ಬೆಂಗಳೂರು: ಆನೇಕಲ್ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರ ದಾರುಣ ಸಾವು!

Ravi Janekal   | Kannada Prabha
Published : Nov 09, 2025, 02:10 PM IST
Two boys died after drowning in a lake aneka

ಸಾರಾಂಶ

boys drown in bangalore lake: ಬೆಂಗಳೂರು ಹೊರವಲಯದ ಅತ್ತಿಬೆಲೆ ಸಮೀಪದ ಬಳ್ಳೂರು ಗ್ರಾಮದ ಕೆರೆಯಲ್ಲಿ ಆಟವಾಡಲು ತೆರಳಿದ್ದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕೂಲಿ ಕಾರ್ಮಿಕರ ಮಕ್ಕಳಾದ ಅನಿಕೇತ್ ಕುಮಾರ್ (12) ಮತ್ತು ರೆಹಮಾತ್ ಬಾಬಾ (11) ಮೃತ ಮಕ್ಕಳು.

ಬೆಂಗಳೂರು (ನ. 9): ಆಟವಾಡುತ್ತ ಕೆರೆ ಬಳಿ ತೆರಳಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟ ಘಟನೆ ಬೆಂಗಳೂರು ಹೊರವಲಯದ ಅತ್ತಿಬೆಲೆ ಸಮೀಪದ ಬಳ್ಳೂರು ಗ್ರಾಮದ ಕೆರೆಯಲ್ಲಿ ನಡೆದಿದೆ.

ಅನಿಕೇತ್ ಕುಮಾರ್(12), ರೆಹಮಾತ್ ಬಾಬಾ(11) ಮೃತ ಬಾಲಕರು. ಬಾಲಕ ಅನಿಕೇತ್ ಕುಮಾರ್ ಬಿಹಾರ ಮೂಲದವರು, ರೆಹಮಾತ್ ಬಾಬಾ ಆಂಧ್ರ ಮೂಲದ ಕದಿರಿ ಮೂಲದವರು ಎಂದು ಗುರುತಿಸಲಾಗಿದೆ.

ಕೂಲಿಕಾರರ ಮಕ್ಕಳು:

ಕೂಲಿ ಕೆಲಸ ಮಾಡಿಕೊಂಡಿದ್ದ ಪೋಷಕರು. ನಿನ್ನೆ ಸಂಜೆ ಮನೆಯ ಬಳಿಯೇ ಆಟವಾಡುತ್ತಿದ್ದ ಮಕ್ಕಳು. ಆಟವಾಡುತ್ತಾ ಕೆರೆಯ ಬಳಿ ಹೋಗಿದ್ದಾರೆ. ಈ ವೇಳೆ ಕೆರೆಗೆ ಇಳಿದಿರುವ ಮಕ್ಕಳ ಈಜು ಬಾರದ ಮುಳುಗಿ ಮೃತರಾಗಿದ್ದಾರೆ.

ಸಂಜೆಯಾದರೂ ಮಕ್ಕಳ ಮನೆಗೆ ವಾಪಸ್ ಆಗದ ಮಕ್ಕಳು:

ಆಟವಾಡು ಹೋಗಿದ್ದ ಮಕ್ಕಳು ನಿನ್ನೆ ಸಂಜೆಯಾದರೂ ಮನೆಗೆ ಹಿಂತಿರುಗದಿದ್ದು ಕಂಡು ಪೋಷಕರು ಆತಂಕಗೊಂಡಿದ್ದಾರೆ. ಮನೆ ಸುತ್ತಮುತ್ತ ಸೇರಿ ಗ್ರಾಮದಲ್ಲೆಲ್ಲ ಹುಡುಕಾಟ ನಡೆಸಿದ್ದಾರೆ. ಆದರೆ ಮಕ್ಕಳ ಸುಳಿವು ಸಿಕ್ಕಿರಲಿಲ್ಲ. ಆದರೆ ಇಂದು ಬೆಳಗ್ಗೆ ಕೆರೆಯಲ್ಲಿ ತೇಲುತ್ತಿದ್ದ ಮಕ್ಕಳ ಮೃತದೇಹಗಳು ಕಂಡುಬಂದಿವೆ. ಮೃತದೇಹ ಕಂಡ ಗ್ರಾಮಸ್ಥರು ತಕ್ಷಣ ಅತ್ತಿಬೆಲೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. 

ಮಾಹಿತಿ ತಿಳಿದು ಪೊಲೀಸ್ ತಂಡವು ತಕ್ಷಣ ಸ್ಥಳಕ್ಕೆ ಧಾವಿಸಿ, ಮೃತದೇಹಗಳನ್ನು ಕೆರೆಯಿಂದ ಹೊರತೆಗೆದು ಪೋಸ್ಟ್‌ಮಾರ್ಟಮ್ ಪರೀಕ್ಷೆಗೆ ರವಾನೆ ಮಾಡಿದೆ. ಘಟನೆಗೆ ಸಂಬಂಧಿಸಿದಂತೆ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಬೆಂಗಳೂರು ಮತ್ತೊಂದು ಲವ್ ಜಿಹಾದ್ ಕೇಸ್; ಇಸ್ಲಾಂಗೆ ಮತಾಂತರ ಆಗದಿದ್ರೆ ಹುಡುಗಿಯನ್ನ 32 ಪೀಸ್ ಮಾಡೋದಾಗಿ ಬೆದರಿಕೆ!