Ballary: ಗಣಿ ತ್ಯಾಜ್ಯದ ರಾಶಿ ಕುಸಿದು ಇಬ್ಬರ ಸಾವು: 6 ಜನರ ವಿರುದ್ದ ಎಫ್ಐಆರ್ ದಾಖಲು!

By Govindaraj S  |  First Published Apr 15, 2022, 2:31 PM IST

ಅದು ಖಾಸಗಿ ಕಂಪನಿಯ ನಿಷೇಧಿದ ವೆಸ್ಟೇಜ್ ಡಂಪಿಂಗ್ ಯಾರ್ಡ್. ಆದರೆ ಅಲ್ಲಿ ಕೆಲ ಕಾರ್ಮಿಕ ವರ್ಗದ ಜನರು ಕದ್ದು ಮುಚ್ಚಿ ಹೋಗಿ ಅಲ್ಲಿ ಸಿಗೋ ವೆಸ್ಟೆಜ್ ಐರನ್ (ಕಿಟ್ಟ)  ಆಯ್ದ ಮಾರಾಟ ಮಾಡೋ ಕೆಲಸ ಮಾಡುತ್ತಾರೆ. ಈ ರೀತಿ ವೆಸ್ಟೇಜ್ ಅಯೋ ಕೆಲಸದ ವೇಳೆ ಗುಡ್ಡ ಕುಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ.


ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಬಳ್ಳಾರಿ

ಬಳ್ಳಾರಿ (ಏ.15): ಅದು ಖಾಸಗಿ ಕಂಪನಿಯ ನಿಷೇಧಿದ ವೆಸ್ಟೇಜ್ ಡಂಪಿಂಗ್ ಯಾರ್ಡ್ (Waste Dumping Yard). ಆದರೆ ಅಲ್ಲಿ ಕೆಲ ಕಾರ್ಮಿಕ ವರ್ಗದ ಜನರು ಕದ್ದು ಮುಚ್ಚಿ ಹೋಗಿ ಅಲ್ಲಿ ಸಿಗೋ ವೆಸ್ಟೆಜ್ ಐರನ್ (ಕಿಟ್ಟ)  ಆಯ್ದ ಮಾರಾಟ ಮಾಡೋ ಕೆಲಸ ಮಾಡುತ್ತಾರೆ. ಈ ರೀತಿ ವೆಸ್ಟೇಜ್ ಅಯೋ ಕೆಲಸದ ವೇಳೆ ಗುಡ್ಡ ಕುಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ (Death). ಪ್ರಕರಣ ಸಂಬಂಧಿಸಿದಂತೆ ಆರು ಜನರ ವಿರುದ್ಧ ಪ್ರಕರಣ (FIR) ದಾಖಲಾಗಿದೆ. ಆದರೆ ಈ ಸಾವಿಗೆ ಹೊಣೆಯಾರು ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.

Tap to resize

Latest Videos

undefined

ಜಿಂದಾಲ್ ಡಂಪಿಂಗ್ ಯಾರ್ಡ್‌ನಲ್ಲಿ ಅವಘಡ: ಜೆಎಸ್‌ಡಬ್ಲ್ಯು ಡಂಪಿಂಗ್ ಯಾರ್ಡ್‌ಗೆ (JSW Dumping Yard) (ಕಿಟ್ಟ) ಆಯಲು ಕೂಲಿ ಕಾರ್ಮಿಕರು ಹೋಗೋದು ಸಾಮಾನ್ಯ. ಆಯ್ದು ತಂದ ಕಿಟ್ಟವನ್ನು ಕೆ.ಜಿಗೆ 15 ರೂಪಾಯಿಯಂತೆ ಮಾರಾಟ ಮಾಡಿ ಕೆಲವರು ಜೀವನ ನಡೆಸುತ್ತಾರೆ. ಇದೇ ರೀತಿ ವೆಸ್ಟೇಜ್ ಆಯಲು ಹೋದಾಗ ಸಂಡೂರು ಸುಲ್ತಾನಪುರದಲ್ಲಿ ಮಣ್ಣಿನ ದಿಬ್ಬ ಕುಸಿದು ಇಬ್ಬರು ಮೃತಪಟ್ಟಿದ್ದಾರೆ. 

