ಹುಬ್ಬಳ್ಳಿಯಲ್ಲಿ ನಡೆಯಿತು ಹೃದಯ ವಿದ್ರಾವಕ ಘಟನೆ: ಅನಾರೋಗ್ಯದಿಂದ ಅತ್ತಿಗೆ, ಅಪಘಾತದಲ್ಲಿ ಮೈದುನ ಸಾವು

By Govindaraj S  |  First Published Jul 27, 2022, 11:00 PM IST

ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಮೃತಪಟ್ಟ ಅತ್ತಿಗೆಯನ್ನ ನೋಡಲು ಆಸ್ಪತ್ರೆಗೆ ಹೊರಟಿದ್ದ ಮೈದುನ, ಅಪಘಾತಕ್ಕಿಡಾಗಿ ನಡು ರಸ್ತೆಯಲ್ಲಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. 


ಹುಬ್ಬಳ್ಳಿ (ಜು.27): ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಮೃತಪಟ್ಟ ಅತ್ತಿಗೆಯನ್ನ ನೋಡಲು ಆಸ್ಪತ್ರೆಗೆ ಹೊರಟಿದ್ದ ಮೈದುನ, ಅಪಘಾತಕ್ಕಿಡಾಗಿ ನಡು ರಸ್ತೆಯಲ್ಲಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಅತ್ತಿಗೆ ಮೈದುನನ ಸಾವು ಓಣಿ ಜನರನ್ನು ಕಣ್ಣೀರ ಮುಳುಗುಂತೆ ಮಾಡಿದೆ. ಆಸ್ಪತ್ರೆಯಲ್ಲಿ ಹೆಣವಾಗಿ ಮಲಗಿರುವ ಅತ್ತಿಗೆ ಮತ್ತೊಂದೆಡೆ ಅತ್ತಿಗೆ ಸಾವಿನ ಸುದ್ದಿ ಕೇಳಿ ಆಸ್ಪತ್ರೆಗೆ ಧಾವಿಸಿ ಬರುತ್ತಿದ್ದ ಮೈದುನನ ಬೈಕ್ ಅಪಘಾತಕ್ಕಿಡಾಗಿ ನಡು ರಸ್ತೆಯಲ್ಲಿ ಹೆಣವಾಗಿ ಬಿದ್ದಿರುವ ದೃಶ್ಯ. ರಸ್ತೆಯಲ್ಲಿ ಹೆಣವಾಗಿ ಬಿದ್ದ ಯುವಕನ ಹೆಸರು ಪೈರೋಜ್ ಧಾರವಾಡ, ಹುಬ್ಬಳ್ಳಿಯ ಬೀರಬಂದ ಓಣಿಯ ನಿವಾಸಿ. ಸ್ಕೂಟಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಪೈರೋಜ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. 

ಸೆಂಟ್ರಿಂಗ್ ಕೆಲಸ ಮಾಡಿಕೊಂಡು ಮನೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದ‌ ಪೈರೋಜ್, ತನ್ನ ಅಣ್ಣನ ಪತ್ನಿ ರಿಹಾನ್ ಬೇಗಂಗೆ ಅನಾರೋಗ್ಯ ಕಾರಣದಿಂದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದ. ಆದರೆ ‌ವಿಧಿಯ ಆಟವೇ ಬೇರೆಯಾಗಿತ್ತು. ಅತ್ತಿಗೆ ಸಾವಿನ ಸುದ್ಧಿ‌ ಕಿವಿಗೆ ಬಿಳುತ್ತಿದ್ದಂತೆಯೇ ಆಸ್ಪತ್ರೆಗೆ ಹೋಗುವ ವೇಳೆ ದಾರಿಯಲ್ಲಿ ಪೈರೋಜ್ ಸಾವನ್ನಪ್ಪಿದ್ದಾನೆ. ಮನೆಗೆ ಆಸರೆಯಾಗಿದ್ದ ಯುವಕನ ಅಗಲಿಕೆಗೆ ಜನರು ಕಂಬನಿ ಮೀಡಿದಿದ್ದಾರೆ. ಇನ್ನೂ ಸೆಂಟ್ರಿಗ್ ಕೆಲಸ ಮಾಡಿಕೊಂಡು ಕುಟುಂಬದ ಬಂಡಿಯನ್ನು ಸಾಗಿಸುತ್ತಿದ್ದ ಪೈರೋಜ್ ಸಾವಿನ ಸುದ್ದಿ ಕುಟುಂಬಸ್ಥರಿಗೆ ಬರಸಿಡಿಲು ‌ಬಡಿದಂತಾಗಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

Tap to resize

Latest Videos

ಹೆದ್ದಾರಿ ಹೊಂಡಕ್ಕೆ ಬಿದ್ದು ಬಲ ಗೈ ಮುರಿತ: ಪರೀಕ್ಷೆ ವಂಚಿತಳಾದ ವಿದ್ಯಾರ್ಥಿನಿ!

