ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಭೇಟಿ ನೀಡಿ ಚಿನ್ನಾಭರಣ ದೋಚುತ್ತಿದ್ದ, ಖರ್ತನಾಕ್ ಕಳ್ಳ-ಕಳ್ಳಿಯನ್ನ ಬಂಧಿಸುವಲ್ಲಿ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರು ಆರೋಪಿಗಳಿಬ್ಬರು ಮಹಾರಾಷ್ಟ್ರದ ಮುಂಬೈ ಹಾಗು ಪುಣೆ ಮೂಲದ ಯುವತಿ ಚೋಶನಾ ಹಾಗೂ ಯುವಕ ನವಜೀವ ಎಂದು ಗುರುತಿಸಲಾಗಿದೆ.
ಹುಬ್ಬಳ್ಳಿ (ನ.18): ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಭೇಟಿ ನೀಡಿ ಚಿನ್ನಾಭರಣ ದೋಚುತ್ತಿದ್ದ, ಖರ್ತನಾಕ್ ಕಳ್ಳ-ಕಳ್ಳಿಯನ್ನ ಬಂಧಿಸುವಲ್ಲಿ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರು ಆರೋಪಿಗಳಿಬ್ಬರು ಮಹಾರಾಷ್ಟ್ರದ ಮುಂಬೈ ಹಾಗು ಪುಣೆ ಮೂಲದ ಯುವತಿ ಚೋಶನಾ ಹಾಗೂ ಯುವಕ ನವಜೀವ ಎಂದು ಗುರುತಿಸಲಾಗಿದೆ. ಕಳೆದ ಮೂರು ತಿಂಗಳ ಹಿಂದೆ ನಗರದ ಕೊಪ್ಪಿಕರ್ ರಸ್ತೆ ಜುವೆಲ್ಲರಿ ಅಂಗಡಿಯಲ್ಲಿ ಕಳ್ಳತನ ನಡೆದಿತ್ತು. ಈ ಇಬ್ಬರು ಕಳ್ಖರನ್ನು ಬಂಧಿಸುವಲ್ಲಿ ಹುಬ್ಬಳ್ಳಿಯ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 3.34 ಲಕ್ಷ ರೂ. ಮೌಲ್ಯದ 66.6 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರು ಹುಬ್ಬಳ್ಳಿ ಧಾರವಾಡ ಸೇರಿದಂತೆ ಇತರೆ ನಗರಗಳಲ್ಲಿ ಆಭರಣ ಅಂಗಡಿಗಳ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.
ಆ. 28ರಂದು ಗ್ರಾಹಕ ಸೋಗಿನಲ್ಲಿ ನಗರದ ಕೊಪ್ಪಿಕರ ರಸ್ತೆಯ ಜ್ಯುವೇಲರ್ಸ್ ಅಂಗಡಿಗೆ ಭೇಟಿ ನೀಡಿದ್ದ ಇಬ್ಬರೂ 2.63 ಸಾವಿರ ಮೌಲ್ಯದ ಒಟ್ಟು 50.6 ಗ್ರಾಂ ತೂಕದ ಇಟಾಲಿಯನ್ ಮಾದರಿಯ ಬಂಗಾರದ ಚೈನ್ ಕಳ್ಳತನ ಮಾಡಿ ಪರಾರಿಯಾಗಿದ್ದರೂ ಈ ಬಗ್ಗೆ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶೋಧ ನಡೆಸಿದ ಪೊಲೀಸರು ಇನ್ಸ್ಪೆಕ್ಟರ್ ರವಿಚಂದ್ರನ್ ಬಿ ಅವರ ನೇತೃತ್ವದಲ್ಲಿ ಪಿಎಸ್ಐ ಕವಿತಾ.ಎಸ್.ಎಂ ಅವರ ತಂಡ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ದರೋಡೆ ಹೆಚ್ಚಳಕ್ಕೆ ಶಾಸಕ ನಾಡಗೌಡ, ಪೊಲೀಸರ ನಿರ್ಲಕ್ಷ್ಯವೇ ಕಾರಣ
ಸಿಂಧನೂರು: ನಗರ ಸೇರಿದಂತೆ ತಾಲೂಕಿನಾದ್ಯಂತ ಮನೆಗಳ್ಳತನ ಮತ್ತು ದರೋಡೆ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಶಾಸಕ ವೆಂಟಕರಾವ್ ನಾಡಗೌಡ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಆರೋಪಿಸಿದರು.
