ಕಲಬುರಗಿ: ಮಕ್ಕಳೊಂದಿಗೆ ಬಾವಿಗೆ ಜಿಗಿದ ನೆಗೆಣಿಯರು, ಒಬ್ಬಳ ರಕ್ಷಣೆ, ಗರ್ಭಿಣಿ ಸಾವು

By Kannadaprabha News  |  First Published Oct 23, 2022, 8:30 PM IST

ಕಲಬುರಗಗಿ ಜಿಲ್ಲೆಯ ಕಮಲಾಪುರ ತಾಲೂಕಿನ ದೇವನ ತಾಂಡದಲ್ಲಿ ನಡೆದ ಘಟನೆ


ಕಮಲಾಪುರ(ಅ.23):  ನೆಗೆಣಿಯರಿಬ್ಬರ ಜಗಳ ಆತ್ಮಹತ್ಯೆವರೆಗೆ ತಲುಪಿದ ಘಟನೆ ದೇವನ ತಾಂಡದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಸದರಿಘಟನೆಯಲ್ಲಿ ರೇಷ್ಮಾ ಮಾರುತಿ (28) ಸಾವನ್ನಪ್ಪಿದ್ದಾಳೆ. ಮೃತಳು ಮೂಲತಃ ಬಾಚನಗಳು ಸುಲಗತ್ತಿ ತಂಡದ ನಿವಾಸಿಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ದೇವನಾಯಕ ತಾಂಡದ ಸಂತೋಷ್‌ ಹಾಗೂ ಮಾರುತಿ ಎಂಬುವರ ಜೊತೆ ಕಲ್ಪನಾ ಹಾಗೂ ರೇಷ್ಮಾ ಮದುವೆಯಾಗಿತ್ತು. ಮೊದಲು ಇಬ್ಬರ ಕುಟುಂಬಗಳು ಸುಖವಾಗಿ ಇದ್ದವು.

ಇತ್ತೀಚೆಗಷ್ಟೇ ಸಹೋದರರಾದ ಸಂತೋಷ್‌ ಹಾಗೂ ಮಾರುತಿ ಕೆಲಸಕ್ಕಾಗಿ ಕುವೈತ್‌ಗೆ ಹೋಗಿದ್ದರು. ಬಳಿಕ ಕಲ್ಪನಾ ಮತ್ತು ರೇಷ್ಮಾ ಮಧ್ಯೆ ನಿರಂತರ ಜಗಳಗಳು ನಡೆಯುತ್ತಿದ್ದವು. ಶುಕ್ರವಾರ ಬೆಳಗ್ಗೆ ಹೂ ಕಲಹ ಆರಂಭವಾಗಿತ್ತು. ಇಬ್ಬರು ಮಕ್ಕಳೊಂದಿಗೆ ಮನೆಯಿಂದ ಹೊರ ಬಂದಿದ್ದಾರೆ.

Latest Videos

undefined

ಸಲಿಂಗಿ ಕಾಟಕ್ಕೆ ಬೇಸತ್ತು ಯುವಕ ಆತ್ಮಹತ್ಯೆ

ಕಲ್ಪನಾ ತನ್ನಿಬ್ಬರ ಮಕ್ಕಳಾದ ನಿವೇದಿತ (6) ಸಂದೀಪ್‌ (4) ಜೊತೆ ಮೊದಲು ಬಾವಿಗೆ ಹಾರಿದ್ದಾಳೆ. ಈ ಘಟನೆ ಹಿನ್ನೆಲೆಯಲ್ಲಿ ಅದೆಲ್ಲಿ ತನ್ನ ಮೇಲೆ ಅಪವಾದ ಬರುವುದೋ ಎಂದು ರೇಷ್ಮಾ ಸಹ ಬಾವಿಗೆ ಹಾರಿದ್ದಾಳೆ. ಇದನ್ನು ಗಮನಿಸಿದ ಸ್ಥಳೀಯರು ಕಲ್ಪನಾ ಹಾಗೂ ಇಬ್ಬರ ಮಕ್ಕಳನ್ನು ರಕ್ಷಿಸಿದ್ದು. ಚಿಕಿತ್ಸೆಗಾಗಿ ಕಲ್ಬುರ್ಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಲ್ಪನಾಗೆ ನಾಲ್ವರು ಮಕ್ಕಳಿದ್ದಾರೆ.

ಗರ್ಭಿಣಿ ರೇಷ್ಮಾ ನೀರಿನ ಆಳದಲ್ಲಿ ಸಿಲುಕಿಕೊಂಡಿರುವುದರಿಂದ ಹುಡುಕಾಡಿದರೂ ಸಿಗಲಿಲ್ಲ. ಹುಮ್ನಾಬಾದನ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಗೌಡಾಯಿಸಿ ಕಾರ್ಯಚರಣೆ ನಡೆಸಿ ಸಂಜೆ ವೇಳೆಗೆ ರೇಷ್ಮಾ ಮೃತ ದೇಹ ಹೊರ ತೆಗೆಯಿತು.
ಸ್ಥಳೀಯರಾದ ರಾಜಶೇಖರ್‌ ನಾಸಿ. ಸ್ಥಳೀಯರಾದ ಸುರೇಶ್‌ ರಾಥೋಡ್‌. ತುಜಪ್ಪ ಬಿರಾದರ್‌ ಅಷ್ಟಗಿ. ವಿನೋದ್‌ ರಾಠೋಡ್‌. ಮಿಥುನ್‌ ಪವರ್‌. ಅರವಿಂದ್‌ ಜಾದವ್‌ ಕಾರ್ಯಾಚರಣೆಗೆ ಸಹಕಾರ ನೀಡಿದರು. ಪಿಎಸ್‌ಐ ವಿಶ್ವನಾಥ್‌ ಮುದ್ದ ರೆಡ್ಡಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಮಲಾಪುರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!