ಒಂದೇ ಮನೆಯಲ್ಲಿಯೇ ಒಂದೇ ದಿನ ಎರಡು ಜನರನ್ನು ಕಳೆದುಕೊಂಡ ಕುಟುಂಬದವರ ದುಃಖದ‌ ಕಟ್ಟೆ ಹೊಡೆದಿತ್ತು. ಇನ್ನೂ ಘಟನೆ ನಡೆಯುತ್ತಿದ್ದಂತೆಯೇ ಚಾಲಕ ಲಾರಿ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ತಲೆಗೆ ಗಂಭೀರ ಗಾಯಗಳಾಗಿ, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಈ ಸಂಬಂಧ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಿನಲ್ಲಿ ಕುಟುಂಬಕ್ಕೆ ಆಧಾರವಾಗಿದ್ದ ಯುವಕನ ಅಗಲಿಕೆಗೆ ಓಣಿಗೆ ಓಣಿಯೇ ಕಂಬನಿ ಮೀಡಿದಿದ್ದು, ವಠಾರದ ಜನರ ಅಚ್ಚು ಮೆಚ್ಚಿನ ಹುಡುಗ ಈಗ ಮರೆಯಾಗಿರುವುದು ಎಲ್ಲರನ್ನೂ ಶೋಕ ಸಾಗರದಲ್ಲಿ ಮುಳುಗಿಸಿದೆ.

ಬರ್ತಡೇ ಮುಗಿಸಿಕೊಂಡು ಹೊರಟಿದ್ದವರು ಮಸಣದ ಪಾಲು: ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪೂರದ ಬಳಿ ರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲಿಯೇ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದು, 4 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ದೇವಪ್ಪ ಕೊಪ್ಪದ (62), ಮೃತರ ಸೊಸೆ ಗಿರಿಜಮ್ಮ(45), ಅಣ್ಣನ ಮಕ್ಕಳಾದ ಶಾಂತಮ್ಮ (35), ಪಾರ್ವತಮ್ಮ (32), ಸಂಬಂಧಿ ಕಸ್ತೂರಮ್ಮ (20) ಸ್ಥಳದಲ್ಲೆ ಸಾವನಪ್ಪಿದ್ದು, ಚಾಲಕ ಹರ್ಷವರ್ಧನ, ಮಕ್ಕಳಾದ ಬಸವರಾಜ, ಪುಟ್ಟರಾಜ, ಭೂಮಿಕಾ ಎನ್ನುವರಿಗೆ ಗಾಯವಾಗಿದೆ. 

ಬೆಂಗಳೂರು: ಪೀಣ್ಯ ಫ್ಲೈಓವರ್‌ನಲ್ಲಿ ಸರಣಿ ಅಪಘಾತ

ಇವರೆಲ್ಲಾ ಕೊಪ್ಪಳದಲ್ಲಿ ಬರ್ತಡೇ ಮುಗಿಸಿಕೊಂಡು ಊರಿಗೆ ಹೊರಟಿದ್ದರು. ಮಾರ್ಗ ಮಧ್ಯೆ ಅಪರಿಚಿತ ವಾಹನ ಡಿಕ್ಕಿಯಾಗಿದ್ದು, ಅದರ ರಭಸಕ್ಕೆ ಸ್ಕಾರ್ಪಿಯೋ ಕಾರು ನುಜ್ಜು ನುಜ್ಜಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ಅರುಣಾಂಗ್ಷು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮಾತ್ರವಲ್ಲದೇ ಸ್ಕಾರ್ಪಿಯೋದಲ್ಲಿರುವ ಶವಗಳನ್ನು ಹೊರಗಡೆ ತೆಗೆಯಲು ಬರದ ಪರಿಸ್ಥಿತಿಯಲ್ಲಿದ್ದರೂ ಕಷ್ಟಪಟ್ಟು ಶವಗಳನ್ನು ಸ್ಥಳೀಯರು, ಸಂಬಂಧಿಗಳು ಹಾಗೂ ಪೊಲೀಸರು ಹೊರತೆಗೆದಿದ್ದಾರೆ. ಇನ್ನು ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಅಪರಿಚಿತ ವಾಹನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

click me!