ನವದೆಹಲಿ: ಜಗಳ ವಿಕೋಪಕ್ಕೆ ತಿರುಗಿ ವಿದ್ಯಾರ್ಥಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (New Delhi) ನಡೆದಿದೆ. ನವದೆಹಲಿಯ ದ್ವಾರಕಾ ಉತ್ತರ ಪೊಲೀಸ್ ಠಾಣೆ (Dwarka North Police Station)ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಯ ಹೊರಭಾಗದಲ್ಲಿ ಈ ಘಟನೆ ನಡೆದಿದೆ. ಕೊಲೆಯಾದವ ಹಾಗೂ ಕೊಲೆ ಮಾಡಿದವರು ಇಬ್ಬರೂ ಒಂದೇ ಶಾಲೆಯ ವಿದ್ಯಾರ್ಥಿಗಳು ಎಂದು ಶಂಕಿಸಲಾಗಿದೆ. ಸಂತ್ರಸ್ತೆಯನ್ನು ಖುರ್ಷಿದ್ (Khurshid) ಎಂದು ಗುರುತಿಸಲಾಗಿದ್ದು, ಆರೋಪಿ ಸಾಹಿಲ್ (Sahil) ನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.
ಘಟನೆ ಬೆಳಕಿಗೆ ಬಂದ ತಕ್ಷಣ ಸಂತ್ರಸ್ತನನ್ನು ಸಮೀಪದ ದೀನದಯಾಳ್ ಉಪಾಧ್ಯಾಯ ಆಸ್ಪತ್ರೆಗೆ (Deendayal Upadhyay Hospital)ಸಾಗಿಸಲು ಪೊಲೀಸ್ ಅಧಿಕಾರಿಗಳು ಪ್ರಯತ್ನಿಸಿದ್ದಾರೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ದ್ವಾರಕಾ ಹೆಚ್ಚುವರಿ ಡಿಸಿಪಿ ವಿಕ್ರಮ್ ಸಿಂಗ್ (DCP Vikram Singh) ತಿಳಿಸಿದ್ದಾರೆ. ' ವಿದ್ಯಾರ್ಥಿಯ ಸ್ಥಿತಿ ಗಂಭೀರವಾದ ಕಾರಣ ನಾವು ಆತನನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದ್ದೆವು. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಿಸಿದರು ಎಂದು ಅವರು ಹೇಳಿದರು.
undefined
ಧ್ವಜಸ್ಥಂಭ ಕಟ್ಟುವಾಗ ವಿದ್ಯುತ್ ಅವಘಡ, 16 ವರ್ಷದ ವಿದ್ಯಾರ್ಥಿ ಸಾವು
ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಪೊಲೀಸರು ಕೊಲೆಗಾರ ಸಾಹಿಲ್‌ನನ್ನು ಗುರುತಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇಲ್ಲಿಯವರೆಗೆ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಆರೋಪಿಯು ನಾಗಲಿ ಡೈರಿ ಪ್ರದೇಶದ (Nagli Dairy area) ನಿವಾಸಿಯಾಗಿದ್ದು, ಕೊಲೆಗೆ ಕಾರಣ ಇನ್ನೂ ಪತ್ತೆಯಾಗಿಲ್ಲ. 'ನಾವು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದೇವೆ ಮತ್ತು ಇತರ ಕೋನಗಳಲ್ಲಿಯೂ ಸಹ ಪ್ರಕರಣವನ್ನು ಅನ್ವೇಷಿಸುತ್ತಿದ್ದೇವೆ. ತನಿಖೆ ಮುಂದುವರೆದಂತೆ ನಾವು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸುತ್ತೇವೆ' ಎಂದು ಡಿಸಿಪಿ ಹೇಳಿದರು.
