ಚಿಕ್ಕಮಗಳೂರು: ಬರದ ಬಿಸಿಲಿಗೆ ಸುಟ್ಟು ಹೋದ ರೈತರ ಬದುಕು, ಇಬ್ಬರು ಅನ್ನದಾತರ ಆತ್ಮಹತ್ಯೆ

By Girish Goudar  |  First Published Sep 6, 2023, 10:32 PM IST

ಮಳೆ ಇಲ್ಲದೆ ಮೂರೇ ದಿನಕ್ಕೇ ಜಿಲ್ಲೆಯಲ್ಲಿ ಒಟ್ಟು ಮೂವರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದ್ರೆ, ನೊಂದ ಕುಟುಂಬಕ್ಕೆ ಸಾಂತ್ವಾನ ಹೇಳಬೇಕದ ಸರ್ಕಾರದ ಓರ್ವ ಪ್ರತಿನಿಧಿ ಕೂಡ ಸೂತಕದ ಮನೆ ಹೊಸ್ತಿಲು ತುಳಿದಿಲ್ಲ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಸೆ.06):  ಮಳೆತವರು ಎಂದು ಕರೆಸಿಕೊಳ್ಳೊ ಕಾಫಿನಾಡಲ್ಲಿ ಈ ಬಾರಿ ಶೇ. 43ರಷ್ಟು ಮಳೆ ಕೊರತೆಯಿದೆ. ಜಿಲ್ಲೆಯ ಬಯಲುಸೀಮೆ ಇರ್ಲಿ, ಮಲೆನಾಡು ಭಾಗದಲ್ಲೇ ವಾಡಿಕೆ ಮಳೆ ಸುರಿದಿಲ್ಲ. ಹೀಗಿರುವಾಗ ಬಯಲುಸೀಮೆ ಪರಿಸ್ಥಿತಿ ಕೇಳೋದೇ ಬೇಡ. ಘನಘೋರ. ಆದ್ರು, ಅನ್ನದಾತರು ಮಳೆರಾಯನ ನಂಬಿ ಆಶಾವಾದದಲ್ಲಿ ಲಕ್ಷಾಂತರ ಖರ್ಚು ಮಾಡಿ ಬೆಳೆ ಹಾಕಿದ್ರು. ಮಳೆರಾಯ ಸುಳಿಯುವು ಇಲ್ಲದ ಕಾರಣ ಎರಡೇ ದಿನಕ್ಕೆ ಇಬ್ರು ರೈತ್ರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದ್ರೆ, ದುರಂತ, ತಾಲೂಕು ಆಡಳಿತ, ಶಾಸಕರು ಸೌಜನ್ಯಕ್ಕೂ ಭೇಟಿ ಮಾಡಿ ಕುಟುಂಬಕ್ಕೆ ಸಾಂತ್ವಾನ ಹೇಳಿಲ್ಲ. ಅಲ್ಲದೆ ಮನೆ ಮಾಲೀಕನ ಕಳೆದುಕೊಂಡ ಕುಟುಂಬಸ್ಥರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.

