ಪೆಡ್ಲರ್‌ಗಳ ಸೆರೆ: 32 ಲಕ್ಷ ಮೌಲ್ಯದ ಡ್ರಗ್ಸ್‌ ವಶ

Kannadaprabha News   | Asianet News
Published : Oct 29, 2020, 07:47 AM IST
ಪೆಡ್ಲರ್‌ಗಳ ಸೆರೆ: 32 ಲಕ್ಷ ಮೌಲ್ಯದ ಡ್ರಗ್ಸ್‌ ವಶ

ಸಾರಾಂಶ

ಆರೋಪಿಗಳಿಂದ 1 ಲೀಟರ್‌ ಡ್ರಗ್ಸ್‌ ದ್ರವ ಮತ್ತು 16 ಕೆ.ಜಿ. ಗಾಂಜಾ ಜಪ್ತಿ| ಕೆಲ ದಿನಗಳ ಹಿಂದೆ ಗಾಂಜಾ ಸೇವಿಸುವಾಗ ಸಿಕ್ಕಿಬಿದ್ದಿದ್ದ ವ್ಯಸನಿಗಳು| ಆಂಧ್ರಪ್ರದೇಶದ ವಿಜಯವಾಡದಿಂದ ಕಡಿಮೆ ಬೆಲೆಗೆ ಮಾದಕ ದ್ರವ್ಯ ಖರೀದಿಸಿ ಬೆಂಗಳೂರು ಮತ್ತು ಕೇರಳದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ| 

ಬೆಂಗಳೂರು(ಅ.29): ಮಾದಕ ವಸ್ತು ಮಾರಾಟ ಜಾಲದಲ್ಲಿ ತೊಡಗಿದ್ದ ಇಬ್ಬರು ಪೆಡ್ಲರ್‌ಗಳನ್ನು ಸೆರೆ ಹಿಡಿದಿರುವ ಹಲಸೂರು ಉಪ ವಿಭಾಗದ ಪೊಲೀಸರು, ಅವರಿಂದ 32 ಲಕ್ಷ ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಿದ್ದಾರೆ.

ಬೊಮ್ಮನಹಳ್ಳಿಯ ಮೊಹಮ್ಮದ್‌ ಶಾಕೀರ್‌ ಮತ್ತು ತಾವರೆಕೆರೆಯ ಕೃಷ್ಣಕುಮಾರ್‌ ಬಂಧಿತರಾಗಿದ್ದು, ಆರೋಪಿಗಳಿಂದ 1 ಲೀಟರ್‌ ಡ್ರಗ್ಸ್‌ ದ್ರವ ಮತ್ತು 16 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಎಸ್‌.ಡಿ.ಶರಣಪ್ಪ ಹೇಳಿದ್ದಾರೆ.

ಹನಿಟ್ರ್ಯಾಪ್‌ ದಂಧೆ: ದಂಪತಿ ಸೇರಿ 7 ಮಂದಿ ಬಂಧನ

ಆರೋಪಿಗಳು ಮೂಲತಃ ಕೇರಳದವರಾಗಿದ್ದು, ಹಲವು ದಿನಗಳಿಂದ ನಗರದಲ್ಲಿ ನೆಲೆಸಿದ್ದರು. ಆಂಧ್ರಪ್ರದೇಶದ ವಿಜಯವಾಡದಿಂದ ಕಡಿಮೆ ಬೆಲೆಗೆ ಮಾದಕ ದ್ರವ್ಯ ಖರೀದಿಸಿ ಬೆಂಗಳೂರು ಮತ್ತು ಕೇರಳದಲ್ಲಿ ಹೆಚ್ಚಿನ ಬೆಲೆಗೆ ಮಾರುತ್ತಿದ್ದರು. ಬೈಯಪ್ಪನಹಳ್ಳಿ, ಸಿವಿ ರಾಮನ್‌ನಗರ, ಬಾಗಮನೆ ಟೆಕ್‌ಪಾರ್ಕ್ ಸಮೀಪ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದರು. 

ಕೆಲ ದಿನಗಳ ಹಿಂದೆ ಗಾಂಜಾ ಸೇವಿಸುವಾಗ ವ್ಯಸನಿಗಳು ಸಿಕ್ಕಿಬಿದ್ದಿದ್ದರು. ಆಗ ವಿಚಾರಣೆ ನಡೆಸಿದಾಗ ಅವರು ಪೆಡ್ಲರ್‌ಗಳ ಹೆಸರು ಬಹಿರಂಗಪಡಿಸಿದ್ದರು. ಈ ಸುಳಿವು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