ಚರ್ಚ್ ಫಾಸ್ಟರ್ ಕೈವಾಡ ಎಂದು ಆರೋಪಿಸಿದ ಯುವತಿಯ ಪೋಷಕರು| ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ ಯುವತಿ| ನನ್ನನ್ನ ಯಾರೂ ಬಲವಂತವಾಗಿ ಕರೆದುಕೊಂಡು ಬಂದಿಲ್ಲ. ನಾನೇ ಪಾಸ್ಟರ್ ಅವರನ್ನು ಕರೆದುಕೊಂಡು ಬಂದಿದ್ದೇನೆ ಎಂದ ಯುವತಿ|
ಬಳ್ಳಾರಿ(ಡಿ.28): ಕೆಲಸಕ್ಕೆ ಹೋದ 24ರ ಹರೆಯದ ಯುವತಿ ಇದ್ದಕ್ಕಿದ್ದಂತೆ ಕಾಣೆಯಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಯುವತಿ ಕಾಣೆಯಾದ ಬಗ್ಗೆ ಚರ್ಚ್ ಫಾಸ್ಟರ್ ಕೈವಾಡ ಎಂದು ಯುವತಿಯ ಪೋಷಕರು ಆರೋಪಿಸಿದ್ದರು. ಆದರೆ, ಕಾಣೆಯಾದ ಯುವತಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ನನ್ನನ್ನು ಯಾರೂ ಬಲವಂತವಾಗಿ ಕರೆದುಕೊಂಡು ಬಂದಿಲ್ಲ. ನಾನೇ ಪಾಸ್ಟರ್ ಅವರನ್ನು ಕರೆದುಕೊಂಡು ಬಂದಿದ್ದೇನೆ ಎಂದು ಹೇಳಿದ್ದಾಳೆ. ಈ ಮೂಲಕ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಏನಿದು ಪ್ರಕರಣ?
ಬಳ್ಳಾರಿ ಸಮೀಪದ ಗುಗ್ಗರಟ್ಟಿಯ ನಿವಾಸಿ ಬಸವರಾಜ್ ಹಾಗೂ ವಿಜಯಲಕ್ಷ್ಮಿ ದಂಪತಿಯ ಪುತ್ರಿಯೇ ಕಾಣೆಯಾದ ಯುವತಿಯಾಗಿದ್ದಾಳೆ. ಈಕೆ ಬಳ್ಳಾರಿ ನಗರದ ಬೈಕ್ ಶೋ ರೂಂವೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಡಿ. 16 ರಂದು ಕೆಲಸಕ್ಕೆ ಹೋಗಿದ್ದ ಯುವತಿ ಸಂಜೆಯಾದರು ಮನೆಗೆ ಬಂದಿರಲಿಲ್ಲ.
ಅಣ್ಣ, ತಮ್ಮಂದಿರ ವರಿಸಿದ ಅಕ್ಕ, ತಂಗಿಯರು: ಮೊದಲ ರಾತ್ರಿಯೇ ಅನಿರೀಕ್ಷಿತ ಘಟನೆ!
ಯುವತಿ ನಾಪತ್ತೆಯಾಗಿದ್ದರ ಹಿಂದೆ ಚರ್ಚ್ ಫಾಸ್ಟರ್ 50 ವಯಸ್ಸಿನ ರವಿಕುಮಾರ್ ಅಲಿಯಾಸ್ ಜುಟ್ಲ ರವಿ ಕೈವಾಡವಿದೆ ಎಂದು ಯುವತಿಯ ಪೋಷಕರು ಬಳ್ಳಾರಿ ಮಹಿಳಾ ಠಾಣೆಯಲ್ಲಿ ಫಾಸ್ಟರ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಪೋಷಕರ ವಿರೋಧದ ನಡುವೆಯೂ ನಾಪತ್ತೆಯಾದ ಯುವತಿ ಪ್ರತಿ ಭಾನುವಾರ ಚರ್ಚ್‌ಗೆ ಹೋಗುವ ರೂಢಿ ಹೊಂದಿದ್ದಳು ಹೇಳಲಾಗುತ್ತಿದೆ. ಯುವತಿಯ ಜತೆ ಫಾಸ್ಟರ್ ರವಿಕುಮಾರ್ ಸಲುಗೆಯಿಂದ ಇದ್ದರು ಎಂದು ಹೇಳಲಾಗುತ್ತಿದೆ.
ಇದೀಗ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ ಯುವತಿ ನಾನು ಚರ್ಚ್‌ಗೆ ಹೋಗೋದನ್ನು ತಡೆಯಲು ಪೋಷಕರಿಂದ ಫಾಸ್ಟರ್ ಮೇಲೆ ಆರೋಪ ಮಾಡುತ್ತಿದ್ದಾರೆ. ನನ್ನನ್ನ ಯಾರೂ ಬಲವಂತವಾಗಿ ಕರೆದುಕೊಂಡು ಬಂದಿಲ್ಲ. ನಾನೇ ಪಾಸ್ಟರ್ ಅವರನ್ನು ಕರೆದುಕೊಂಡು ಬಂದಿದ್ದೇನೆ. ಚರ್ಚ್‌ಗೆ ಹೋಗೋದು ನನ್ನ ಇಚ್ಛೆ, ಇದನ್ನು ತಡೆಯುವ ನೆಪದಲ್ಲಿ ನನ್ನ ಕುಟುಂಬದ ಸದಸ್ಯರು ನನ್ನ ಮತ್ತು ಪಾಸ್ಟರ್ ಮಧ್ಯೆ ಅಕ್ರಮ ಸಂಬಂಧ ಕಟ್ಟಿದ್ದಾರೆ. ಈ ಕಾರಣಕ್ಕೆ ಪಾಸ್ಟರ್ ಜೊತೆಗೆ ನಾನೇ ಬಂದು ಮದುವೆಯಾಗಿದ್ದೇನೆ. ನಮ್ಮನ್ನು ಬದುಕಲು ಬಿಡಿ ಯುವತಿ ಹೇಳುತ್ತಿದ್ದಾಳೆ.