ಟ್ರಾಕ್ಟರ್ ಪಲ್ಟಿ, ಎಸ್‌ಎಸ್‌ಎಲ್‌ಸಿ ಹಾಲ್ ಟಿಕೆಟ್ ತರಲು ಹೊರಟಿದ್ದ ವಿದ್ಯಾರ್ಥಿ ಸಾವು
ಇತ್ತೀಚೆಗೆ ಮಕ್ಕಳ ಜಗಳ ವಿಕೋಪಕ್ಕೆ ತಿರುಗಿ ಕೊಲೆಯಂತಹ ಪ್ರಕರಣಗಳು ನಡೆಯುತ್ತಿರುವುದು ಸಮಾಜದ ದುರಂತವಾಗಿದೆ. ಗಾಂಜಾ ಅಫೀಮು, ಸ್ಮಾರ್ಟ್ ಫೋನ್, ಆನ್‌ಲೈನ್ ಗೇಮ್ (online games) ಮುಂತಾದವುಗಳಿಗೆ ದಾಸರಾಗಿರುವ ತಾಳ್ಮೆಯಿಲ್ಲದ್ದ ಇಂದಿನ ಮಕ್ಕಳು ಸಣ್ಣ ಪುಟ್ಟ ಕಾರಣಕ್ಕೆ ಕೊಲೆಯಂತಹ ಅಪರಾಧ ಕೃತ್ಯಗಳಿಗಿಳಿಯುತ್ತಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಅಮೆರಿಕಾದ (USA) ಮಿಚಿಗನ್‌ನಲ್ಲಿ (Michigan) 15 ವರ್ಷದ ವಿದ್ಯಾರ್ಥಿ ನಡೆಸಿದ ಗುಂಡಿನ ದಾಳಿಗೆ ಮೂವರು ವಿದ್ಯಾರ್ಥಿಗಳು ಬಲಿಯಾಗಿ, ಎಂಟು ಮಂದಿ ಗಾಯಗೊಂಡಿದ್ದರು. ಇದು ಆ ವರ್ಷ ಯುಎಸ್ ಶಾಲೆಯೊಂದರಲ್ಲಿ ನಡೆದ ಭೀಕರ ಹತ್ಯೆ ದಾಳಿ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದರು.
ಆಕ್ಸ್‌ಫರ್ಡ್ ಪ್ರೌಢಶಾಲೆಯಲ್ಲಿ ತರಗತಿಗಳು ನಡೆಯುತ್ತಿದ್ದಾಗ ಮಧ್ಯಾಹ್ನದ ವೇಳೆಗೆ ನಡೆಸಿದ ಗುಂಡಿನ ದಾಳಿಯಲ್ಲಿ ಶಾಲಾ ಶಿಕ್ಷಕ ಸೇರಿದಂತೆ ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಓಕ್‌ಲ್ಯಾಂಡ್ ಕೌಂಟಿ ಶೆರಿಫ್ ಕಚೇರಿ ತಿಳಿಸಿದೆ. ದಾಳಿ ನಡೆಸಿದ ವಿದ್ಯಾರ್ಥಿ ನಂತರ ಪೊಲೀಸರಿಗೆ ಶರಣಾಗಿದ್ದಾನೆ.
2017ರಲ್ಲಿ ಬೆಂಗಳೂರಿನ (Bangalore) ಯಲಹಂಕದಲ್ಲಿ (Yelahanka) ಹುಡುಗಿಗೋಸ್ಕರ ವಿದ್ಯಾರ್ಥಿಗಳು ಸಹಪಾಠಿಯನ್ನೇ ಕೊಂದ ಬೆಚ್ಚಿ ಬೀಳಿಸುವ ಘಟನೆ ನಡೆದಿತ್ತು. ಯಲಹಂಕದ ಸರ್ಕಾರಿ ಹೈಸ್ಕೂಲ್‌ನಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಹರ್ಷರಾಜ್ (Harsharaj) ಎಂಬಾತ ಕೊಲೆಯಾಗಿದ್ದ. ಈತನಿಗೆ ಪಿಯು ವಿದ್ಯಾರ್ಥಿನಿಯೊಬ್ಬಳ ಜತೆ ಸ್ನೇಹ ಇತ್ತು. ಈ ಬಗ್ಗೆ ಗೆಳೆಯರಿಗೆ ಅಸಮಾಧಾನವಿತ್ತು ಎನ್ನಲಾಗುತ್ತಿದೆ. ಹೀಗಾಗಿ ಸೋಮವಾರ ಶಾಲಾ ವಾರ್ಷಿಕೋತ್ಸವ ಮುಗಿಸಿ ಹೋಗುವಾಗ ಶಾಲೆಯಿಂದ 100 ಮೀ. ದೂರದಲ್ಲಿ ಗಲಾಟೆ ಶುರುವಾಗಿದೆ. ನಂತರ ಮಾತಿಗೆ ಮಾತು ಬೆಳೆದು ಹರ್ಷರಾಜ್‌ಗೆ ಸಹಪಾಠಿಗಳು ಚಾಕುವಿನಿಂದ ಇರಿದಿದ್ದಾರೆ. ನಂತರ ಆಸ್ಪತ್ರೆಗೆ ದಾಖಲಿಸಿ ವಿದ್ಯಾರ್ಥಿಗಳು ಪರಾರಿಯಾಗಿದ್ದರು. ಗಲಾಟೆ ವೇಳೆ ತಮಗೆ ಆದ ಗಾಯಕ್ಕೆ ಚಿಕಿತ್ಸೆ ಪಡೆಯಲು ಅದೇ ಆಸ್ಪತ್ರೆಗೆ ಬಂದಾಗ ಈ ವಿದ್ಯಾರ್ಥಿಗಳು ಪೊಲೀಸ್ ಬಲೆಗೆ ಬಿದ್ದಿದ್ದರು.