ಫೇಸ್‌ಬುಕ್ ಫ್ರೆಂಡ್‌ನಿಂದ ಮೆಟ್ರೋ ಸ್ಟೇಷನ್ ಬಳಿ ಯುವತಿ ಮೇಲೆ ಗ್ಲಾಸ್ ಬಾಟಲ್‌ನಿಂದ ಹಲ್ಲೆ
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಆರು ತಿಂಗಳಿನಿಂದ ತಾಲೂಕಿನಲ್ಲಿ ದರೋಡೆ ಪ್ರಕರಣಗಳು ಹೆಚ್ಚಿವೆ. ಪ್ರಶಾಂತನಗರ, ಆದರ್ಶಕಾಲೊನಿ, ಸಾಯಿಬಾಬ ಮಂದಿರ ಬಳಿ, ವಾಸವಿನಗರ, ವೆಂಕಟೇಶ್ವರ ಕಾಲೊನಿ, ವೆಂಕಟೇಶ್ವರ ಕ್ಯಾಂಪ್ ಸೇರಿದಂತೆ ಅನೇಕ ಕಡೆಗಳಲ್ಲಿ ಮನೆಗಳ್ಳತನವಾಗಿವೆ. ಇತ್ತೀಚೆಗಷ್ಟೇ ಗಾಂಧಿನಗರದ ಗ್ರಾಮದಲ್ಲಿ ಮುಳ್ಳುಪೂಡಿ ಭಾಸ್ಕರ್‌ರಾವ್ ಅವರ ಮನೆಯ ಬಾಗಿಲನ್ನು ಮುರಿದು ರಾಡ್‌ನಿಂದ ಕುಟುಂಬದ ಸದಸ್ಯರ ಮೇಲೆ ಹಲ್ಲೆ ಎಸಗಿ, ನಕಲಿ ಗನ್ ತೋರಿಸಿ ಕಳ್ಳತನ ಮಾಡಿದ್ದಾರೆ. ಇದಕ್ಕೆಲ್ಲ ಶಾಸಕರು ಮತ್ತು ಪೊಲೀಸ್ ಇಲಾಖೆ ನೇರ ಹೊಣೆ ಎಂದು ದೂರಿದರು.
YAKSHAGANA BHAGAVATA; ಕರಾವಳಿಯ ಪ್ರಖ್ಯಾತ ಯಕ್ಷಗಾನ ಭಾಗವತ ನೇಣಿಗೆ ಶರಣು!
ಕಳೆದ ಆರು ತಿಂಗಳಿನಿಂದ ಇಷ್ಟೆಲ್ಲ ದರೋಡೆಗಳು ನಡೆಯುತ್ತಿದ್ದರೂ ಸಹ ಶಾಸಕ ನಾಡಗೌಡರು ಎಷ್ಟುಸಲ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಪೊಲೀಸರು ಎಷ್ಟುಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿ, ಮರಳಿ ಮಾಲೀಕರಿಗೆ ಚಿನ್ನಾಭರಣಗಳನ್ನು ಹಿಂತಿರುಗಿಸಿದ್ದಾರೆ ಎಂದು ಪ್ರಶ್ನಿಸಿದರು. ಈ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎಚ್ಚೆತ್ತುಕೊಂಡು ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಮುಖಂಡರಾದ ವೆಂಕಟೇಶ ರಾಗಲಪರ್ವಿ, ಶಿವುಕುಮಾರ ಜವಳಿ, ಶರಣಯ್ಯಸ್ವಾಮಿ ಕೋಟೆ, ಚನ್ನಬಸವ ಕುಂಬಾರ, ವೀರರಾಜು ಇದ್ದರು.