Tap to resize

Latest Videos

undefined

ಬರದ ಬಿಸಿಲಿಗೆ ಸುಟ್ಟು ಹೋದ ರೈತರ ಬದುಕು

ಕಡೂರು ತಾಲೂಕಿನ ಗಿರಿಯಾಪುರ ಗ್ರಾಮದ ರೈತ ಸತೀಶ್ ಹೊಲದಲ್ಲಿ ನೇಣಿಗೆ ಶರಣಾಗಿದ್ರು. ಇದ್ದ ಒಂದು ಎಕರೆಗೆ 11 ಎಕರೆ ಗುತ್ತಿಗೆ ಪಡೆದು ಲಕ್ಷಾಂತರ ಸಾಲ ಮಾಡಿ ಈರುಳ್ಳಿ ಬೆಳೆದಿದ್ದರು. ಆದ್ರೆ, ಮಳೆ ಕೈಕೊಟ್ಟ ಹಿನ್ನೆಲೆ ಈರುಳ್ಳಿ ನೆಲದಿಂದ ಮೇಲಕ್ಕೆ ಬರಲಿಲ್ಲ. ಕೆಲ ವರ್ಷಗಳ ಹಿಂದೆ ಇದ್ದೊಬ್ಬ ಅಣ್ಣನೂ ಸತ್ತಿದ್ದ. ಅವನ ಕುಟುಂಬವನ್ನೂ ಈತನೇ ನೋಡಿಕೊಳ್ಳುತ್ತಿದ್ದ. ಆದರೆ, ಮಳೆ-ಬೆಳೆ ಇಲ್ಲದೆ ಸಾಲದ ಶೂಲಕ್ಕೆ ಬೆದರಿ ನೇಣಿನ ಕುಣಿಕೆಗೆ ಕೊರಳೊಡಿದ್ದ. ಕಣ್ಮುಂದೆ ಇಬ್ಬರು ಮಕ್ಕಳನ್ನ ಕಳ್ಕೊಂಡ ವೃದ್ಧೆ ಕಣ್ಣಿರಿಡ್ತಿದ್ದಾರೆ. ಆದ್ರೆ, ಸರ್ಕಾರವಾಗಲಿ, ಜನನಾಯಕರಾಗಲಿ ಸೌಜನ್ಯಕ್ಕೂ ಆ ಕುಟುಂಬ ಭೇಟಿ ಮಾಡಿ ಸಾಂತ್ವಾನ ಹೇಳಿಲ್ಲ. ಇನ್ನೂ ಕಡೂರಿನಲ್ಲಿ ಇಬ್ಬರು ರೈತರು ಆತ್ಮಹತ್ಯೆಗೆ ಶರಣಾದ್ರೆ, ಎನ್.ಆರ್.ಪುರದಲ್ಲೂ ಓರ್ವ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ. 

ಕಾರಿನಲ್ಲಿ ಬಂದು ಗುದ್ದೋಡಿದ ಗಿಚ್ಚಿ ಗಿಲಿಗಿಲಿ ಚಂದ್ರಪ್ರಭ: ಮಾನವೀಯತೆಗೂ ಕಾರು ನಿಲ್ಲಿಸದೇ ಪರಾರಿ

ಸರ್ಕಾರದ ಓರ್ವ ಪ್ರತಿನಿಧಿ ಕೂಡ ಸೂತಕದ ಮನೆ ಹೊಸ್ತಿಲು ತುಳಿದಿಲ್ಲ : 

ಮಳೆ ಇಲ್ಲದೆ ಮೂರೇ ದಿನಕ್ಕೇ ಜಿಲ್ಲೆಯಲ್ಲಿ ಒಟ್ಟು ಮೂವರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದ್ರೆ, ನೊಂದ ಕುಟುಂಬಕ್ಕೆ ಸಾಂತ್ವಾನ ಹೇಳಬೇಕದ ಸರ್ಕಾರದ ಓರ್ವ ಪ್ರತಿನಿಧಿ ಕೂಡ ಸೂತಕದ ಮನೆ ಹೊಸ್ತಿಲು ತುಳಿದಿಲ್ಲ. ಇನ್ನೂ ಕಡೂರು ತಾಲೂಕಿನ ಚಿಕ್ಕನಲ್ಲೂರು ಗ್ರಾಮದಲ್ಲೂ ಕೂಡ ಪರಮೇಶ್ವರಪ್ಪ ಎಂಬ ರೈತ ಕೂಡ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದರು. ಆದ್ರೆ, ಅವರ ಮನೆಗೂ ಯಾವುದೇ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ ಸಾಂತ್ವಾನ ಹೇಳದಿರೋದು ನೊಂದ ಕುಟುಂಬಳಿಗೆ ಮತ್ತಷ್ಟು ದಿಗಿಲು ಬಡಿದಂತಾಗಿದೆ. ಎರಡೂ ಕುಟುಂಬಕ್ಕೂ ಅವರೇ ಆಧಾರಸ್ತಂಭವಾಗಿದ್ದರು. ಆದರೆ, ಈಗ ಎರಡೂ ಕುಟುಂಬ ಆ ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗಿರೋದು ಕುಟುಂಬದ ಹೆಣ್ಣು ಮಕ್ಕಳಿಗೆ ಬರಸಿಡಲು ಬಡಿದಂತಾಗಿದೆ. ಎರಡು ದಿನದಲ್ಲಿ ಇಬ್ಬರು ರೈತರು ಸತ್ತರು ಒಬ್ಬನೇ ಒಬ್ಬ ಅಧಿಕಾರಿ ಭೇಟಿ ನೀಡಿ ಸಾಂತ್ವಾನ ಹೇಳದಿರೋದು ಈ ಸರ್ಕಾರದಲ್ಲಿ ರೈತರ ಸಾವಿಗೆ ಬೆಲೆ ಇಲ್ವಾ ಎಂಬ ಅನುಮಾನ ಸ್ಥಳಿಯರನ್ನ ಕಾಡುತ್ತಿದೆ. 

