂ 13 ವರ್ಷದ ಬಾಲಕ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಇನ್ನು 7 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.

Tap to resize

Latest Videos

ಕೋಚಿಂಗ್‌ಗೆ ಬಂದ ವಿದ್ಯಾರ್ಥಿನಿ ಗರ್ಭಿಣಿ ಮಾಡಿದ ಕಾಮುಕ, ಅಬಾರ್ಶನ್ ನಿರಾಕರಿಸಿದ್ದಕ್ಕೆ ಹತ್ಯೆ!

ಹತ್ಯೆ ನಡೆಸಿ ಮನೆಯಿಂದ ಕೆಳಗೆ ಇಳಿದು ಬರುತ್ತಿದ್ದಂತೆ ಗಾಯಗೊಂಡ ಬಾಲಕನ ಚೀರಾಟ ಕೇಳಿಸಿದೆ. ಹೀಗಾಗಿ ಸ್ಥಳೀಯ ಸುತ್ತುವರೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ಕೈಯಲ್ಲಿ ಕೊಡಲಿ ಬೀಸುತ್ತಾ ಆರೋಪಿ ಸಾಜಿದ್ ಪರಾರಿಯಾಗಿದ್ದಾನೆ.ವಿನೋದ್ ಕುಮಾರ್ ಮನೆಯಲ್ಲಿ ಇಲ್ಲದ ವೇಳೆ ಈ ಘಟನೆ ನಡೆದಿದೆ. ಸ್ಥಳೀಯರು ಮೂವರು ಮಕ್ಕಳನ್ನು ಆಸ್ಪತ್ರೆ ದಾಖಲಿಸಿದ್ದಾರ. ಈ ಪೈಕಿ ಗಾಯಗೊಂಡ 7 ವರ್ಷದ ಬಾಲಕನಿಗೆ ಚಿಕಿತ್ಸೆ ಮುಂದುವರಿದಿದೆ. ಇತ್ತ  ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಸರ್ಚ್ ಆಪರೇಶನ್ ಆರಂಭಿಸಿದ್ದಾರೆ.

ಸಿಸಿಟಿವಿ ಸೇರಿದಂತೆ ಎಲ್ಲಾ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಇತ್ತ ಸ್ಥಳೀಯರು ಕೆಲ ಮಾಹಿತಿ ನೀಡಿದ್ದಾರೆ. ಹೀಗಾಗಿ ಪೊಲೀಸರು ಆರೋಪಿ ಸಾಜಿದ್‌ನ ಬೆನ್ನಟ್ಟಿ ಎನ್‌ಕೌಂಟರ್ ಮಾಡಿದ್ದಾರೆ. ವಿನೋದ್ ಮಕ್ಕಳನ್ನು ಹತ್ಯೆ ಮಾಡಲು ಕಾರಣಗಳು ತಿಳಿದಿಲ್ಲ. ಪೊಲೀಸರು ತನಿಖೆ ಮುಂದವರಿಸಿದ್ದಾರೆ. ಆರೋಪಿ ಸಾಜಿದ್, ನನ್ನ ಕೆಲಸ ಮಾಡಿ ಮುಗಿಸಿದ್ದೇನೆ ಎಂದು ಹೇಳುತ್ತಾ ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಹೀಗಾಗಿ ಆ ಹತ್ಯೆ ಹಿಂದೆ ಧಾರ್ಮಿಕ ದ್ವೇಷದ ಕರಿನೆರಳು ಗೋಚರಿಸುತ್ತಿದೆ. ಇದೀಗ ಸ್ಥಳದಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣವಾಗಿದೆ. 

ಸ್ವರ್ಗದಂತೆ ಎಲ್ಲಾ ಭೋಗ ಅನುಭವಿಸುತ್ತಿದ್ದೇನೆ, ಜೈಲಿನಿಂದ ಕೊಲೆ ಆರೋಪಿಯ ಫೇಸ್‌ಬುಕ್ ಲೈವ್!

ಮಕ್ಕಳನ್ನು ಭೀಕರವಾಗಿ ಹತ್ಯೆಗೈದ ಆರೋಪಿ ಸಾಜಿದ್‌ನನ್ನು ಪೊಲೀಸರು ಎನ್‌ಕೌಂಟ್ ಮಾಡುವ ಮೂಲಕ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಹತ್ಯೆ ನಡೆಸುವ ಯಾರೇ ಇದ್ದರೂ ಸ್ಥಳದಲ್ಲೇ ಎನ್‌ಕೌಂಟ್ ಮಾಡುವ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ.

click me!