ಗುಡುಗು-ಮಿಂಚಿನ ಸಮ್ಮಿಲನ: ಶೃಂಗೇರಿ ಶಾರದಾಂಬೆ ದೇಗುಲದ ನಯನ ಮನೋಹರ ದೃಶ್ಯ ಸೆರೆ

ಘಟನೆ ನಡೆದದ್ದು ಹೇಗೆ: ಆರು ಮಂದಿ ಆರೋಪಿಗಳು ಸೇರಿದಂತೆ ಮೃತಪಟ್ಟ ಇಬ್ಬರು ಸುಲ್ತಾನಪುರದ ಜೆಎಸ್‌ಡಬ್ಲ್ಯು ಡಂಪಿಂಗ್ ಯಾರ್ಡ್‌ಗೆ ಕಿಟ್ಟ ಆಯಲು ಹೋಗಿದ್ದಾರೆ. ಈ ವೇಳೆ  ಮಣ್ಣಿನ ದಿಬ್ಬ ಕುಸಿದಿದೆ. ಆಗ ರಾಮಾಂಜಿನಿ ಮತ್ತು ಹೊನ್ನೂರಸ್ವಾಮಿ ಅದರಡಿಯಲ್ಲಿ ಸಿಕ್ಕಿಕೊಂಡರು. ಉಳಿದವರು ಪಾರಾದರು ಪಾರಾಗಿದ್ದಾರೆ. ವಿಷಯ ತಿಳಿದ ಪೊಲೀಸರು ಜೆಸಿಬಿ ಯಂತ್ರಗಳ ಸಹಾಯದಿಂದ ಸತತ ಎರಡು ದಿನಗಳ ಪ್ರಯತ್ನದಿಂದ ಶವವನ್ನು ಹೊರತೆಗೆಯಲಾಗಿದೆ..

ದೂರು ದಾಖಲು: ತುಮಟಿ ಗ್ರಾಮದ ತಿಮ್ಮಪ್ಪ ಎಂಬುವವರು ನೀಡಿರುವ ದೂರಿನ ಮೇಲೆ ಎಫ್‌ಐಆರ್ ದಾಖಲಿಸಿರುವ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಜೆಎಸ್‌ಡಬ್ಲ್ಯು ಕಂಪನಿ ಹಾಗೂ ಕುಡತಿನಿ ವಾಸಿಗಳಾದ ಸತ್ಯಪ್ಪ, ರಾಜಶೇಖರ್‌, ಅಂಜಿ, ಸ್ಟೋರ್ ಪಂಪಾಪತಿ, ಗ್ಯಾಂಗಿ ಹನುಮಂತಪ್ಪ ಮತ್ತು ಶಂಕರಗೌಡ ಅವರನ್ನೂ ಆರೋಪಿಗಳೆಂದು ಹೆಸರಿಸಲಾಗಿದೆ. ಕಂಪನಿ ವಿರುದ್ಧ ಆಕ್ರೋಶ ಅಪಾಯಕಾರಿ ಸ್ಥಳವಾದ ಸುಲ್ತಾನಪುರದ ಡಂಪಿಂಗ್ ಯಾರ್ಡ್ ಒಳಹೋಗಲು ಕೂಲಿ ಕಾರ್ಮಿಕರಿಗೆ ಯಾವುದೇ ನಿರ್ಬಂಧ ಹೇರದ ಜೆಎಸ್‌ಡಬ್ಲ್ಯು ವೆಸ್ಟೆಜ್ ಆಯಲು ಅವಕಾಶ ಕೊಟ್ಟಿದೆ. 

ಡಿಕೆಶಿ ಬಗ್ಗೆ ಬೇಗ ಎಚ್ಚೆತ್ತುಕೊಳ್ಳಿ, ನಿಮಗೂ ಖೆಡ್ಡಾ ತೋಡ್ಬಹುದು: ಸಿದ್ದುಗೆ ಎಚ್ಚರಿಕೆ ನೀಡಿದ ರೇಣುಕಾಚಾರ್ಯ

ವೆಸ್ಟೆಜ್ ಗುಡ್ಡವನ್ನು ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆ ಗುಡ್ಡ ಕುಸಿದಿದೆ. ಹೀಗಾಗಿ ನಮ್ಮವರನ್ನು‌ ಕಳೆದುಕೊಂಡಿದ್ದೇವೆಂದು ಆರೋಪಿಸಿದ್ದಾರೆ. ಅಲ್ಲದೇ ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಹೇಳಲಾಗಿದೆ. ಈ ದೂರು ಆಧರಿಸಿ ಕುಡತಿನಿ ಪೊಲೀಸ್ ಠಾಣೆಯಲ್ಲಿ ಭಾರತ ದಂಡ ಸಂಹಿತೆ ( ಐಪಿಸಿ ) ಸೆಕ್ಷನ್ 304 ಅಡಿ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಆದರೆ ಕಂಪನಿ ಮಾತ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಇದೊಂದು ನಿಷೇಧಿತ ಪ್ರದೇಶ ಎನ್ನುವುದನ್ನು ಮಾತ್ರ ಪೊಲೀಸರಿಗೆ ತಿಳಿಸಿದ್ದಾರೆ.

click me!