ಒಟ್ಟಾರೆ ಸರ್ಕಾರ ಒಂದೊಂದೇ ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ತಂದು ಬೀಗ್ತಿದೆ. ಆದ್ರೆ, ರೈತರು ಬೀದಿಗೆ ಬೀಳ್ತಿದ್ದಾರೆ. ಅತ್ತ ಮಳೆ ಇಲ್ಲ. ಇತ್ತ ಬೆಳೆ ಇಲ್ಲ. ಸಾಲ ತೀರ್ಸೋಕೆ ದಾರಿ ಇಲ್ಲ ಅಂತ ರೈತರು ನೇಣಿನ ಕುಣಿಕೆಗೆ ಕೊರಳಡ್ಡುತ್ತಿದ್ದಾರೆ. ಆದ್ರೆ, ಸರ್ಕಾರ ಮಾತ್ರ ಬರಪೀಡಿತ ತಾಲೂಕು ಅಂತ ಘೋಷಣೆ ಮಾಡೋದಕ್ಕೆ ಸಮಿತಿ, ಉಪಸಮಿತಿ ಅಂತ ಕಾಲಹರಣ ಮಾಡುತ್ತಿದೆ. ಕೂಡಲೇ ಸರ್ಕಾರ ನೊಂದ ರೈತ ಕುಟುಂಬಗಳ ಬೆನ್ನಿಗೆ ನಿಂತು ಬರಪೀಡಿತ ತಾಲೂಕಿನ ನೊಂದ ರೈತರ ನೆರವಿಗೆ ನಿಲ್ಲಬೇಕಿದೆ. ಇಲ್ಲವಾದರೆ, ಸರ್ಕಾರಕ್ಕೆ ರೈತರ ನೋವಿನ ಶಾಪ ತಟ್ದೆ ಇರಲ್ಲ.

ಕರ್ನಾಟಕದ ಪ್ರಸಿದ್ಧ ಬಾಕ್ಸರ್ ಮಲ್ಪೆಯ ವಿರಾಜ್‌ ಮೆಂಡನ್‌ ಆತ್ಮಹತ್ಯೆ:

ರಾಜ್ಯದ ಮಲ್ಪೆಯ ಬಂದರಿನಲ್ಲಿ ಕಣ್ಣಿ ಕೆಲಸ ಮಾಡಿಕೊಂಡು, ಬಿಡುವಿದ್ದಾಗ ಅಭ್ಯಾಸ ಮಾಡಿಕೊಂಡು, ಕರಾವಳಿಗೆ ತೀರಾ ಅಪರಿಚಿತ ಕ್ರೀಡೆಯಾಗಿರವ ಬಾಕ್ಸಿಂಗ್‌ನಲ್ಲಿ ಯಶಸ್ಸುಕಂಡ ಬಾಕ್ಸಿಂಗ್‌ ಚಾಂಪಿಯನ್‌ ವಿರಾಜ್‌ ಮೆಂಡನ್‌ (Boxing Viraj Mendon) ಈಗ ಆತ್ಮಹತ್ಯೆಗೆ ಶರಣಾಗಿದ್ದಾರೆ.

click me!