ಹಂಪಿ ನದಿಯಲ್ಲಿ ಕೊಚ್ಚಿಹೋದ ಇಬ್ಬರು ಯುವಕರು

By Ravi Janekal  |  First Published Dec 28, 2022, 9:50 PM IST

ವಿಶ್ವವಿಖ್ಯಾತ ಹಂಪಿ ನದಿಯಲ್ಲಿ ಈಜಲು ತೆರಳಿದ ಇಬ್ಬರು ಯುವಕರು ನೀರಿನಲ್ಲಿ ಕೊಚ್ಚಿ ಹೋದ ಘಟನೆ ಬುಧವಾರ ನಡೆದಿದೆ. ಬೆಂಗಳೂರು ಮೂಲದ ಹರೀಶ್‌ (18) ಮತ್ತು ಜೀವನ್‌ (18) ನದಿಯಲ್ಲಿ ಕೊಚ್ಚಿ ಹೋದ ಯುವಕರು.


ವಿಜಯನಗರ (ಡಿ.28): ವಿಶ್ವವಿಖ್ಯಾತ ಹಂಪಿ ನದಿಯಲ್ಲಿ ಈಜಲು ತೆರಳಿದ ಇಬ್ಬರು ಯುವಕರು ನೀರಿನಲ್ಲಿ ಕೊಚ್ಚಿ ಹೋದ ಘಟನೆ ಬುಧವಾರ ನಡೆದಿದೆ. ಬೆಂಗಳೂರು ಮೂಲದ ಹರೀಶ್‌ (18) ಮತ್ತು ಜೀವನ್‌ (18) ನದಿಯಲ್ಲಿ ಕೊಚ್ಚಿ ಹೋದ ಯುವಕರು. ಸ್ನೇಹಿತರೊಂದಿಗೆ ಹಂಪಿ ಪ್ರವಾಸಕ್ಕೆ ಆಗಮಿಸಿದ್ದ ಯುವಕರು,ಪುರಂದರ ದಾಸರ ಮಂಟಪದ ಬಳಿ ಹರಿಯುತ್ತಿರುವ ನದಿಯಲ್ಲಿ ಈಜಲು ತೆರಳಿ ನೀರು ಪಾಲಾಗಿದ್ದಾರೆ.

ಗೆಳೆಯನ ಜನ್ಮದಿನದ ಹಿನ್ನೆಲೆಯಲ್ಲಿ ಬಳ್ಳಾರಿಗೆ ಬುಧವಾರ ಆಗಮಿಸಿದ್ದ ಯುವಕರು ಎಂಟು ಜನ ಗೆಳೆಯರೊಂದಿಗೆ ಹಂಪಿಗೆ ಭೇಟಿ ನೀಡಿದ್ದರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಪುರಂದರ ಮಂಟಪದ ಹತ್ತಿರ ಹಾದು ಹೋಗಿರುವ ನದಿಯಲ್ಲಿ ಈಜಾಡಲು ನೀರಿಗೆ ಇಳಿದಿದ್ದಾರೆ. ನೀರಿನ ಸೆಳೆತಕ್ಕೆ ಸಿಲುಕಿ ಹೊರ ಬರಲಾರದೇ ಜಲ ಸಮಾಧಿಯಾಗಿದ್ದಾರೆ. ಹಂಪಿ ಪೊಲೀಸರು, ಅಗ್ನಿಶಾಮಕದ ದಳದ ಸಿಬ್ಬಂದಿ ಹಾಗೂ ನುರಿತ ಈಜುಗಾರರು, ನಾಪತ್ತೆಯಾದ ಯುವಕರ ಶೋಧ ನಡೆಸಿದ್ದಾರೆ. ಹಂಪಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tap to resize

Latest Videos

ತಮ್ಮನನ್ನು ಉಳಿಸಲು ಹೋದ ಮೂರು ಅಕ್ಕಂದಿರು ನೀರುಪಾಲು: ವಿಜಯಪುರದಲ್ಲಿ ಮನಕಲಕುವ ಘಟನೆ

click me!